ಜೈಪುರ:ಕಸಿನ್​ ಬ್ರದರ್ಸ್​, ಸಿಸ್ಟರ್ಸ್​ ಅಂದರೆ ಅದೆಷ್ಟು ಪ್ರೀತಿ ಇರುತ್ತದೆಯಲ್ಲವೇ? ಆದರೆ ಈ ಪ್ರಕರಣದಲ್ಲಿ ಎಲ್ಲವೂ ಸಂಪೂರ್ಣ ಬದಲು. ಅಂಕಲ್​ಮೇಲಿದ್ದ ದ್ವೇಷದಿಂದಾಗಿ ಅಣ್ಣನೊಬ್ಬ ತನ್ನ ಕಸಿನ್​ ಬ್ರದರ್​​ನ್ನು ಕೊಂದು ರಕ್ತ ಹೀರಿರುವ ಘಟನೆ ರಾಜಸ್ಥಾನದ ಸಿಕರ್​ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:75 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪಾಪಿ; ಒಡವೆಗಳೊಂದಿಗೆ ಪರಾರಿಯಾದ
10 ವರ್ಷದ ಬಾಲಕ ಉತ್ತಮ್​ ಅಲೋರಿಯಾ ಶುಕ್ರವಾರದಂದು ಯಾವುದೋ ಕಾರಣಕ್ಕೆ ಶಾಲೆಯ ಕಡೆ ಹೊರಟಿದ್ದ. ಈ ವೇಳೆ ಆತನಿಗೆ ಎದುರಾದ ದೊಡ್ಡಪ್ಪನ ಮಗ ಕೈಲಾಶ್​ ಚಂದ್​ ಬಾಲಕನ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾನೆ. ಇಬ್ಬರು ಅಣ್ಣ ತಮ್ಮಂದಿರ ನಡುವೆ ಜಗಳ ನಡೆಯುತ್ತಿದ್ದದ್ದನ್ನು ತಪ್ಪಿಸುವ ಬದಲು ಸ್ಥಳೀಯರು ಅದನ್ನು ವಿಡಿಯೋ ಮಾಡಿಕೊಳ್ಳಲಾರಂಭಿಸಿದ್ದಾರೆ. ಜಗಳ ಹೆಚ್ಚಾಗಿದ್ದು, ಕೈಲಾಶ್​ ಉತ್ತಮ್​ನ ಕತ್ತನ್ನು ಬ್ಲೇಡ್​ನಿಂದ ಕತ್ತರಿಸಿದ್ದಾನೆ. ನಂತರ ಆತನ ರಕ್ತವನ್ನು ಬಾಯಿಯಿಂದ ಹೀರಲಾರಂಭಿಸಿದ್ದಾನೆ. ಈ ದೃಶ್ಯವನ್ನು ಕಂಡು ಭಯಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಮದುವೆ ಮನೆಯಲ್ಲಿ ವಧುವಿನ ಕೋಣೆಯತ್ತ ಗುಂಡಿನ ದಾಳಿ! ಬೆಚ್ಚಿಬಿದ್ದ ಕುಟುಂಬಸ್ಥರು
ಕೈಲಾಶ್​ಗೆ ಅವರ ಚಿಕ್ಕಪ್ಪನ ಬಗ್ಗೆ ಸಾಕಷ್ಟು ದ್ವೇಷವಿತ್ತಂತೆ. ಅವರ ಚಿಕ್ಕಪ್ಪಮ ಚಿಕ್ಕ ವಯಸ್ಸಿನಿಂದಲೂ ಕೈಲಾಶ್​ಗೆ ತಮಾಷೆ ಮಾಡುತ್ತಿದ್ದರಂತೆ. ನಿನಗೆ ಏನೂ ಗೊತ್ತಿಲ್ಲ, ಏನೂ ಬರಲ್ಲ ಎಂದು ಹೀಯಾಳಿಸುತ್ತಿದ್ದರಂತೆ. ಈ ವಿಚಾರವಾಗಿ ಅಪಾರವಾದ ದ್ವೇಷ ಬೆಳೆಸಿಕೊಂಡಿದ್ದ ಕೈಲಾಶ್ ಉತ್ತಮ್​ನನ್ನು ಕೊಲೆ ಮಾಡಬೇಕು ಎಂದು ಬಹಳ ಹಿಂದೆಯೇ ನಿರ್ಧರಿಸಿದ್ದನಂತೆ. ಅದರಂತೆ ಶುಕ್ರವಾರ ಕೊಲೆ ಮಾಡಿದ್ದಾನೆ. (ಏಜೆನ್ಸೀಸ್​)
ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
