ಅಹಮದಾಬಾದ್:ಆತಂಕಕಾರಿ ಘಟನೆಯೊಂದರಲ್ಲಿ, 15 ವರ್ಷದ ಬಾಲಕಿಯ ಮೇಲೆ ಆಕೆಯ 30 ವರ್ಷದ ಸೋದರ ಮಾವ ಅತ್ಯಾಚಾರ ಎಸಗಿದ್ದು, ಅಪ್ರಾಪ್ತ ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ.  ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಸಂತ್ರಸ್ತ ಬಾಲಕಿ ಚೊಟ್ಟಾ ಉದಯಪುರದವಳು. ತಂದೆ ಇಲ್ಲದ ಆಕೆ ತನ್ನ ತಾಯಿ, ಅಕ್ಕ, ಸಹೋದರ ಸೇರಿದಂತೆ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಎರಡು ವರ್ಷಗಳ ಹಿಂದೆ ಆಕೆಯ ಸಹೋದರಿಯನ್ನು ಮದುವೆಯಾದ ನಂತರ ಆರೋಪಿ ಅದೇ ಕುಟುಂಬದೊಂದಿಗೆ ವಾಸಿಸಲಾರಂಭಿಸಿದ. ಹಿರಿಯ ಸಹೋದರಿ ಎಂಟು ತಿಂಗಳ ಹಿಂದೆ ಗರ್ಭಿಣಿಯಾದಾಗ ಆರೋಪಿಯ ಕಣ್ಣು ತಂಗಿಯ ಮೇಲೆ ಬಿತ್ತು. ತನ್ನ ಸೋದರ ಮಾವನಿಂದ ಹಲವು ಬಾರಿ ಅತ್ಯಾಚಾರಕ್ಕೊಳಗಾಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ.
ಇದನ್ನೂ ಓದಿ:ಪೂರ್ವಭಾವಿ ಪರೀಕ್ಷೆಗೆ ಕೇಂದ್ರ ಬದಲಾವಣೆಗೆ ಅವಕಾಶ ಕಲ್ಪಿಸಿದೆ ಯುಪಿಎಸ್​ಸಿ
ಅವನು ಮೊದಲ ಬಾರಿ ಇಂಥ ಘೋರ ಕೃತ್ಯ ಎಸಗಿದಾಗ, ಅವಳು ತನ್ನ ಅಕ್ಕನಿಗೆ ತಿಳಿಸಿದಳು ಇದೇ ವಿಷಯವಾಗಿ ದಂಪತಿ ಮಧ್ಯೆ ವಾಗ್ವಾದ ನಡೆದಿತ್ತು. ನಂತರ ಮತ್ತೆ ಇಂಥ ಕೃತ್ಯವೆಸಗುವುದಿಲ್ಲ ಎಂದು ಆರೋಪಿ ಭರವಸೆ ನೀಡಿದ್ದ. ಅದರ ಹೊರತಾಗಿಯೂ ಅವನು ಅವಳ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ. ಅಷ್ಟೇ ಅಲ್ಲದೆ ಆ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಸಹೋದರಿಯರು ಭಯಭೀತರಾಗಿದ್ದರು.
ಕೆಲವು ದಿನಗಳ ನಂತರ, ಆ ಬಾಲಕಿಗೆ ಹೊಟ್ಟೆ ನೋವು ಶುರುವಾಯಿತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ಅಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ದೃಢ ಪಡಿಸಿದರು. ಇದಲ್ಲದೆ, ಅದು ಗರ್ಭಧಾರಣೆಯ ಮುಂದುವರಿದ ಹಂತವಾಗಿರುವುದರಿಂದಾಗಿ ಗರ್ಭಪಾತ ಮಾಡುವುದಕ್ಕೂ ಅವರು ನಿರಾಕರಿಸಿದರು.ಆಕೆಯ ತಾಯಿ ಅಪರಾಧ ಪ್ರಕರಣ ವರದಿ ಮಾಡಲು ಅಭಯಂ ಸಹಾಯವಾಣಿಯನ್ನು ಕರೆ ಮಾಡಿದಾಗ ಸಹಾಯವಾಣಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಇದನ್ನೂ ಓದಿ:ಹೆದ್ದಾರಿ ಯೋಜನೆಗಳಲ್ಲಿ ಚೀನಿ ಕಂಪನಿಗಳಿಗೆ ‘ನೋ ಎಂಟ್ರಿ’ : ಸಚಿವ ಗಡ್ಕರಿ
ಸಹಾಯವಾಣಿಯ ತಂಡ ಬರುವ ಮುನ್ನವೇ ಆರೋಪಿ ಪರಾರಿಯಾಗಿದ್ದಾನೆ. ಅಪ್ರಾಪ್ತೆಗೆ ಸಮಾಲೋಚನೆ ನಡೆಸಲಾಗಿದ್ದು, ದಾಭೋಯ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೋಕ್ಸೊ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪರಾಧಿಗಾಗಿ ಶೋಧಕಾರ್ಯ ನಡೆದಿದೆ.
ಹಳೆಯ ಪ್ರೇಮಿ ಹತ್ತಾರು ಬಾರಿ ಇರಿದು ಆಕೆಯನ್ನು ಕೊಂದ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − eight =
Remember me
