ಕೋತಗುಡೆಮ್​:ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬಿಜಿಯಾಗಿರುತ್ತಿದ್ದ ಸಹೋದರಿಯ ಮೇಲೆ ಅಸಮಾಧಾನ ಹೊಂದಿದ್ದ ಸಹೋದರ ಕೊನೆಗೂ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದ ಕೋತಗುಡೆಮ್​ನಲ್ಲಿ ಸೋಮವಾರ ನಡೆದಿದೆ.
ಅಜ್ಮೀರಾ ಸಿಂಧು (21) ಅಲಿಯಾಸ್​ ಸಾಂಘವಿ ಕೊಲೆಯಾದ ಸಹೋದರಿ. ಭದ್ರಾದ್ರಿ ಕೋತಗುಡೆಮ್​ ಜಿಲ್ಲೆಯ ಯೆಲ್ಲಂದು ಮಂಡಲದ ರಾಜೀವನಗರದಲ್ಲಿ ಘಟನೆ ನಡೆದಿದೆ.
ಪೊಲೀಸ್​ ಮೂಲಗಳ ಪ್ರಕಾರ ಕೊಲೆಯಾದ ಸಿಂಧು, ಮಹಾಬೂಬಬಾದ್​ನ ತೆಲಂಗಾಣ ಆರೋಗ್ಯ ಇಲಾಖೆಯಲ್ಲಿ ಸಹಾಯಕ ನರ್ಸ್​ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರುತ್ತಿದ್ದಳು. ಆಗಾಗ ಯೂಟ್ಯೂಬ್​ಗೆ ರೀಲ್ಸ್​ ಪೋಸ್ಟ್​ ಮಾಡುತ್ತಿದ್ದರು. ಆದರೆ, ಇದು ಆಕೆಯ ಸಹೋದರ ಹರಿಲಾಲ್​ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು.
ಇದನ್ನೂ ಓದಿ:ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್! ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಹೀಗಿವೆ…
ಪೊಲೀಸರ ಪ್ರಕಾರ ಸೋಮವಾರ ರಾತ್ರಿಯೂ ಇದೇ ವಿಚಾರಕ್ಕೆ ಸಿಂಧು ಮತ್ತು ಹರಿಲಾಲ್​ ನಡುವೆ ಜಗಳ ನಡೆದಿದೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಹರಿಲಾಲ್​, ಬಲವಾದ ವಸ್ತುವಿನಿಂದ ಸಿಂಧು ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಿಂಧುಳನ್ನು ತಕ್ಷಣವೇ ಖಮ್ಮಮ್ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿಂದ ವೈದ್ಯರು ಅವಳನ್ನು ವಾರಂಗಲ್‌ನ ಆಸ್ಪತ್ರೆಗೆ ಕಳುಹಿಸಿದರು. ಆದರೆ, ಸಿಂಧು ಮಾರ್ಗಮಧ್ಯೆಯೇ ಅಸುನೀಗಿದಳು.
ಸಾವಿನ ನಂತರವೂ ಸಿಂಧು ಅವರ ಕುಟುಂಬ ಸಾವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಮಂಗಳವಾರ ಬೆಳಗ್ಗೆ ಸಿಂಧು ಅವರದ್ದು ಸಹಜ ಸಾವು ಎಂದು ಬಿಂಬಿಸಿದ ಕುಟುಂಬಸ್ಥರು ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಂತೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ಬಳಿಕ ಹರಿಲಾಲ್​ ಎಸ್ಕೇಪ್​ ಆಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಪಾರ್ಕ್​ ಮಾಡಿದ್ದ ಬುಲೆಟ್​ನಲ್ಲಿ ಪೆಟ್ರೋಲ್​ ಕಳುವು: 10 ರೂ. ಇಟ್ಟು ಬೇರೆ ದಾರಿ ಇರ್ಲಿಲ್ಲ ಎಂದ ಅಪರಿಚಿತ

Kargil Vijay Diwas 2023: “ನಿಮ್ಮಿಂದಾಗಿ ನಾವು ಬದುಕುತ್ತಿದ್ದೇವೆ”… ಭಾರತೀಯ ಸೇನೆಯ ಶೌರ್ಯಕ್ಕೆ ಸೆಲೆಬ್ರಿಟಿಗಳಿಂದ ಸೆಲ್ಯೂಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eighteen =
Remember me
