ಅಹಮದಾಬಾದ್: ಸಹೋದರನ ವಿಚ್ಛೇದನದ ಹಿಂದೆ ಸಹೋದರಿಯ ಕೈವಾಡವಿದೆ ಎಂದು ಶಂಕಿಸಿ ಇಬ್ಬರು ಸಹೋದರರು ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಹೋದರಿಯ ಮನೆಗೆ ಬಂದು, ಆಭರಣ ಕದ್ದು, ಆಕೆಯನ್ನು ಇರಿದು ಕೊಲೆಗೈದ ಘಟನೆ ನಡೆದಿದೆ.ಆಗಸ್ಟ್ 4 ರಂದು ಅಹಮದಾಬಾದ್‌ನ ಸರಿತಾ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಸತ್ತಿದ್ದಾಳೆ ಎಂದುಕೊಂಡಾಕೆ ಗಂಡ, ಮಗುವಿನೊಂದಿಗೆ ಪ್ರತ್ಯಕ್ಷ: ಮಾಡದ ಹತ್ಯೆಗೆ ಮೂವರಿಗೆ ಜೈಲುಶಿಕ್ಷೆ
ಇಬ್ಬರು ಆರೋಪಿಗಳನ್ನು ಸಾಜಿಜುಲ್ ಶೇಖ್ ಮತ್ತು ರೋಜೋಲಿ ಶೇಖ್ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯನ್ನು ಸೌಕಿ ಅಲಿಯಾಸ್ ಮೀರಾ ರಾಮಸ್ವರೂಪ್ ಸಾಧು ಎಂದು ಗುರುತಿಸಲಾಗಿದೆ.ಆಗಸ್ಟ್ 2 ರಂದು ರೋಜೋಲಿ ಮತ್ತು ಸಾಜಿಜುಲ್ ಪರಸ್ಪರ ಭೇಟಿಯಾಗಿದ್ದರು. ಸಾಜಿಜುಲ್ ವಿಚ್ಛೇದನದ ಹಿಂದಿನ ಕಾರಣ ಸೌಕಿ ಎಂದು ಆರೋಪಿಸಿ ಇಬ್ಬರೂ ಸೌಕಿಯನ್ನು ಕೊಲ್ಲುವ ನಿರ್ಧಾರ ಕೈಗೊಂಡರು. ಮದುವೆಗೆ ಇನ್ನೊಬ್ಬ ಹುಡುಗಿಯನ್ನು ಹುಡುಕಲು ಸಾಧ್ಯವಾಗದ ಕಾರಣ ಸಾಜಿಜುಲ್ ತನ್ನ ಸಹೋದರಿಯ ಮೇಲೆ ಕೋಪಗೊಂಡಿದ್ದ.
ಇದನ್ನೂ ಓದಿ:ಚಿನ್ನದ ಜತೆ ಮಗಳ ಅಪಹರಿಸಿದರೆಂದು ಗೋಳಾಡಿದ ಅಪ್ಪ, ಸತ್ಯ ತಿಳಿದು ಬೇಸ್ತು ಬಿದ್ದ!
ಸಾಜಿಜುಲ್ ಮೊದಲು ಮದುವೆಯಾಗದ ಹೊರತು ರೋಜೋಲಿಯು ಮದುವೆಯಾಗಲು ಸಾಧ್ಯವಿರಲಿಲ್ಲ. ಸೌಕಿ ಎರಡು ಬಾರಿ ಮದುವೆಯಾಗಿದ್ದಳು. ಸೌಕಿಯ ಮೊದಲ ಮದುವೆ ರಾಕೇಶ್ ನೇಪಾಳಿಯೊಂದಿಗೆ ಆಗಿತ್ತು. ರಾಕೇಶ್ ತೀರಿಕೊಂಡಾಗ, ಆಕೆ ರಾಮ್​​ಸ್ವರೂಪ್ ಸಾಧುನನ್ನು ಮದುವೆಯಾದಳು.ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಾಜಿಜುಲ್ ಮತ್ತು ರೋಜೋಲಿ ತಮ್ಮ ಅಕ್ಕನ ಮನೆಗೆ ಹೋದರು.ರಕ್ಷಾ ಬಂಧನದ ನಂತರ, ಸೌಕಿ ನೀಡಿದ ಚಹಾ ಕುಡಿದು ಇಬ್ಬರು ಸಹೋದರರು ಆಕೆಯನ್ನು ಇರಿದು ಕೊಲೆ ಮಾಡಿ ಬೀರು ತೆರೆದು 6 ಲಕ್ಷ ರೂ.ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾರೆ. ಆರೋಪಿಗಳೆರಡನ್ನೂ ಭಾನುವಾರ ಬಂಧಿಸಲಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ನಾಟಕ; ಬಿಜೆಪಿ ಸೇರುತ್ತಿಲ್ಲ ಎನ್​ಸಿಪಿಯ 12 ಶಾಸಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
