ಹೈದರಾಬಾದ್​:ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿಯು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸರಣಿ ಆಘಾತಗಳನ್ನು ಎದುರಿಸುತ್ತಿದೆ. ಈಗಾಗಲೇ ಹಲವು ಶಾಸಕರು ಪಕ್ಷ ತೊರೆದಿದ್ದಾರೆ. ಎಂಎಲ್ಸಿಗಳಾದ ದಂಡೆ ವಿಠ್ಠಲ್, ಎಂಎಸ್ ಪ್ರಭಾಕರ್, ಭಾನು ಪ್ರಸಾದ್, ಬಸವರಾಜು ಸರಯ್ಯ, ಯೊಗ್ಗೆ ಮಲ್ಲೇಶಂ, ಬೊಗ್ಗರಪು ದಯಾನಂದ್ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ
ಇದನ್ನೂ ಓದಿ:ದೇವರನಾಡಲ್ಲಿ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ.. ರಸ್ತೆಗಳು ಬಂದ್​ – ಯಾತ್ರಾರ್ಥಿಗಳಿಗೆ ತಟ್ಟಿದ ಬಿಸಿ
ಶುಕ್ರವಾರ ಬೆಳಗ್ಗೆ ಅಮಾವಾಸ್ಯೆ ನಿಮಿತ್ತ ಗುರುವಾರ ರಾತ್ರಿ 1 ಗಂಟೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ತೆಲಂಗಾಣ ಉಸ್ತುವಾರಿ ದೀಪದಾಸ್ ಮುನ್ಷಿ ಅವರ ಸಮ್ಮುಖದಲ್ಲಿ ಈ ಮುಖಂಡರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು.
ಗುರುವಾರ ರಾತ್ರಿ ಹೈದರಾಬಾದ್ ದಸಪಲ್ಲ ಹೋಟೆಲ್‌ನಲ್ಲಿ ಸಭೆ ನಡೆಸಿದ ಈ ಎಂಎಲ್‌ಸಿಗಳು, ನಂತರ ರೇವಂತ್ ರೆಡ್ಡಿ ನಿವಾಸಕ್ಕೆ ಆಗಮಿಸಿದರು. ಸಿಎಂ ರೇವಂತ್ ರೆಡ್ಡಿ ದೆಹಲಿ ಭೇಟಿ ಮುಗಿಸಿದ ಬಳಿಕ ಆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಸ್ಕಾರ್ಫ್ ಹಾಕಿ ಪಕ್ಷಕ್ಕೆ ಆಹ್ವಾನಿಸಿದರು. ಈ ವೇಳೆ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಸುದರ್ಶನ ರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಭಾರತ ರಾಷ್ಟ್ರ ಸಮಿತಿಯ ಹಲವು ಶಾಸಕರು ಈಗಾಗಲೇ ಪಕ್ಷ ಬದಲಿಸಿರುವುದು ಮರೆಯುವ ಮುನ್ನವೇ ಆ ಪಕ್ಷಕ್ಕೆ ಸೇರಿದ ಆರು ಎಂಎಲ್ ಸಿಗಳು ಕಾಂಗ್ರೆಸ್​ ಸೇರ್ಪಡೆಯಾಗಿರುವುದು ಬಿಆರ್ ಎಸ್ ಪಕ್ಷಕ್ಕೆ ಬಲವಾದ ಪೆಟ್ಟು ನೀಡಿದೆ.
ತೆಲಂಗಾಣ ವಿಧಾನ ಪರಿಷತ್ತು 40 ಸದಸ್ಯರನ್ನು ಹೊಂದಿದೆ. ರಾಜ್ಯಪಾಲರ ಕೋಟಾದಲ್ಲಿ ಎರಡು ಎಂಎಲ್ ಸಿ ಸ್ಥಾನಗಳು ಖಾಲಿ ಇವೆ. ಟಿಆರ್​ಎಸ್​ನ ಒಟ್ಟು 6 ಎಂಎಲ್ ಸಿಗಳ ಸೇರ್ಪಡೆಯಿಂದ ಕಾಂಗ್ರೆಸ್ ಬಲ 13ಕ್ಕೆ ತಲುಪಿದೆ. ಪ್ರಸ್ತುತ ಪರಿಷತ್ತಿನಲ್ಲಿ ಬಿಆರ್‌ಎಸ್ ಪಕ್ಷ 29 ಸದಸ್ಯರ ಬಲವನ್ನು ಹೊಂದಿದೆ. ಇವರಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಪರಿಷತ್ತಿನಲ್ಲಿ ಪಕ್ಷದ ಬಲ 21ಕ್ಕೆ ಕುಸಿದಿದೆ.
‘ನೀಟ್​ ರದ್ದು ಬೇಡ’: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 56 ನೀಟ್ ರ‍್ಯಾಂಕರ್‌ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
