ಚೆನ್ನೈ:ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈ ಪುಲಿಯಂಥೋಪ್​ನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇ ರಮೇಶ್​ ಬಾಬು (34) ಕೊಲೆಯಾದವ. ಈತ ಹಳೆಯ ರೌಡಿ ಶೀಟರ್​. ಕೊಲೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಕೊಲೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಇಕ್ಕಾಟದ ರಸ್ತೆಯಲ್ಲಿ ಮಕ್ಕಳು ಅವರ ಮನೆಯ ಬಳಿ ಆಟವಾಡುತ್ತಾ ನಿಂತಿದ್ದಾಗ ರಮೇಶ್​ ಬಾಬುವನ್ನು ಅಟ್ಟಾಡಿಸಿಕೊಂಡು ಬರುವ ದುಷ್ಕರ್ಮಿಗಳು ರಮೇಶ್​ನನ್ನು ಕೆಡವಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗುತ್ತಾರೆ. ಈ ದೃಶ್ಯವನ್ನು ನೋಡಿದ ಸ್ಥಳೀಯ ಮಹಿಳೆಯರು ಸಹ ಬೆಚ್ಚಿಬಿದ್ದಾರೆ.
Brutal murder at Pulianthope, Chennai..⁦@TOIChennai⁩pic.twitter.com/wEz7yflfn9
— SINDHU KANNAN (@SindhukTOI)September 9, 2020

ಇದನ್ನೂ ಓದಿ:ಅಮೆಜಾನ್​ಗೆ ಪೈಪೋಟಿಯಲ್ಲ, ಪಾಲು ಕೊಡ್ತಿದಾರೆ ಅಂಬಾನಿ; 1.46 ಲಕ್ಷ ಕೋಟಿ ಹೂಡಿಕೆಗೆ ಮಾತುಕತೆ…!
ಮೂಲಗಳ ಪ್ರಕಾರ ರಮೇಶ್​ ಬಾಬು ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದ. ಅಂದು ರಾತ್ರಿ 9.30ರ ಸುಮಾರಿಗೆ ಗುರುಸ್ವಾಮಿ ನಗರವನ್ನು ದಾಟುವಾಗ ದುಷ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ. ಈ ವೇಳೆ ರಮೇಶ್​ ಓಡಿ ಹೋಗಲು ಯತ್ನಿಸಿದಾದರೂ ಅದು ಸಾಧ್ಯವಾಗದೇ ಗಂಭೀರ ಗಾಯಗಳಿಂದ ನರಳಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ 8 ಆರೋಪಿಗಳನ್ನು ವಿಜಯ್​ಕುಮಾರ್​​ (31), ವಿಘ್ನೇಶ್​ ಕುಮಾರ್​ (26), ಶಂಕರ್​ (40), ಅಭಿನೇಶ್​ (24), ಸೂರ್ಯ (26), ರಾಕೇಶ್​ ಕುಮಾರ್​ (25), ಸತ್ಯ (24) ಮತ್ತು ಶರತ್​ ಕುಮಾರ್​ (30) ಎಂದು ಗುರುತಿಸಲಾಗಿದ್ದು, ಪರಾರಿಯಾಗಿದ್ದವರಲ್ಲಿ ಕೆಲವರನ್ನು ಚೆನ್ನೈನ ರೆಡ್​ ಹಿಲ್ಸ್​ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
