ಲಖನೌ:ಗಂಡನ ಖಾಸಗಿ ಅಂಗವನ್ನು ಸಿಗರೇಟ್​ನಿಂದ ಸುಟ್ಟು, ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶ ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತಳನ್ನು ಮೆಹೆರ್​ ಜಹಾನ್​ ಎಂದು ಗುರುತಿಸಲಾಗಿದೆ. ಈಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಸಿಯೋಹರಾ ಚಕ್ ಮಹಮೂದ್ ಸಾನಿ ಗ್ರಾಮದ ನಿವಾಸಿ. ಸಂತ್ರಸ್ತ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಪತ್ನಿಯ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಮನ್ನನ್​​ ಸೈದಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ರಹಸ್ಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಮೂಲಕ ಪತ್ನಿಯ ದೌರ್ಜನ್ಯ ಬಯಲಾಗಿದೆ. 2023ರ ನವೆಂಬರ್ 17ರಂದು ಇಬ್ಬರೂ ವಿವಾಹವಾದರು. ಮದುವೆಯ ನಂತರ ತನ್ನ ಪತ್ನಿ ಮದ್ಯಪಾನ ಹಾಗೂ ಸಿಗರೇಟು ಸೇವನೆ ಮಾಡುತ್ತಿರುವುದು ಗೊತ್ತಾಗಿದೆ. ಇದನ್ನು ಪತಿ ವಿರೋಧಿಸಿದಾಗ, ಮೆಹೆರ್ ಜಗಳವಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ, ಕೊಲ್ಲಲು ಪ್ರಯತ್ನಿಸಿದಳು ಎನ್ನಲಾಗಿದೆ.
ಕುಡಿದ ಅಮಲಿನಲ್ಲಿ ಪತಿ ಮನ್ನನ್​ಗೆ ಮೆಹೆರ್ ಹಲವು ಬಾರಿ ಕಿರುಕುಳ ನೀಡಿದ್ದಾಳೆ. ಪತ್ನಿಯ ಮುಖವಾಡವನ್ನು ಎಲ್ಲರ ಎದರು ಬಿಚ್ಚಿಡಬೇಕೆಂಬ ಉದ್ದೇಶದಿಂದಲೇ ಮನ್ನನ್ ಸೈದಿಯ ರಹಸ್ಯವಾಗಿ ಮನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಏಪ್ರಿಲ್ 29 ಮತ್ತು 24ರಂದು ಮೆಹೆರ್, ತನ್ನ ಪತಿಗೆ ಡ್ರಗ್ಸ್ ನೀಡಿ ಎರಡೂ ಕೈಗಳನ್ನು ಕಟ್ಟಿ ಗಂಡನ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೆಹೆರ್​ ಕೃತ್ಯ ಇಷ್ಟಕ್ಕೆ ನಿಲ್ಲುವುದಿಲ್ಲ, ತನ್ನ ಬಳಿಯಿದ್ದ ಚಾಕುವಿನಿಂದ ಪತಿಯ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಾಳೆ. ನೋವಿನಿಂದ ಪತಿ ಕಿರುಚಿಕೊಂಡರೂ ಬಿಡದ ಮೆಹೆರ್ ಗಂಡನನ್ನು ಕ್ರೂರವಾಗಿ ನಡೆಸಿಕೊಂಡು ಗಾಯಗೊಳಿಸಿದ್ದಾಳೆ. ಸದ್ಯ ಮನ್ನನ್ ಅವರ ಕುಟುಂಬ ಸದಸ್ಯರು ಮೆಹೆರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಹೆಂಡತಿ… ವಿರಾಟ್​ ಕೊಹ್ಲಿ ಹೇಳಿದ ಈ ಮಾತು ಕೇಳಿ ದಿನೇಶ್​ ಕಾರ್ತಿಕ್​ ಶಾಕ್​!

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸುವಂತಿಲ್ಲ; ಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
