ನವದೆಹಲಿ:ಭಾರತ್ ಸ್ಟೇಜ್ 4 (ಬಿಎಸ್ 4) ವಾಹನಗಳ ಮಾರಾಟಕ್ಕೆ ತಾನು ನೀಡಿರುವ ಗಡುವು ಇದಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ವಾಹನಗಳ ನೋಂದಣಿಯನ್ನೂ ಮಾಡುವಂತಿಲ್ಲ, ಜತೆಗೆ ಅವುಗಳ ಮಾರಾಟವನ್ನೂ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.
ಈ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್​ ನಿರ್ಬಂಧ ವಿಧಿಸಿತ್ತು. ಆದರೆ ತದನಂತರ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ, ಕೋರ್ಟ್​ ನೀಡಿರುವ ಅವಧಿಯೊಳಕ್ಕೆ ಈ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಗೋಗರೆದಿದ್ದ ಭಾರತೀಯ ಆಟೋಮೊಬೈಲ್ ವಿತರಕರ ಸಂಘ (ಎಫ್‌ಎಡಿಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಈ ವಾಹನಗಳ ಮಾರಾಟದ ಅವಧಿಯನ್ನು ಸ್ವಲ್ಪ ಮಟ್ಟಿಗಾದರೂ ವಿಸ್ತರಿಸುವಂತೆ ಕೋರಿಕೊಂಡಿತ್ತು. 7 ಲಕ್ಷಕ್ಕೂ ಹೆಚ್ಚು ಬಿಎಸ್ 4 ದ್ವಿ ಮತ್ತು ನಾಲ್ಕು ಚಕ್ರಗಳು, ಸುಮಾರು 15,000 ಪ್ರಯಾಣಿಕ ಕಾರುಗಳು ಮತ್ತು ಸರಿಸುಮಾರು 6,400 ಕೋಟಿ ಮೌಲ್ಯದ ಟ್ರಕ್‌ಗಳು ಮಾರಾಟವಾಗದೆ ಉಳಿದಿವೆ ಎಂದು ಅದು ಹೇಳಿತ್ತು.
ನಂತರ ಸುಪ್ರೀಂಕೋರ್ಟ್​, 2020 ಮಾರ್ಚ್​ 31ಕ್ಕೆ ಮೊದಲು ಮಾರಾಟವಾಗಿ ತಾತ್ಕಾಲಿಕವಾಗಿ ನೋಂದಣಿಯಾಗಿರುವ ವಾಹನಗಳು ಹಾಗೂ ತೆರಿಗೆ ಮತ್ತು ಶುಲ್ಕ ಪಾವತಿಸಿರುವ ಹಾಗೂ ತೆರಿಗೆ ಕಟ್ಟಬೇಕಿರುವ ಎಲ್ಲಾ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಏಪ್ರಿಲ್​ 30ರವರೆಗೆ ಅವಕಾಶ ನೀಡಿತು.
ಇದನ್ನೂ ಓದಿ:ಮಠದಲ್ಲೇ ಕ್ವಾರಂಟೈನ್ ; ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಲು ಇಚ್ಛಿಸದ ಮಕ್ಕಳು
ದೇಶದಲ್ಲಿ ಲಾಕ್​ಡೌನ್​ ತೆರವುಗೊಳಿಸಿದ ನಂತರ ವಿತರಕರು ತಮ್ಮ ಉಳಿದಿರುವ ಬಿಎಸ್ 4 ದಾಸ್ತಾನುಗಳಲ್ಲಿ 10 ಶೇಕಡಾವನ್ನು 10 ದಿನಗಳವರೆಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಅಂದರೆ ವಿಸ್ತರಣೆಯ ಅವಧಿಯಲ್ಲಿ ಕೇವಲ 1.05 ಲಕ್ಷ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಅನುಮತಿಸಲಾಗಿತ್ತು.
ಇದರ ಹೊರತಾಗಿಯೂ ನೋಂದಣಿ ಮುಂದುವರಿಸುತ್ತಿರುವ ಕೆಲವು ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಮಾರಾಟ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಮುಂದುವರೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದೇಶವನ್ನು ಉಲ್ಲಂಘಿಸಿ 2.25 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ ಎಂದು ವರದಿಯಾಗಿರುವ ಬಗ್ಗೆ ಕೋರ್ಟ್​ ಕಿಡಿ ಕಾರಿದೆ.
ಇದನ್ನೂ ಓದಿ:ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್​: ಭರ್ಜರಿ ಮಾರಾಟ
ಬಿಎಸ್​ 4 ನಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಷೇಧಿಸಲಾಗಿದೆ. ಅದರ ಬದಲು ಭಾರತ್ ಸ್ಟೇಜ್-6 (ಬಿಎಸ್‌-6) ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಭಾರತ್​ ಸ್ಟೇಜ್​ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ. ಬಿಎಸ್‌-4 ವಾಹನಗಳಲ್ಲಿ ಬಿಎಸ್‌-4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ. ಬಿಎಸ್‌-6 ವಾಹನಗಳಲ್ಲಿ ಬಿಎಸ್‌-6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್‌-4 ಪೆಟ್ರೋಲ್ ಇಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್‌-6 ಪೆಟ್ರೋಲ್ ವಾಹನಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದಿಲ್ಲ. ಬಿಎಸ್‌-6 ಪೆಟ್ರೋಲ್ ಇಂಜಿನ್‌ಗಳು ಉಗುಳುವ ಹೊಗೆಯಲ್ಲಿನ ಮಾಲಿನ್ಯಕಾರಕಗಳ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ.(ಏಜೆನ್ಸೀಸ್​)
ಮದುವೆ ಮಂಟಪದಲ್ಲೇ ಹೈಡ್ರಾಮಾ: ಪತಿ ಎದುರೇ ಪ್ರೇಮಿಯ ಚುಂಬಿಸಿದಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 5 =
Remember me
