ನವದೆಹಲಿ:ರಾಜೀನಾಮೆ ಕುರಿತು ಎದ್ದಿರುವ ಊಹಾಪೋಹಗಳ ಕುರಿತು ಸ್ಪಷ್ಟ ಸಂದೇಶ ರವಾನಿಸಿರುವ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಉಳಿದ ಅವಧಿಯವರೆಗೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ರಾಜೀನಾಮೆ ಎಂಬುದು ಕೇವಲ ಗಾಳಿ ಸುದ್ದಿಯಷ್ಟೇ. ರಾಜೀನಾಮೆ ಕೊಡಿ ಎಂದು ಹೈಕಮಾಂಡ್​ ಕೇಳಿಲ್ಲ. ನಾನು ರಾಜೀನಾಮೆ ನೀಡುತ್ತೇನೆ ಎಂಬುದು ಶುದ್ದ ಸುಳ್ಳು. ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಆಗಸ್ಟ್ ಮೊದಲ ವಾರ ಮತ್ತೆ ದೆಹಲಿಗೆ ಆಗಮಿಸಿ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಹಿರಿಯ ಸಚಿವರ ಜತೆ ಚರ್ಚೆ ನಡೆಸುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಸಿಎಂ ಬಿಎಸ್​ವೈ ಖಡಕ್​ ಸಂದೇಶವನ್ನು ರವಾನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಪುತ್ರ ವಿಜಯೇಂದ್ರರೊಂದಿಗೆ ಜೆ.ಪಿ. ನಡ್ಡಾ, ಅಮಿತ್ ಷಾ, ರಾಜನಾಥ್ ಭೇಟಿಗೆ ಬಿಎಸ್​ವೈ ಹೊರಟರು.(ದಿಗ್ವಿಜಯ ನ್ಯೂಸ್​)
ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಕರೊನಾಘಾತ: ಮೊದಲ ಕೋವಿಡ್​ ಪ್ರಕರಣ ವರದಿ

ರಾಜ್ಯದಲ್ಲಿ ಉನ್ನತ ಶಿಕ್ಷಣ ಕಾಲೇಜು ತರಗತಿ ಆರಂಭ ಯಾವಾಗ?

Sign in to your account
Please enter an answer in digits:one × two =
Remember me
