ನವದೆಹಲಿ:ಸದಾ ಒಂದಿಲ್ಲಾ ಒಂದು ರೀತಿಯಲ್ಲಿ ಕಾಟ ಕೊಡುತ್ತಿರುವ ಪಾಕಿಸ್ತಾನ ಆಗಾಗ ಭಾರತದ ಗಡಿ ಒಳಕ್ಕೆ ಡ್ರೋನ್​ ಬಿಡತೊಡಗಿದೆ. ಈ ಡ್ರೋನ್​ಗಳನ್ನು ರೇಡಾರ್​ ಮೂಲಕ ಗುರುತಿಸುವುದು ಕಷ್ಟ. ಆದರೂ ಭಾರತೀಯ ಗಡಿ ರಕ್ಷಣಾ ಪಡೆ (ಬಿ.ಎಸ್​.ಎಫ್​) ಪಾಕಿಸ್ತಾನಿ ಡ್ರೋನ್​ ಒಂದನ್ನು ಪಂಜಾಬ್​ನ ಫೀರೋಜ್​ಪುರ್​ನಲ್ಲಿ ಹಿಡಿದಿದೆ.
ಗಡಿ ಭಾಗದಲ್ಲಿ ಕಾರ್ಯನಿರತವಾಗಿದ್ದ ಬಿ.ಎಸ್​.ಎಫ್​ನ 136ನೇ ಬೆಟಾಲಿಯನ್​ಗೆ ಡ್ರೋನ್​ ಹಾರುವ ಸದ್ದು ದೂರದಿಂದ ಕೇಳಿಸಿದೆ. ಕೂಡಲೇ ಕಾರ್ಪ್ರವೃತ್ತರಾದ ಯೋಧರು ಡ್ರೋನ್​ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲ ಸಮಯದ ನಂತರ ಫಿರೋಜ್​ಪುರದ ಗಂಡು ಕಿಲ್ಚಾ ಎನ್ನುವ ಹಳ್ಳಿಯ ಬಳಿ ಅಕ್ರಮವಾಗಿ ಭಾರತ ಪ್ರವೇಶ ಮಾಡುವ ಡ್ರೋನ್​ ಕಂಡುಬಂದಿದೆ. ಮಂಗಳವಾರ ರಾತ್ರಿ 11.25ಕ್ಕೆ ಬಿ.ಎಸ್​.ಎಫ್​ ಡ್ರೋನ್​ ಸೆರೆ ಹಿಡಿದಿದೆ ಎಂದು ಬಿ.ಎಸ್​.ಎಫ್​ ಪಡೆ ಮಾಹಿತಿ ನೀಡಿದೆ.
‘ಸಂಬಂಧಿತ ಪ್ರದೇಶದಲ್ಲಿ ಹುಡುಕಾಟ ಮಾಡುವಾಗ, ಬಿ.ಎಸ್​.ಎಫ್​ ಪಡೆಗಳು ಹೆಕ್ಸಾ-ಕಾಪ್ಟರ್ ಅಥವಾ ಡ್ರೋನ್ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಅದನ್ನು ಬಿ.ಎಸ್​.ಎಫ್​ ಪಡೆ ಪಂಜಾಬ್ ಪೊಲೀಸರ ಸಹಯೋಗದಲ್ಲಿ ವಶಪಡಿಸಿದೆ. ಈ ಡ್ರೋನ್​ನಲ್ಲಿ 2.5 ಕೆಜಿಯ ಎರಡು ಪ್ಯಾಕೆಟ್​ ಡ್ರಗ್ಸ್​ಅನ್ನು ಸಾಗಿಸಲಾಗುತ್ತಿತ್ತು’ ಎಂದು ಬಿ.ಎಸ್​.ಎಫ್​ ಅಧಿಕಾರಿಗಳು ಮಾಹಿತಿ ನೀಡಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seventeen =
Remember me
