ನವದೆಹಲಿ:ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ದೆಹಲಿಯ ಮಹಿಳಾ ಪೊಲೀಸ್ ಪೇದೆಯೊಬ್ಬಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಕೊಲೆ ಮಾಡಿರುವ ಘಟನೆ ನಡೆದಿದೆ.
27 ವರ್ಷದ ಯೋಧ ನರೇಶ್ ಎಂಬಾತ ಆಕೆಯ ಬಾಡಿಗೆ ಮನೆಯಲ್ಲೇ ಈ ಕೃತ್ಯ ಎಸಗಿದ್ದಾನೆ. ತಿಹಾರ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮಹಿಳಾ ಪೇದೆಯ ಶವ ಬುಧವಾರ ಅವಳ ರೂಂನಲ್ಲಿ ಪತ್ತೆಯಾಗಿತ್ತು. ನರೇಶ್‌ಗೆ ಮದುವೆಯಾಗಿದ್ದು ಆತನ ಕುಟುಂಬ ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದೆ. ಆತ ಈ ಮಹಿಳಾ ಪೇದೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.ಇದನ್ನೂ ಓದಿ:ಮದುವೆ ಆಗ್ತೇನೆ ಬಾರೇ ಎನ್ನುತ್ತ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ-ಫೇಸ್​ಬುಕ್ ಗೆಳೆಯನ ವಿರುದ್ಧ ಸಿನಿ ನಿರ್ದೇಶಕಿ ದೂರು
ವಿಚಾರಣೆ ವೇಳೆ ಆತ ಹಲವು ವಿಷಯಗಳನ್ನು ಪೊಲೀಸರೆದುರು ಬಹಿರಂಗಪಡಿಸಿದ್ದಾನೆ. ‘‘ಕಳೆದ ಕೆಲವು ದಿನಗಳಿಂದ ಆಕೆ ಬೇರೊಬ್ಬನ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂಬ ಸಂಶಯ ನನಗೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದ್ದೆ. ಆಗ ಜಗಳವಾಗಿತ್ತು. ಕಲಹ ಹೆಚ್ಚಾಗಿ ಸಿಟ್ಟಿನ ಭರದಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಂದುಬಿಟ್ಟಿದ್ದೇನೆ’’ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಕೊಲೆಗೀಡಾದ ಮಹಿಳೆಯ ಪಾಲಕರು ಹರ‌್ಯಾಣಾದ ರೇವಾರಿ ಜಿಲ್ಲೆಯಲ್ಲಿ ವಾಸಿಸುತ್ತಾರೆ. ಪೇದೆ ಒಬ್ಬಳೇ ದೆಹಲಿಯಲ್ಲಿ ವಾಸಿಸುತ್ತಿದ್ದಳು. ಕೊಲೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಹೋದಾಗ ಬೆಡ್‌ರೂಮ್‌ನಲ್ಲಿ ಶವ ಬಿದ್ದಿತ್ತು. ಆಕೆಯ ಮೊಬೈಲ್ ಫೋನ್ ಕೂಡ ಅಲ್ಲಿ ಪತ್ತೆಯಾಗಿರಲಿಲ್ಲ. ಸ್ಥಳೀಯರನ್ನು ವಿಚಾರಿಸಿದಾಗ, ಕೆಲವು ದಿನಗಳಿಂದ ಒಬ್ಬ ಯುವಕ ಆಕೆಯ ಜತೆ ವಾಸಿಸುತ್ತಿದ್ದ ವಿಷಯವನ್ನು ತಿಳಿಸಿದ್ದರು. ಸಮೀಪದ ಸಿಸಿಟಿವಿ ಕ್ಯಾಮರಾಗಳ ಫೂಟೇಜ್ ಪರಿಶೀಲಿಸಿದಾಗ ಬುಧವಾರ ಬೆಳಗ್ಗೆ ಒಬ್ಬ ಯುವಕ ಆಕೆಯ ಮನೆಯಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿತ್ತು. ನಂತರ ಆತನನ್ನು ಬಿಎಸ್‌ಎಫ್ ಯೋಧ ನರೇಶ್ ಎಂದು ಪೊಲೀಸರು ಗುರುತಿಸಿ ಶೋಧ ನಡೆಸಿದ್ದರು. ದೆಹಲಿಯ ದ್ವಾರಕಾ ಪ್ರದೇಶದಲ್ಲಿದ್ದ ಆತನ ಮನೆಗೆ ಪೊಲೀಸರು ಹೋದಾಗ ಆತ ವಕೀಲರನ್ನು ಭೇಟಿಯಾಗುವುದಕ್ಕೆ ಹೋಗುತ್ತಿದ್ದ! ಕೂಡಲೇ ಪೊಲೀಸರು ಬಂಧಿಸಿ, ನ್ಯಾಯಾಧೀಶರೆದುರು ಹಾಜರುಪಡಿಸಿದ್ದಾರೆ.
ಟಿ.ವಿ. ರಿಮೋಟ್‌ಗಾಗಿ ಏಳು ವರ್ಷದ ಬಾಲೆಯ ಬರ್ಬರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
