ಹಿಮಾಚಲಪ್ರದೇಶ:ಆನ್​ಲೈನ್​ ಗೇಮಿಂಗ್​ನಲ್ಲಿ ಆಡಲು ಬ್ಯಾಂಕ್​ನಿಂದ ಪಡೆದಿದ್ದ ಸಾಲವನ್ನು ತೀರಿಸದೆ ಗಡಿ ಭದ್ರತಾ ಪಡೆ(BSF)ಯ ಸಿಬ್ಬಂದಿ ಒಬ್ಬರು ತಾನು ಸತ್ತಂತೆ ಬಿಂಬಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಬಂಧಿತರನ್ನು ಅಮಿತ್​ ರಾಣಾ(32) ಎಂದು ಗುರುತಿಸಲಾಗಿದ್ದು, ಇವರು ಆನ್​ಲೈನ್​ ಗೇಮಿಂಗ್​ಗೆ ವ್ಯಸನಿಯಾಗಿದ್ದರು ಮತ್ತು ಇದರ ಸಲುವಾಗಿ ಲಕ್ಷಾಂತರ ರೂಪಾಯಿ ಸಾಲವನ್ನು ಸಹ ಮಾಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಚಂಬಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್​ ಯಾದವ್​ ಅಮಿತ್​ ರಾಣಾ ಆನ್​ಲೈನ್​ ಗೇಮಿಂಗ್​ಗೆ ವ್ಯಸನಿಯಾಗಿದ್ದು ಇದರ ಸಲುವಾಗಿ ಬ್ಯಾಂಕ್​ನಲ್ಲಿ 45 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಇದನ್ನು ತೀರಿಸದೆ ಬ್ಯಾಂಕ್​ ಸಿಬ್ಬಂದಿಗೆ ಆಟವಾಡಿಸುತ್ತಿದ್ದರು ಎಮದು ತಿಳಿದು ಬಂದಿದೆ.
ಬ್ಯಾಂಕ್​ನವರು ಸಾಲವನ್ನು ಹಿಂತಿರುಗಿಸುವಂತೆ ದುಂಬಾಲು ಬಿದ್ದ ನಂತರ ತೀವ್ರ ಪೇಚಿಗೆ ಸಿಲುಕಿದ್ದ ಅಮಿತ್​ಗೆ ಒಂದು ಉಪಾಯ ಹೊಳೆದಿದ್ದು, ಅದರಂತೆ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದಾರೆ. ಜೂನ್​ 29ರಂದು ಅಮಿತ್​ ಚಂಬಾ ಚೋವಾರಿ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಅದರೊಳಗೆ ಸತ್ತ ಮನುಷ್ಯನ ಮೂಲೆಗಳನ್ನಿಟ್ಟು ಸುಟ್ಟು ಹಾಕಿದ್ದರು.
ಇದನ್ನು ನೋಡಿದ ಸ್ಥಳೀಯರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಿದ್ದರು. ಕಾರಿನ ಮಾಲೀಕರ ಕುರಿತು ವಿಚಾರಿಸಿದಾಗ ಅಮಿತ್​ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು. ಆತನ ಕುಟುಂಬಸ್ಥರು ಸಹ ಕಾರು ಹಾಗೂ ಮೃತದೇಹವನ್ನು ನೋಡಿ ಇದು ಅಮಿತ್​ರವರದ್ದೆ ಎಂದು ದೃಢಪಡಿಸಿದ್ದರು.
ಇದನ್ನೂ ಓದಿ:ISIS ಜತೆಗೆ ನಂಟು; ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರೆಸ್ಟ್​
ಬಳಿಕ BSFಗೆ ತಿಳಿಸಿ ಇದು ಕೊಲೆಯೋ, ಆತ್ಮಹತ್ಯೆಯೋ, ಆಕಸ್ಮಿಕವೋ ಎಂದು ಕುಟುಂಬದವರು ಶಂಕಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ರೋಚಕ ತಿರುವು ಪಡೆದುಕೊಂಡಿತು.
ಮೊದಲಿಗೆ ಘಟನೆ ನಡೆದ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಸತ್ತಂತೆ ನಾಟಕವಾಡಿರುವುದು ಎಂದು ತಿಳಿದು ಬಂದಿತ್ತು. ಬಳಿಕ ಅಮಿತ್​ ಚಂಬಾ ಬಸ್​ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಘಟನೆ ನಡೆದ ಸ್ಥಳಕ್ಕೂ ಅವರ ಮನೆಗೂ ಕೂಗಳತೆ ಅಂತರವಿದೆ.
ಬಳಿಕ ಅಮಿತ್​ ಕುಟುಂಬಸ್ಥರನ್ನು ಈ ಕುರಿತು ವಿಚಾರಿಸಿ ಆತನ ಅಷ್ಟು ನಂಬರ್​ಗಳನ್ನು ಪಡೆದುಕೊಂಡಾಗ ಆತ ದಕ್ಷಿಣ ಭಾರತದಲ್ಲಿ ಅಡಗಿರುವುದು ಬೆಳಕಿಗೆ ಬಂತು. ನಮ್ಮ ಅಧಿಕಾರಿಗಳ ತಂಡ ದಕ್ಷಿಣ ಭಾರತಕ್ಕೆ ತೆರಳಿ ಆತ ಬೆಂಗಳೂರು-ಚೆನ್ನೈ ನಡುವೆ ಲಾರಿಯೊಂದರಲ್ಲಿ ಸಂಚರಿಸುತ್ತಿದ್ದ ವೇಳೆ ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸಾಲ ತೀರಿಸಲಾಗದೇ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಕಾರಿನಲ್ಲಿ ಸಿಕ್ಕ ಮೂಲೆಗಳು ಮನುಷ್ಯನದ್ದೋ ಅಥವಾ ಪ್ರಾಣಿಯದ್ದೊ ಎಂಬುದರ ಕುರಿತು ಶೋಧಿಸಲಾಗುತ್ತಿದೆ ಎಂದು ಚಂಬಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್​ ಯಾದವ್​ ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 5 =
Remember me
