ಭುಜ್​​: ಗುಜರಾತ್​ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಸರ್​ ಕ್ರೀಕ್​ ಕೊಲ್ಲಿಯ ಹರಾಮಿ ನಾಲಾ ಬಳಿ ಪಾಕಿಸ್ತಾನದ ನಾಲ್ಕು ಬೋಟ್​​ಗಳು ಗಡಿ ಭದ್ರತಾ ಪಡೆಯ ಯೋಧರು (BSF) ವಶ ಪಡಿಸಿಕೊಂಡಿದ್ದಾರೆ.ಪಾಕಿಸ್ತಾನದ ಮೀನುಗಾರ ಅಲ್ಲಾ ಬಚಾವೊ ಸಿದ್ದೀಕ್ (25) ಎಂಬಾತ ಸಿಕ್ಕಿಬಿದ್ದಿದ್ದು, ಉಳಿದವರೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದು ಬಿಎಸ್​ಎಫ್​ ಮೂಲಗಳು ತಿಳಿಸಿವೆ.
ಕಚ್​​ ಪ್ರದೇಶದಲ್ಲಿ ಮುಂಜಾನೆ 6ಗಂಟೆಗೆ ಪಾಕಿಸ್ತಾನದ ಬೋಟ್​​ಗಳು ಹಾಗೂ ಅದರಲ್ಲಿ ಜನರು ಇದ್ದಾರೆ ಎಂಬುದನ್ನು ಗಮನಿಸಿದ ಭುಜ್​ ಘಟಕದ ಬಿಎಸ್​ಎಫ್​ ಗಸ್ತು ಪಡೆ ಕಾರ್ಯಾಚರಣೆ ನಡೆಸಿ, ದೋಣಿಗಳನ್ನು ವಶಪಡಿಸಿಕೊಂಡಿದೆ.ಇದನ್ನೂ ಓದಿ:ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ನಾಡದೋಣಿ; ನಾಲ್ವರು ಮೀನುಗಾರರು ನಾಪತ್ತೆ
ಪಾಕ್​ ದೋಣಿಯಲ್ಲಿದ್ದವರು ಕದ್ದುಮುಚ್ಚಿ ಭಾರತದ ಭೂಪ್ರದೇಶಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದರು. ಅದನ್ನು ಬಿಎಸ್​ಎಫ್​ ಪಡೆ ತಡೆದಿದೆ. ನಮ್ಮ ಸೈನಿಕರನ್ನು ನೋಡುತ್ತಿದ್ದಂತೆ ಬೋಟ್​​ಗಳಲ್ಲಿದ್ದ ಹಲವರು ನೀರಿಗೆ ಹಾರಿದ್ದಾರೆ. ಅದರಲ್ಲಿ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ ಎಂದು ಬಿಎಸ್​ಎಫ್​ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ನಾಲ್ಕೂ ದೋಣಿಗಳನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಸಿಕ್ಕಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಪ್ರವಾಹದ ಮಧ್ಯೆ ಸಿಲುಕಿದ ಲಾರಿಯಿಂದ ಹಾರಿ ಮರಹತ್ತಿದ ಚಾಲಕ; ದುರ್ದೈವ ಅಲ್ಲೇ ಕಾದಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
