ನವದೆಹಲಿ:ಗಡಿ ಭದ್ರತಾ ಪಡೆಗಳು ಇಂಡೋ-ಬಾಂಗ್ಲಾದೇಶದ ಗಡಿಯ ಬಳಿ 2,60,231 ರೂ. ಮೌಲ್ಯದ 1,540 ಬಾಟಲಿಗಳ ಫೆನ್‌ಸೆಡಿಲಿನ್ ಅನ್ನು ವಶಪಡಿಸಿಕೊಂಡಿದೆ. ಫೆನ್ಸೆಡಿಲಿನ್ ಕೆಮ್ಮು ಔಷಧದ ಬ್ರಾಂಡ್ ಆಗಿದ್ದು ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.ಕಳೆದ 24 ಗಂಟೆಗಳಲ್ಲಿ ಕೆಮ್ಮು ಔಷಧಿ ಬಾಟಲಿಗಳನ್ನು ವಿವಿಧ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿರುವ ನವಾಡಾದ ಗಡಿ ಔಟ್​​​ಪೋಸ್ಟ್​ ಪ್ರದೇಶದಲ್ಲಿ 160 ಬಾಟಲಿಗಳ ಫೆನ್‌ಸೆಡಿಲ್ ಹೊಂದಿದ್ದ ಕಳ್ಳಸಾಗಾಣಿಕೆದಾರನನ್ನು ಭಾನುವಾರ ಬಂಧಿಸಲಾಯಿತು. ವಿಚಾರಣೆಯ ನಂತರ, ಆತ ಆ ಪ್ರದೇಶದ ಇತರ ಫೆನ್ಸೆಡಿಲ್ ಕಳ್ಳಸಾಗಾಣಿಕೆದಾರರ ಹೆಸರನ್ನು ಬಹಿರಂಗಪಡಿಸಿದ.
ಇದನ್ನೂ ಓದಿ:ಅನುಮಾನಾಸ್ಪದ ವರ್ತನೆ: ಅವಮಾನಕ್ಕೆ ಪ್ರತೀಕಾರವಾಗಿ ನಡೆಯಿತಾ ಕೊಲೆ?
“ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ, ಭಾರತದ ಕಡೆಯ ನವಾಡಾ ಪ್ರದೇಶದಲ್ಲಿ ಕುಳಿತಿದ್ದ ಕೆಲವು ಫೆನ್ಸೆಡಿಲ್ ಕಳ್ಳಸಾಗಾಣಿಕೆದಾರರು ಅದನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಕಳ್ಳಸಾಗಾಣಿಕೆದಾರರು ಗಡಿ ತಲುಪಿದ ಕೂಡಲೇ ಬಿಎಸ್ಎಫ್ ಪಡೆಗಳು ಒಬ್ಬ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದು, ಇತರರು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿ ಹೇಳಿದರು.
ಇದನ್ನೂ ಓದಿ  :ಅಮಲೇರಿದ ಕೋವಿಡ್ ರೋಗಿಯಿಂದ ಆಸ್ಪತ್ರೆಯಲ್ಲಿ ದಾಂಧಲೆ : ಮದ್ಯ ಪೂರೈಸಿದ್ದು ಯಾರು ಗೊತ್ತಾ?
ಪ್ರಾಥಮಿಕ ವಿಚಾರಣೆ ವೇಳೆ, ಫೆನ್ಸೆಡಿಲ್ ರವಾನಿಸಲು ಮಾಲ್ಡಾ ನಿವಾಸಿ ಗುರುಪಾದ್ ಮಂಡಲ್ ಎಂಬಾತ ಅವನಿಗೆ ನೀಡಿದ್ದ ಎಂದು ತಿಳಿದುಬಂದಿದೆ. ಕಳ್ಳಸಾಗಾಣಿಕೆದಾರರಿಗೆ ಬಾಂಗ್ಲಾದೇಶದ ಕಡೆಗೆ ಅಂತಾರಾಷ್ಟ್ರೀಯ ಗಡಿ ದಾಟಿದ ನಂತರ ಪ್ರತಿ ಚೀಲಕ್ಕೆ 1200 ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು. ಬಾಂಗ್ಲಾದೇಶಕ್ಕೆ ತಲುಪಿದಾಗ ಫೆನ್‌ಸೆಡಿಲ್ ಬಾಟಲಿಗಳನ್ನು ಚಾಪಿನವಾಬ್‌ಗಂಜ್ ನಿವಾಸಿ ಸಾಹಿಮ್ ಶೇಖ್ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂಬುದು ತಿಳಿದುಬಂತು.ವಶಪಡಿಸಿಕೊಂಡ ಫೆನ್‌ಸೆಡಿಲ್ ಬಾಟಲಿಗಳನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆ / ಕಸ್ಟಮ್ಸ್ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿವ್-ಇನ್ ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nineteen =
Remember me
