ನವ ದೆಹಲಿ:ಭಾರತೀಯ ಗಡಿ ಭಧ್ರತಾ ಪಡೆ (BSF) ಪಶ್ಚಿಮ ಬಂಗಾಳದ ಮಾಲ್ದ ಜಿಲ್ಲೆಯ ಸಮೀಪ ಭಾರತ – ಬಾಂಗ್ಲಾದೇಶ ಗಡಿಯಲ್ಲಿ 39 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದೆ.
ಬಿಎಸ್​​ಎಫ್​​ನ 70ನೇ ಸೌತ್ ಬೆಂಗಾಲ್ ಫ್ರಾಂಟಿಯರ್ ಬಟಾಲಿಯನ್ ದಕ್ಷಿಣ ಬಂಗಾಳದ ಸುಖದೇವಪರದ ಔಟ್​​ಪೋಸ್ಟ್​​ನಲ್ಲಿ ತಂಗಿತ್ತು. ಈ ವೇಳೆ ಭಾರತ – ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ 359 ಮೊಬೈಲ್​​ಗಳನ್ನು ವಶಪಡಿಸಿಕೊಂಡಿದೆ.
ಬಿಎಸ್​​ಎಫ್​ ಯೋಧರು ಭಾರತ – ಬಾಂಗ್ಲಾ ಗಡಿಯ ಬಳಿ ರಾತ್ರಿ ವೇಳೆ ಸುಮಾರು 10 ರಿಂದ 12 ಜನ ಕಳ್ಳಸಾಗಾಣಿಕೆದಾರರು ಗಡಿ ಬೇಲಿಯ ಕಡೆಗೆ ಬರುತ್ತಿದ್ದರು. ಭಾರತೀಯ ಸೈನಿಕರನ್ನು ಕಾಣುತ್ತಿದ್ದಂತೆ ಕಾಡಿನಲ್ಲಿ ಓಡಲು ಆರಂಭಿಸಿದ್ದಾರೆ.
ಗುಪ್ತಚರ ಮೂಲಗಳಿಂದ ಬಂದ ಮಾಹಿತಿಯ ಮೇರೆಗೆ ವಿಶೇಷ ಪಡೆಯನ್ನು ರಚಿಸಿ ಗಡಿಯ ಬಳಿ ಶೋಧಕಾರ್ಯ ನಡೆಸಲಾಗಿದೆ. ಈ ವೇಳೆ ಮಣ್ಣಿನಡಿಯಲ್ಲಿ ರಂಧ್ರಗಳನ್ನು ಕೊರೆದು ಹುದುಗಿಸಿಟ್ಟಿದ್ದ 8 ಚೀಲಗಳು ಪತ್ತೆಯಾಗಿವೆ. ಚೀಲಗಳನ್ನು ತೆರೆದು ನೋಡಿದಾಗ ವಿವಿಧ ಕಂಪೆನಿಯ ಮೊಬೈಲ್ ಫೋನ್​ಗಳಿದ್ದವು. ಎಲ್ಲವನ್ನೂ ವಶಕ್ಕೆ ಪಡೆಯಲಾಗಿದ್ದು, ಇದರ ಭಾರತೀಯ ಮೊತ್ತ 39,29,000 ರೂ. ಎಂದು ಅಂದಾಜಿಸಲಾಗಿದೆ. ಮೊಬೈಲ್ ಫೋನ್ ಕಳ್ಳಸಾಗಣಿಕೆಯಲ್ಲಿ ತೊಡಗಿರುವ ಭಾರತೀಯ ಮೂಲದ ಕಳ್ಳಸಾಗಣೆದಾರರ ಪತ್ತೆ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಬೈಷ್ನಬ್​ ​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಿಎಸ್​​ಎಫ್ ತಿಳಿಸಿದೆ.
ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ತಡೆಯಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಬಿಎಸ್​​ಎಫ್ ತೆಗೆದುಕೊಂಡಿದೆ ಎಂದು 70ನೇ ಬೆಟಾಲಿಯನ್​ ಕಮಾಂಡಿಂಗ್ ಆಫೀಸರ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + one =
Remember me
