ನವದೆಹಲಿ:ದೇಶದ 200ಕ್ಕೂ ಹೆಚ್ಚು ನಗರಗಳಲ್ಲಿ ಮುಂದಿನ ಆರು ತಿಂಗಳಲ್ಲಿ 5ಜಿ ಇಂಟರ್​ನೆಟ್ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಘೋಷಿಸಿದ್ದಾರೆ. ಶನಿವಾರ ಇಂಡಿಯಾ ಮೊಬೈಲ್ ಕಾಂಗ್ರೆಸ್​ನಲ್ಲಿ (ಐಎಂಸಿ) ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ ಬೆನ್ನಲ್ಲೇ ವೈಷ್ಣವಿ ಐಎಂಸಿ ಕಾರ್ಯಕ್ರಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಸಂಸ್ಥೆ (ಬಿಎಸ್​ಎನ್​ಎಲ್) 2023 ಆಗಸ್ಟ್ 15ರಂದು ದೇಶದಲ್ಲಿ 5ಜಿ ಸೇವೆಗಳನ್ನು ಆರಂಭಿಸಲಿದೆ ಎಂದು ವೈಷ್ಣವ್ ಘೋಷಿಸಿದರು. ದೇಶದ ಶೇಕಡ 80ರಿಂದ 90 ಭಾಗಗಳಲ್ಲಿ ಈ ಸೇವೆ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ಸಚಿವರು ತಿಳಿಸಿದರು.
6ಜಿ ಸೇವೆಯಲ್ಲೂ ದೇಶ ಮುನ್ನಡೆ: ದೇಶವು 6ಜಿ ದೂರಸಂಪರ್ಕ ಸೇವೆಯಲ್ಲೂ ಮುನ್ನಡೆ ಸಾಧಿಸಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರನೇ ತಲೆಮಾರಿನ ವೈರ್​ಲೆಸ್ ತಂತ್ರಜ್ಞಾನದಲ್ಲಿ ಭಾರತ ಜಾಗತಿಕವಾಗಿ ಮುನ್ನಡೆ ಸಾಧಿಸುವುದನ್ನು ನೋಡುವುದು ಪ್ರಧಾನಿ ಮೋದಿ ಬಯಕೆಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಐಐಟಿ ಹೈದರಾಬಾದ್ ಬೂತ್​ಗೆ ಸಚಿವರು ಭೇಟಿ ನೀಡಿದರು.
ಈ ಸಂಸ್ಥೆಯು 6ಜಿ ತಂತ್ರಜ್ಞಾನದ ಮೂಲ ಮಾದರಿಗಳನ್ನು ಪ್ರದರ್ಶಿಸಿದ್ದು, 5ಜಿಗೆ ಹೋಲಿಸಿದರೆ ನೆಟ್​ವರ್ಕ್ ವೇಗದಲ್ಲಿ 2-3 ಪಟ್ಟು ಸ್ಪೆಕ್ಟ್ರಲ್ ದಕ್ಷತೆಯನ್ನು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. 6ಜಿ ಅಭಿವೃದ್ಧಿಗೆ ಸಹಾಯ ಮಾಡುವ ಕೆಲವು ಪೇಟೆಂಟ್​ಗಳನ್ನು ಸಂಸ್ಥೆಗೆ ನೀಡಲಾಗಿದೆ. ತಂತ್ರಜ್ಞಾನವು ಮುಂದುವರಿದಂತೆ ಹೊಸ ಪೇಟೆಂಟ್​ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು 6ಜಿ ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ಐಐಟಿ ಹೈದರಾಬಾದ್ ಪ್ರಾಧ್ಯಾಪಕ ಕಿರಣ್ ಕುಚಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + two =
Remember me
