ಅಲಿಗಢ್​:ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನ ಉಗ್ರರ ಪಾಲಿಗೆ ಸ್ವರ್ಗವಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಉತ್ತರ ಪ್ರದೇಶ ಬಹುಜನ ಸಮಾಜ ಪಕ್ಷದ ಕೌನ್ಸಿಲರ್​ ಸದ್ದಾಂ ಹುಸೇನ್​ರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳ ದೇಗುಲದಲ್ಲಿ ಬಂಧಿಸಿದ ಬೆನ್ನಲ್ಲೇ ಸದ್ದಾಂ ಈ ಹೇಳಿಕೆಯನ್ನು ನೀಡಿದ್ದರು. ಅಂದೇ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.ಜುಲೈ 10ರಂದು ಹುಸೇನ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬಂಧಿಸಲಾಗಿದೆ ಎಂದು ಅಲಿಗಢ್​ ಎಸ್​ಪಿ ಅಭಿಷೇಕ್​ ತಿಳಿಸಿದ್ದಾರೆ.ಇದನ್ನೂ ಓದಿ:ಬೈರುತ್​ ಸ್ಫೋಟ: 30 ಗಂಟೆ ಬಳಿಕ ಬಂದರು ಕಾರ್ಮಿಕ ರಕ್ತಸಿಕ್ತ ಸ್ಥಿತಿಯಲ್ಲಿ ಜೀವಂತ ಪತ್ತೆ!
ಮಹಾಕಾಳ ದೇವಸ್ಥಾನ ಉಗ್ರರ ತಾಣ ಎಂದು ಹೇಳಿಕೆ ನೀಡಿದ್ದ ಬಿಎಸ್​ಪಿ ಕೌನ್ಸಿಲರ್​ ವಿರುದ್ಧ ಬಿಜೆಪಿ ಯುವ ಘಟಕದ ನಾಯಕ, ಅಲಿಗಢ್​ ಜಿಲ್ಲಾಧ್ಯಕ್ಷ ಮುಕೇಶ್​ ಲೋಧಿ ದೂರು ದಾಖಲು ಮಾಡಿದ್ದರು.
ಉಜ್ಜಯಿನಿ ದೇವಸ್ಥಾನ ಪ್ರಸಿದ್ಧ ದೇಗುಲ. ಆದರೆ ಸದ್ದಾಂ ಹುಸೇನ್​ ಅವರು ಇಂಥ ಹೇಳಿಕೆ ನೀಡುವ ಮೂಲಕ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮುಕೇಶ್​ ಲೋಧಿ ತಿಳಿಸಿದ್ದಾರೆ. (ಏಜೆನ್ಸೀಸ್)
ಪುಟ್ಟ ಮಗಳಿಗೆ ಅಪರೂಪದ ಕಾಯಿಲೆ; 1,100 ಕಿ.ಮೀ.ದೂರ ಬರಿಗಾಲಿನಲ್ಲಿ ನಡೆದ ಅಪ್ಪ, ನಿಂತಿಲ್ಲ ಇನ್ನೂ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
