ಅಲಿಘಡ್​:ಲಾಕ್​ಡೌನ್​ ಸಡಿಲಿಕೆ ಮಾಡಿದ್ದರೂ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ನೀಡಿವೆ.
ಉತ್ತರ ಪ್ರದೇಶದ ಅಲಿಘಡ್​ನಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) ನಾಯಕ ಮೊಹಮ್ಮದ್​ ಜಾಹಿದ್​ ಈ ಲಾಕ್​ಡೌನ್​ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.
ಮೊಹಮ್ಮದ್​ ಜಾಹಿದ್ ತನ್ನ ಮಗನ ಮದುವೆ ಏರ್ಪಡಿಸಿದ್ದರು. ಆದರೆ ಈ ವಿವಾಹದಲ್ಲಿ ಲಾಕ್​ಡೌನ್​ ನಿಯಮಗಳೆಲ್ಲವನ್ನೂ ಮುರಿದಿದ್ದಾರೆ. ಭರ್ಜರಿಯಾಗಿ ವಿವಾಹ ಮಹೋತ್ಸವ ನಡೆಸಿದ್ದಾರೆ. ನರ್ತಕಿಯನ್ನು ಕರೆಸಿ ಅದ್ದೂರಿ ನೃತ್ಯ ಪ್ರದರ್ಶನವನ್ನೂ ಆಯೋಜಿಸಿದ್ದರು.
ಇದನ್ನೂ ಓದಿ:ಆನ್​ಲೈನ್​ನಲ್ಲಿ ದರ್ಶನ ನೀಡಲು ಪ್ರಾರಂಭಿಸಿದ ಮಲೆ ಮಹದೇಶ್ವರ ಸ್ವಾಮಿ; ಭಕ್ತರು ಸೇವೆಯನ್ನೂ ಸಲ್ಲಿಸಬಹುದು…
ಇನ್ನು ಪಾಲ್ಗೊಂಡ ಅತಿಥಿಗಳು ಯಾರೂ ಮಾಸ್ಕ್​ ಧರಿಸಿ ಇರಲಿಲ್ಲ. ಸಾಮಾಜಿಕ ಅಂತರ ನಿಯಮವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಅದನ್ನು ನೋಡುತ್ತಿದ್ದಂತೆ ಪೊಲೀಸರು ಮೊಜಮ್ಮದ್​ ಜಾಹಿದ್​ ಸೇರಿ ಒಟ್ಟು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:VIDEO: ಕೋಲಾರದಲ್ಲಿ ಎಕ್ಕದ ಗಿಡದ ತುಂಬೆಲ್ಲ ಮಿಡತೆಗಳ ದಂಡು; ರೈತರಲ್ಲಿ ಆತಂಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
