ಜೈಪುರ:ಯಾವ ಪಕ್ಷವಾದರೂ ಮೈತ್ರಿ ಮಾಡಿಕೊಳ್ಳಬಹುದು ಆದರೆ ಕಾಂಗ್ರೆಸ್​ ಬಿಜೆಪಿ ಒಟ್ಟಾಗೊ ಮಾತೇ ಇಲ್ಲ ಎನ್ನುತ್ತಾರೆ ಕೆಲವರು. ಆದರೆ ಇಲ್ಲಿ ಮಾತ್ರ ಕಾಂಗ್ರೆಸ್​, ಬಿಜೆಪಿ ಜತೆ ಸೇರಿಕೊಂಡಿದೆಯಂತೆ. ಅದಕ್ಕೆಂದೇ ಈ ಮೈತ್ರಿ ಪಕ್ಷ ಮೈತ್ರಿ ಮುರಿದುಕೊಳ್ಳುತ್ತೇವೆ ಎನ್ನುವ ಬೆದರಿಕೆಯನ್ನೂ ಹಾಕಿದೆ.
ಇದನ್ನೂ ಓದಿ:ಜಾನಪದ ಕಲಾವಿದರಿಗೆ ತಿಂಗಳಿಗೆ 5 ಸಾವಿರ ವಿದ್ಯಾರ್ಥಿವೇತನ ಘೋಷಣೆ
ರಾಜಸ್ಥಾನದಲ್ಲಿ ಕಾಂಗ್ರೆಸ್​ ಬಿಜೆಪಿ ಬೆಂಬಲ ಸೂಚಿಸುತ್ತಿದೆ ಎಂದು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಆರೋಪಿಸಿದೆ. ಡುಂಗಾರ್​ಪುರ ಜಿಲ್ಲಾ ಪರಿಷತ್​ನಲ್ಲಿ ಬಿಟಿಪಿ 13 ಸ್ಥಾನ ಗೆದ್ದಿದೆ. 27 ಸದಸ್ಯರ ಪರಷತ್ತಿನಲ್ಲಿ ಕಾಂಗ್ರೆಸ್​ 6 ಸ್ಥಾನ ಮತ್ತು ಬಿಜೆಪಿ 8 ಸ್ಥಾನ ಗೆದ್ದಿದೆ. ಬಿಟಿಪಿಗೆ ಒಂದೇ ಒಂದು ಸ್ಥಾನದಿಂದ ಬಹುಮತ ಸೋತಿದೆ. ಈಗ ಕಾಂಗ್ರೆಸ್​ ಬಿಜೆಪಿಗೆ ಬೆಂಬಲ ನೀಡಿದೆ ಎಂದು ಬಿಟಿಪಿ ಆರೋಪಿಸಿದೆ.
ಇದನ್ನೂ ಓದಿ:8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?
ಈ ಕುರಿತಾಗಿ ಟ್ವೀಟ್​ ಮಾಡಿರುವ ಬಿಟಿಪಿ ಸಂಸ್ಥಾಪಕ, “ಬಿಜೆಪಿ-ಕಾಂಗ್ರೆಸ್ ಒಂದಾಗಿದೆ. ಬಿಟಿಪಿ ರಾಜಸ್ಥಾನ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳಲಿದೆ” ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದಲ್ಲಿ ಬಿಟಿಪಿ ಕೇವಲ ಎರಡು ಶಾಸಕರನ್ನು ಹೊಂದಿದೆ. ಈ ಪಕ್ಷ ಮೈತ್ರಿ ಮುರಿದುಕೊಂಡರೂ ಕಾಂಗ್ರೆಸ್​ನ ಆಡಳಿತದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. (ಏಜೆನ್ಸೀಸ್​)
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
