ನವದೆಹಲಿ:ಮಹಾಮಾರಿ ಕರೊನಾ ವೈರಸ್​ನಿಂದ ಹಳಿತಪ್ಪಿರುವ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಚೇತರಿಕೆ ಬಜೆಟ್ ಮಂಡಿಸಿದ್ದಾರೆ. ಕರೊನಾದಿಂದ ಕಂಗೆಟ್ಟಿದ್ದ ಆರ್ಥಿಕತೆಗೆ ಟಾನಿಕ್ ನೀಡುವುದರ ಜತೆಗೆ ಯಾರಿಗೂ ಹೊರೆಯಾಗದಂತೆ ಮತ್ತು ಉಡುಗೊರೆಯೂ ಇಲ್ಲದಂತೆ ಬಜೆಟ್​ನಲ್ಲಿ ಒತ್ತು ನೀಡಿದ್ದಾರೆ.
ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ, ಬೆಳ್ಳಿ ಅಗ್ಗವಾಗಲಿದೆ. ವಿದೇಶಿ ಮೊಬೈಲ್‌, ಚಾರ್ಜರ್, ವಿದೇಶಿ ಟಿವಿ, ಫ್ರಿಜ್ಜ್ ಮತ್ತಷ್ಟು ದುಬಾರಿಯಾಗಲಿದೆ. ಸ್ವದೇಶಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳ ಅಬಕಾರಿ ಸುಂಕ, ಆಟೋ ಮೊಬೈಲ್‌ ಉತ್ಪನ್ನಗಳ ಸುಂಕ, ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಸುಂಕ, ರೆಡಿಮೇಡ್ ವಸ್ತುಗಳ ಮೇಲಿನ ಆಮದು ಸುಂಕ, ವಿದೇಶಿ ಬಟ್ಟೆಗಳ ಆಮದು ಸುಂಕ ಮತ್ತು ಕಚ್ಚಾ ರೇಷ್ಮೆ ಕಸ್ಟಮ್ಸ್ ಸುಂಕವನ್ನು ಹೆಚ್ಚಳ ಮಾಡಲಾಗಿದೆ.
ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕ ಹಿಂದಿನ ದರಕ್ಕೆ ಇಳಿಕೆ ಮಾಡಲಾಗಿದ್ದು, ಚಿನ್ನ ಬೆಳ್ಳಿ ದರದಲ್ಲಿ ಕಡಿತವಾಗಲಿದೆ. ಎಂಎಸ್​ಎಂಇ ಉತ್ಪನ್ನಗಳ ಮೇಲಿನ ಸುಂಕವನ್ನು ಇಳಿಕೆ ಮಾಡಲಾಗಿದ್ದು, ಆರ್ಥಿಕ ಚೇತರಿಕೆ ದೃಷ್ಟಿಯಿಂದ ಬಜೆಟ್​ ಮಂಡನೆ ಮಾಡಲಾಗಿದೆ. ಬಜೆಟ್​ ಬಳಿಕ ಜನಸಾಮಾನ್ಯರಿಗೆ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.
ಅಗ್ಗ
ದುಬಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
