ಸೆಸ್ ವಿಧಿಸಿದ್ರೂ ತೈಲ ಬೆಲೆ ಏರಲ್ಲ:ಡೀಸೆಲ್ ಮೇಲೆ 4 ರೂ. ಮತ್ತು ಪೆಟ್ರೋಲ್ ಮೇಲೆ 2.5 ರೂ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹೇರುವ ಮುನ್ನವೇ ಮೂಲ ಅಬಕಾರಿ ಸುಂಕ ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸಂಕದ ದರವನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಜನತೆಗೆ ಹೊರೆಯಾಗಲ್ಲ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.
ರೈಲ್ವೆಗೆ ಬಂಪರ್:ರೈಲ್ವೆ ಇಲಾಖೆಯ ಭವಿಷ್ಯದ ಯೋಜನೆಗಳಿಗೆ 1.1 ಲಕ್ಷ ಕೋಟಿ ರೂ. ಸಿಕ್ಕಿದೆ. 2023ರ ಡಿಸೆಂಬರ್ ಒಳಗೆ ವಿದ್ಯುದೀಕರಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ
ಕರ್ನಾಟಕಕ್ಕೆ ಸಿಕ್ಕಿದ್ದು?:ಬೆಂಗಳೂರಿಗೆ ಮತ್ತೆರಡು ಮೆಟ್ರೋ ಮಾರ್ಗ ಸಿಕ್ಕಿದೆ. 2ಎ ಮತ್ತು 2ಬಿ 14,778 ಕೋಟಿ ರೂ. ನೀಡಲಾಗಿದೆ. ಒಟ್ಟು 58.19 ಕಿ.ಮೀ ಉದ್ದದ ಯೋಜನೆ ಇದಾಗಿದೆ.
ಖಾಸಗಿಗೆ ರಹದಾರಿ:ಕೃಷಿ , ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿರುವ ಕೇಂದ್ರ ಬಂಡವಾಳಕ್ಕಾಗಿ ಖಾಸಗಿ ಸಹಭಾಗಿತ್ವಕ್ಕೆ ಮಣೆಹಾಕಿದೆ. ಮುಂದಿನ 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಎಲ್​ಐಸಿ ಷೇರು, ಏರ್​ಪೋರ್ಟ್, ವೇರ್ ಹೌಸ್, ರಸ್ತೆ ನಿರ್ವಣ, ವಿದ್ಯುತ್ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ವೇದಿಕೆ ನಿರ್ವಣವಾಗಿದೆ.
ಬದಲಾಗದ ತೆರಿಗೆ:ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ತೆರಿಗೆ ಪಾವತಿಯನ್ನು ಸರಳೀಕರಿಸುವ ಹಾಗೂ ವಿವಾದ ಬಗೆಹರಿಸುವ ಪರೋಕ್ಷ ಸುಳಿವು ರವಾನೆ.
ಹಿರಿಯರಿಗೆ ನಿರಾಳ:75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಪಿಂಚಣಿ ಆದಾಯ, ಠೇವಣಿ ಮೇಲಿನ ಬಡ್ಡಿಗೆ ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೆ ವಿನಾಯಿತಿ ಘೋಷಣೆ.
ಈ ಬಜೆಟ್​ನ ಹೃದಯವೇ ಹಳ್ಳಿಗಳು ಮತ್ತು ರೈತರು. ರೈತರ ಆದಾಯ ಹೆಚ್ಚಿಸಲು ಒತ್ತು ನೀಡಿರುವ ಈ ಆಯವ್ಯಯ ಕೃಷಿಕರ ಅಭ್ಯುದಯಕ್ಕೆ ಪೂರಕ.
|ನರೇಂದ್ರ ಮೋದಿಪ್ರಧಾನಿ
ರಸ್ತೆ, ವಿದ್ಯುತ್ ಉತ್ಪಾದನೆ, ಸೇತುವೆ, ಬಂದರು ನಿರ್ವಣಕ್ಕಾಗಿ ಮೂಲಸೌಕರ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದೇವೆ. ಕಳೆದ ವರ್ಷ ನಾವು ಎದುರಿಸಿದ ಸಮಸ್ಯೆಯಿಂದ ಈ ಕ್ಷೇತ್ರದಲ್ಲಿ ಅಗಾಧ ಸಾಮರ್ಥ್ಯವಿದೆ ಎಂಬುದನ್ನು ಮನಗಂಡಿದ್ದೇವೆ.
|ನಿರ್ಮಲಾ ಸೀತಾರಾಮನ್ಕೇಂದ್ರ ವಿತ್ತ ಸಚಿವೆ
ಬೆಂಗಳೂರು:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 2021-22ನೇ ಸಾಲಿನ ಆಯವ್ಯಯ ಮಂಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಇನ್ನೂ ನಾಲ್ಕು ಮಿನಿ ಆರ್ಥಿಕ ಪ್ಯಾಕೇಜ್​ಗಳು ಘೋಷಣೆ ಆಗುವ ಸುಳಿವು ಸಿಕ್ಕಿದೆ. ದೇಶಕ್ಕೆ ಕರೊನಾ ಕಾಲಿಟ್ಟ ಬಳಿಕ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷ ಸರ್ಕಾರ ಮೂರು ಕಂತಿನಲ್ಲಿ 20 ಲಕ್ಷ ಕೋಟಿ ರೂ.ಗಳ ಮೊತ್ತದ ಆತ್ಮನಿರ್ಭರ ಯೋಜನೆ ಘೋಷಿಸಿತ್ತು. ಅದೇ ಮಾದರಿಯನ್ನು ಮುಂದಿನ ವರ್ಷವೂ ಮುಂದುವರಿಸಲಿದೆ. ಈ ಆಯವ್ಯಯದಲ್ಲಿ ಎಲ್ಲ ವಲಯಗಳಿಗೂ ಆದ್ಯತೆ ನೀಡಿಲ್ಲ. ಇದನ್ನು ಸಹ ಮಿನಿ ಬಜೆಟ್ ಎಂದೇ ಪರಿಗಣಿಸಲಾಗುತ್ತದೆ. ವಿವಿಧ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮಾದರಿಯಲ್ಲಿ ಇನ್ನೂ ನಾಲ್ಕು ಪ್ಯಾಕೇಜ್​ಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಯಾವ ವಲಯಗಳಿಗೆ?:ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಎಂಎಸ್​ಎಂಇ, ಮಾಹಿತಿ ತಂತ್ರಜ್ಞಾನ ಹಾಗೂ ಡಿಜಿಟಲ್ ಇಂಡಿಯಾ ವಲಯಗಳಿಗೆ ಮುಂದಿನ ಪ್ಯಾಕೇಜ್​ಗಳಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದ್ದರಿಂದಲೇ ಬಜೆಟ್​ನಲ್ಲಿ ವಿಸõತವಾಗಿ ಈ ವಲಯಗಳಿಗೆ ಆದ್ಯತೆ ನೀಡಿಲ್ಲವೆಂದು ಮೂಲಗಳು ಖಚಿತಪಡಿಸಿವೆ. ಒಮ್ಮೆಗೆ ಎಲ್ಲ ವಲಯಗಳಿಗೂ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಪ್ರತಿ ಒಂದೂವರೆ ಅಥವಾ ಎರಡು ತಿಂಗಳಿಗೊಮ್ಮೆ ಘೋಷಣೆ ಮಾಡುತ್ತ ಹೋದರೆ ಅದರಿಂದ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಇನ್ನಷ್ಟು ಉತ್ತಮ ಅಭಿಪ್ರಾಯ ಮೂಡಿಸಬಹುದು ಕೇಂದ್ರದ ಲೆಕ್ಕಾಚಾರ. ಇವೆಲ್ಲ ಸಾರ್ವಜನಿಕವಾಗಿ ಹತ್ತಿರವಾಗುವ ಮತ್ತು ಹೆಚ್ಚು ಜನರಿಗೂ ತಲುಪುವ ಕ್ಷೇತ್ರಗಳಾಗಿವೆ. ಆದ್ದರಿಂದಲೇ ಅವುಗಳಿಗೆ ಪ್ರತ್ಯೇಕವಾಗಿ ಆದ್ಯತೆ ನೀಡಲಾಗುತ್ತದೆ. ಈ ಬಜೆಟ್​ನಲ್ಲಿ ಕೃಷಿ, ಆರೋಗ್ಯ, ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಪನ್ಮೂಲ ಕ್ರೋಡೀಕರಣದ ಉದ್ದೇಶದಿಂದ ತೆರಿಗೆ ವಲಯ ಸಹಜವಾಗಿಯೇ ಈ ಬಜೆಟ್​ಗೆ ಸೇರಿದೆ ಎಂದು ಮೂಲಗಳು ಹೇಳುತ್ತವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − thirteen =
Remember me
