ಲಖನೌ:ವಿಚಿತ್ರವಾದ ಘಟನೆಯೊಂದರಲ್ಲಿ ಎಮ್ಮೆಯೊಂದು ಪೊಲೀಸರ ಕೈಯಲ್ಲಿ ಸಾಧ್ಯವಾಗದೆ ಇರುವ ಕೆಲಸವನ್ನು ಮಾಡಿ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಅಷ್ಟಕ್ಕೂ ಪೊಲೀಸರ ಕೈಯಲ್ಲಿ ಸಾಧ್ಯವಾಗದೆ ಇರುವ ಕೆಲಸವನ್ನು ಮಾಡಿದ್ದಾದರು ಹೇಗೆ ಎಂಬುದನ್ನು ನೋಡೋಣ ಬನ್ನಿ.
ಪ್ರತಾಪ್​ಗಢದ ಮಹೇಶ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಎಂಬುವವರಿಗೆ ಸೇರಿದ ಎಮ್ಮೆ ಕೆಲ ದಿನಗಳಿಂದ ಕಾಣೆಯಾಗಿತ್ತು. ಆಹಾರ ಅರಸುತ್ತ ಪುರೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಹೋಗಿದ್ದು, ಅಲ್ಲಿ ಅದನ್ನು ಹನುಮಾನ್​ ಸರೋಜ್​ ಎಂಬಾತ ತನ್ನ ಮನೆಯಲ್ಲಿ ಕಟ್ಟಿಹಾಕಿಕೊಂಡಿದ್ದಾನೆ.
ಸತತವಾಗಿ ಹುಡುಕಾಡಿದ ಬಳಿಕ ಎಮ್ಮೆ ಪತ್ತೆಯಾಗಿದ್ದು, ಈ ಬಗ್ಗೆ ವಿಚಾರಿಸಿದಾಗ ಹನುಮಾನ್​ ನಂದಲಾಲ್​ ಬಳಿ ಗಲಾಟೆ ಮಾಡಿದ್ದಾನೆ. ಎಮ್ಮೆ ತನಗೆ ಸೇರಿದ್ದು, ಯಾವುದೇ ಕಾರಣಕ್ಕೂ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡ ನಂದಲಾಲ್​ ಪಂಚಾಯತ್​ಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ಪಂಚಾಯತ್​ ಅಧಿಕಾರಿಗಳು ಪ್ರಕರಣವನ್ನು ಮಹೇಶ್​ಗಂಜ್​ ಪೊಲೀಸ್​ ಠಾಣೆಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದಾರೆ.
ಇದನ್ನೂ ಓದಿ:ಹಣ ಮಾಡಲೆಂದೇ ವಿರಾಟ್​ ಒತ್ತಡದ ಪರಿಸ್ಥಿತಿಯಲ್ಲಿ ಆಡುತ್ತಾನೆ; ಶಾಕಿಂಗ್​ ಹೇಳಿಕೆ ಕೊಟ್ಟ ಪಾಕ್​ ಮಾಜಿ ವೇಗಿ
ಪ್ರಕರಣದ ವಿಚಾರಣೆ ನಡೆಸಿದ ಮಹೇಶ್​ಗಂಜ್​ ಪೊಲೀಸ್​ ಠಾಣಾಧಿಕಾರಿ ಶ್ರವಣ್​ ಕುಮಾರ್​ ಸಿಂಗ್​ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಇದು ಇತ್ಯರ್ರಥವಾಗುವುದಿಲ್ಲ ಎಂದು ತಿಳಿದು ಎಮ್ಮೆಗೆ ತೀರ್ಪು ನೀಡುವಂತೆ ಸೂಚಿಸಿದರು. ಅದು ಹೇಗೆ ಅಂದರೆ ನಂದಲಾಲ್​ ಹಾಗೂ ಹನುಮಾನ್​ ಸರೋಜ್​ನನ್ನು ತಮ್ಮ ತಮ್ಮ ಗ್ರಾಮಗಳ ರಸ್ತೆಯ ಮುಂಭಾಗ ನಿಲ್ಲುವಂತೆ ಸೂಚಿಸಿದರು. ಬಳಿಕ ಎಮ್ಮೆ ಯಾರನ್ನು ಹಿಂಬಾಲಿಸುತ್ತದೆ ಅವರೇ ಅದರ ನಿಜವಾದ ಮಾಲೀಕರು ಎಂದು ತಿಳಿಯುತ್ತದೆ ಎಂದು ಹೇಳಿದರು.
ಅದರಂತೆ ಎಮ್ಮೆ ನಂದಲಾಲ್​ನನ್ನು ಹಿಂಬಾಲಿಸಲು ಶುರು ಮಾಡಿದ್ದು, ಬಳಿಕ ಎಮ್ಮೆಯನ್ನು ಪೊಲೀಸರು ಅದರ ಮಾಲೀಕನಿಗೆ ಒಪ್ಪಿಸಿದ್ದಾರೆ. ಬೇರೆಯವರ ಎಮ್ಮೆಯನ್ನು ತನದು ಎಂದು ಗಲಾಟೆ ಮಾಡಿದ ಹನುಮಾನ್​ ಸರೋಜ್​ಗೆ ಪೊಲೀಸರು ಹಾಗೂ ಗ್ರಾಮಸ್ಥರು ಛೀಮಾರಿ ಹಾಕಿದ್ದು, ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಪೊಲೀಸರ ಕೈಯಲ್ಲಿ ಸಾಧ್ಯವಾಗದ ಕೆಲಸವನ್ನು ಎಮ್ಮೆಯೊಂದು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
