ಕೊಟ್ಟಾಯಂ: ಗೂಳಿಯನ್ನು ಮೇಯಿಸಲು ಹೊಲಕ್ಕೆ ಹೋದಾಗ ತನ್ನದೇ ಗೂಳಿಯ ದಾಳಿಯಿಂದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಂ ಚಮಂಪತಲ್​ನಲ್ಲಿ ನಿನ್ನೆ (ಏಪ್ರಿಲ್​ 28) ನಡೆದಿದೆ.
ಮೃತ ವ್ಯಕ್ತಿಯನ್ನು ರೆಜಿ ಜಾರ್ಜ್​ (60) ಎಂದು ಗುರುತಿಸಲಾಗಿದೆ. ಆತನ ಪತ್ನಿ ಡಾರ್ಲಿ (52) ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಪಲಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ:ಸುಡಾನ್​ನಿಂದ 754 ಮಂದಿ ಸ್ವದೇಶಕ್ಕೆ ವಾಪಸ್: ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರ ರಕ್ಷಣೆ
ಈ ಘಟನೆ ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ. ಗೂಳಿಯನ್ನು ಹೊಲದಲ್ಲಿ ಮೇಯಿಸುವಾಗ ಏಕಾಏಕಿ ಗೂಳಿ ರೆಜಿ ಅವರ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿ ಪತ್ನಿ ಡಾರ್ಲಿ ಕೂಗಿಕೊಂಡಾಗ ಹಸು ಆಕೆಯ ಮೇಲೆಯೂ ದಾಳಿ ಮಾಡಿದೆ. ಆಕೆಯ ಮೈಮೇಲೆ ಎಲ್ಲ ಕಡೆ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ರೆಜಿ ಅವರ ಪ್ರಾಣವನ್ನು ಉಳಿಸಲಾಗಲಿಲ್ಲ. ಡಾರ್ಲಿಗೆ ಚಿಕಿತ್ಸೆ ಮುಂದುವರಿದಿದೆ.
ದಂಪತಿಯ ಮಗಳು ಕೆನಡಾದಲ್ಲಿದ್ದಾರೆ. ದಂಪತಿ ವರ್ಷಗಳಿಂದ ಎಮ್ಮೆ, ಹೋರಿಗಳನ್ನು ಸಾಕುತ್ತಿದ್ದಾರೆ. ತನ್ನ ಮೇಲೆ ದಾಳಿ ಮಾಡಿದ ಗೂಳಿಯನ್ನು ಕೆಲ ದಿನಗಳ ಹಿಂದಷ್ಟೇ ರೆಜಿ ಖರೀದಿಸಿದ್ದರು.ಇದನ್ನೂ ಓದಿ:ಮಾತಿನ ಮಹತ್ವ ಅರಿಯಲಿ: ಸ್ವಯಂಪ್ರೇರಿತ ದೂರು ದಾಖಲಿಸಲು ಸುಪ್ರೀಂಕೋರ್ಟ್ ಸೂಚನೆ
ಗೂಳಿಗೆ ರೇಬೀಸ್‌ ಲಕ್ಷಣ ಕಾಣಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗೂಳಿಯ ಬಾಯಿಂದ ನೊರೆ ಬರುತ್ತಿತ್ತು ಎಂದಿದ್ದಾರೆ. ರೇಬೀಸ್​ ಎಂಬುದು ಹುಚ್ಚು ಕಾಯಿಲೆ ಆಗಿದ್ದು, ಇದು ಕೂಡ ದಾಳಿ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ರೆಜಿ ಮೃತದೇಹವನ್ನು ಕಂಜಿರಪಲ್ಲಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.(ಏಜೆನ್ಸೀಸ್​)
ಮಚ್​ಲಕ್ಷ್ಮಿ ರೀಷ್ಮಾ; ಬಾಲಿವುಡ್, ಹಾಲಿವುಡ್ ಅಲ್ಲ ‘ಕೆಡಿ’ ಚಿತ್ರಕ್ಕೆ ಕನ್ನಡತಿ ನಾಯಕಿ

5 ನಿಮಿಷ ಮಾತಾಡಲು 10 ಸಾವಿರ ರೂ.: ಒಳ್ಳೇ ಹುಡ್ಗೀರು ಇತಿಹಾಸ ಸೃಷ್ಟಿಸಲಾರರು ಎಂದ ನಟಿ ಕಿರಣ್​

ಹಿರಿ-ಕಿರಿಯ ಮತದಾರರಲ್ಲಿ ಬೆಂಗಳೂರು ನಗರ ಮುಂದು; 7 ಕ್ಷೇತ್ರಗಳಲ್ಲಿ ಒಟ್ಟು ಶೇ.40 ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
