ಮುಂಬೈ:ಲೋಕಸಭೆ ಚುನಾವಣೆ ಫಲಿತಾಂಶವು ಷೇರುಪೇಟೆಯಲ್ಲಿ ನಿರಾಸೆ ಮೂಡಿಸಿದೆ. ಈ ಕಾರಣಕ್ಕಾಗಿ, ಮಂಗಳವಾರ, ಜೂನ್ 4 ರಂದು, ಭಾರತೀಯ ಮಾರುಕಟ್ಟೆ ಸೂಚ್ಯಂಕಗಳು ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡವು.
30-ಷೇರುಗಳ ಬಿಎಸ್‌ಇ ಸೂಚ್ಯಂಕವು ಮಧ್ಯಾಹ್ನದ ವಹಿವಾಟಿನಲ್ಲಿ 6,234.35 ಅಂಕಗಳು ಅಥವಾ ಶೇಕಡಾ 8.15 ರಷ್ಟು ಕುಸಿದು 70,234.43 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 1,982.45 ಅಂಕಗಳು ಅಥವಾ 8.52 ರಷ್ಟು ಕುಸಿದು 21,281.45 ಕ್ಕೆ ತಲುಪಿದೆ. ಈ ಭಾರಿ ಕುಸಿತದ ಸಮಯದಲ್ಲಿ, ಕನಿಷ್ಠ 848 ಷೇರುಗಳು ಲೋವರ್ ಸರ್ಕ್ಯೂಟ್​ ಹಿಟ್​ ಆದವು.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್​ (ಬಿಎಚ್‌ಇಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ (ಬಿಇಎಲ್), ಅದಾನಿ ಪೋರ್ಟ್ಸ್ ಆ್ಯಂಡ್​ ಸ್ಪೇಷಲ್​ ಎಕನಾಮಿಕ್​ ಜೋನ್​, ಆರ್‌ಇಸಿ, ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್‌ಸಿ) ಷೇರುಗಳು ಲೋವರ್​ ಸರ್ಕ್ಯೂಟ್ ಹಿಟ್​ ಆದವು.
ಇಂಡಿಯನ್ ಬ್ಯಾಂಕ್, ಕೇನ್ಸ್ ಟೆಕ್ನಾಲಜಿ ಇಂಡಿಯಾ, ಕೆಪಾಸಿಟ್ ಇನ್ಫ್ರಾಪ್ರಾಜೆಕ್ಟ್ಸ್, ಡಿಬಿ ರಿಯಾಲ್ಟಿ ಮತ್ತು ವೈಭವ್ ಗ್ಲೋಬಲ್ ಸೇರಿದಂತೆ ಒಟ್ಟು ಒಂಬತ್ತು ಷೇರುಗಳ ಬೆಲೆ ಬಿಎಸ್‌ಇಯಲ್ಲಿ ಶೇ. 20ರಷ್ಟು ಕುಸಿದು ಲೋವರ್​ ಸರ್ಕ್ಯೂಟ್​ ಹಿಟ್​ ಆದವು.
78 ಷೇರುಗಳ ಬೆಲೆಯಲ್ಲಿ 10 ಪ್ರತಿಶತ ಕುಸಿತವಾಗಿ, ಲೋವರ್ ಸರ್ಕ್ಯೂಟ್ ಹಿಟ್ ಆದವು. ಇವುಗಳಲ್ಲಿ ಹಿಂದೂಸ್ತಾನ್ ಜಿಂಕ್, ಭಾರತ್ ಬಿಜ್ಲಿ, ಭಾರತ್ ಡೈನಾಮಿಕ್ಸ್, ಕೊಚ್ಚಿನ್ ಶಿಪ್‌ಯಾರ್ಡ್, ದೀದೇವ್ ಪ್ಲಾಸ್ಟಿಕ್ ಇಂಡಸ್ಟ್ರೀಸ್, ಐನಾಕ್ಸ್ ವಿಂಡ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್, ಪ್ರವೇಗ್, ಎಲೆಕಾನ್ ಇಂಜಿನಿಯರಿಂಗ್ ಕಂಪನಿ, SML ISUZU, NBCC (ಭಾರತ), ಕೀಸ್ಟೋನ್ ರಿಯಾಲ್ಟರ್ಸ್, IFCI ಮತ್ತು ಪ್ರಾಪರ್ಟೀಸ್ ಸೇರಿವೆ.
ಲೋವರ್​ ಸರ್ಕ್ಯೂಟ್ ಎನ್ನುವುದು ಒಂದು ಸ್ಟಾಕ್ ಬೆಲೆಯಲ್ಲಿ ತೀಕ್ಷ್ಣವಾದ ಕುಸಿತ ಅಥವಾ ತೀವ್ರ ಏರಿಕೆಯನ್ನು ತಡೆಯುವ ಒಂದು ಅಳತೆಯಾಗಿದೆ. ಇದು ಒಂದು ದಿನದಲ್ಲಿ ಯಾವುದಾದರೊಂದು ಷೇರಿನ ಬೆಲೆಯಲ್ಲಿ ನಿಗದಿಪಡಿಸಿದ ಗರಿಷ್ಠ ಕುಸಿತವಾಗಿರುತ್ತದೆ. ಈ ನಿಗದಿತ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಷೇರಿನ ಮಾರಾಟ ನಡೆಯುವುದಿಲ್ಲ.
ಲೋವರ್​ ಸರ್ಕ್ಯೂಟ್​ ಹಿಟ್​: ಹಳಿ ತಪ್ಪಿದ ರೈಲ್ವೆ ಸಂಬಂಧಿ ಷೇರುಗಳ ಬೆಲೆ

ಎನ್‌ಟಿಪಿಸಿ, ಕೋಲ್ ಇಂಡಿಯಾ ಷೇರುಗಳಲ್ಲಿ 10% ಕುಸಿತ: ಹೂಡಿಕೆದಾರರಿಗೆ ಉತ್ತಮ ಖರೀದಿ ಅವಕಾಶ ಎನ್ನುತ್ತಾರೆ ತಜ್ಞರು

ಚುನಾವಣೆ ಫಲಿತಾಂಶದ ಪರಿಣಾಮ: ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಮಹಾಕುಸಿತ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve + sixteen =
Remember me
