ಮಧುರೈ:ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಹಸು ಮಾರಾಟ ಮಾಡಿದ. ಅದನ್ನು ಮಾಲೀಕರ ವಾಹನಕ್ಕೂ ಹತ್ತಿಸಿದ. ಆದರೆ, ಅದರ ಜತೆಗಿರುತ್ತಿದ್ದ ಹೋರಿಯೊಂದು ತನ್ನ ಜತೆಗೆ, ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಪಾಲಮೆಂದು ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಮಣಿಕಂಠ ತಾನು ಸಾಕಿದ್ದ ಲಕ್ಷ್ಮೀ ಎಂಬ ಹಸುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ. ಅದನ್ನು ಕೊಂಡೊಯ್ಯುತ್ತಿದ್ದಾಗ ವಾಹನಕ್ಕೆ ಅಡ್ಡಬಂದ ದೇವರಿಗೆ ಬಿಟ್ಟಿದ್ದ ಹೋರಿ ಮಂಜಮಲೈ ಜಪ್ಪಯ್ಯ ಅಂದರೂ ಮುಂದಕ್ಕೆ ಹೋಗಲು ಬಿಡಲಿಲ್ಲ. ವಾಹನವನ್ನು ಚಲಾಯಿಸಿಕೊಂಡು ಹೋದರೂ, ಒಂದು ಕಿ.ಮೀ.ಗೂ ಹೆಚ್ಚು ದೂರದವರೆಗೂ ಬೆನ್ನತ್ತಿದೆ. ವಾಹನದ ಸುತ್ತಲೂ ತಿರುಗುತ್ತ ಹಸುವನ್ನು ಸಂತೈಸುತ್ತಿತ್ತು.
ಇದನ್ನೂ ಓದಿ;ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ
ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ಹಸುವಿನ ಮಾಲೀಕನಿಗೆ ಹಣ ನೀಡಲು ಮುಂದಾದರು. ಕೊನೆಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಓ. ಪನ್ನಿರಸೆಲ್ವಂ ಪುತ್ರ ಜಯಪ್ರದೀಪ್​ ಗಮನಕ್ಕೂ ಬಂದಿದೆ. ಹಸು ಖರೀದಿಸಿದ್ದವನಿಗೆ ಅದರ ಹಣ ನೀಡಿ, ಹೋರಿಗೆ ಜತೆಯಾಗಿಸಿ ದೇವಸ್ಥಾನಕ್ಕೆ ದಾನ ನೀಡಿದ್ದಾರೆ.
ಹೋರಿ ಹೋರಾಟದ ವಿಡಿಯೋ ಇಲ್ಲಿದೆ….https://www.facebook.com/VVani4U/videos/997694927350892/?v=997694927350892
ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − six =
Remember me
