ನವದೆಹಲಿ:ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಹೋರಾಟಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಶಾಹೀನ್ ಭಾಗ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದಕ್ಷಿಣ ದಿಲ್ಲಿ ನಗರ ಪಾಲಿಕೆಯ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣ ವಾಗಿದೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಪ್ರತಿಭಟನಾಕಾರರ ಬೆನ್ನಿಗೆ ನಿಂತಿವೆ.
ಸೋಮವಾರ ಬೆಳಗ್ಗೆ ಶಾಹೀನ್ ಭಾಗ್​ನಲ್ಲಿ ಪ್ರತಿಭಟನೆ ಶುರುವಾಗುತ್ತಿದ್ದಂತೆಯೇ ಎಎಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ಘೊಷಿಸಿದರು. ಕೆಲ ದಿನಗಳ ಹಿಂದೆ ಹನುಮಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ದಿಲ್ಲಿಯ ಜಹಾಂಗೀರ್​ಪುರಿ ಪ್ರದೇಶದಲ್ಲಿ ಗಲಭೆಕೋರರಿಗೆ ಬಿಸಿ ಮುಟ್ಟಿಸಲು ದಿಲ್ಲಿ ಬಿಜೆಪಿ ನೇತೃತ್ವದ ಪಾಲಿಕೆ ಮುಂದಾಗಿತ್ತು. ಜಹಾಂಗೀರ್​ಪುರಿಯಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು. ಸುಪ್ರೀಂಕೋರ್ಟ್ ತಡೆ ನೀಡಿದ್ದರಿಂದ ಆ ಕೆಲಸ ಅಲ್ಲಿಗೇ ಸ್ಥಗಿತಗೊಂಡಿತ್ತು. ಆದರೆ, ದಿಲ್ಲಿಯಲ್ಲಿರುವ ಇತರೆ ಅಕ್ರಮ ಒತ್ತುವರಿ ತೆರವು ಕಾರ್ಯ ಮುಂದುವರಿಯಲಿದೆ ಎಂದು ಪಾಲಿಕೆ ಮುಖ್ಯಸ್ಥರು ಅಂದೇ ಹೇಳಿದ್ದರು. ಅದರ ಮುಂದುವರಿದ ಭಾಗವಾಗಿ ಶಾಹೀನ್ ಭಾಗ್​ನ್ನು ಈಗ ಗುರಿ ಮಾಡಲಾಗಿದೆ. ತೆರವು ಕಾರ್ಯಾಚರಣೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಒತ್ತುವರಿ ತೆರವಿಗೆ ಬಂದಿದ್ದ ಬುಲ್ಡೋಜರ್ ಮೇಲೆ ಕೆಲವರು ಏರಿದ ಘಟನೆಯೂ ನಡೆದಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ಬುಲ್ಡೋಜರ್ ಸಮೇತ ವಾಪಸ್ ಹೋಗಿದ್ದಾರೆ.
ಹೈಕೋರ್ಟ್​ಗೆ ಹೋಗಲು ಸೂಚನೆ:ಶಾಹೀನ್ ಭಾಗ್ ತೆರವು ಕಾರ್ಯಾಚರಣೆ ಪ್ರಶ್ನಿಸಿ ಎಡಪಕ್ಷಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ತಕ್ಷಣವೇ ತಡೆ ನೀಡಬೇಕು ಎಂದು ಕೋರಿದವು. ಆದರೆ, ಈ ಅರ್ಜಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಉಲ್ಲಂಘನೆಯಾಗುತ್ತಿರುವ ಮೂಲಭೂತ ಹಕ್ಕು ಯಾವುದು? ರಾಜಕೀಯ ಪಕ್ಷಗಳ ಇಚ್ಛೆಗೆ ತಕ್ಕಂತೆ ನಡೆಯುವುದು ನಮ್ಮ ಕೆಲಸವಲ್ಲ, ಅದಕ್ಕೆ ಇದು ವೇದಿಕೆಯೂ ಅಲ್ಲ. ನೀವು ಹೈಕೋರ್ಟ್​ಗೆ ಹೋಗಿ’ ಎಂದು ಕಡ್ಡಿ ಮುರಿದಂತೆ ತಿಳಿಸಿತು. ‘ಒಂದು ವೇಳೆ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡುತ್ತಿದ್ದರೆ ಅದನ್ನು ತೆಗೆದುಹಾಕಲಾಗುವುದು. ಆದರೆ, ಅಧಿಕಾರಿಗಳು ಕಾನೂನು ಉಲ್ಲಂಘಿಸಿದರೆ ಅರ್ಜಿದಾರರು ಹೈಕೋರ್ಟ್​ಗೆ ಹೋಗಬಹುದು. ದಕ್ಷಿಣ ದಿಲ್ಲಿ ಮಹಾ ನಗರ ಪಾಲಿಕೆ ಕಾರ್ಯವೈಖರಿ, ಕ್ರಮಗಳ ವಿಚಾರದಲ್ಲಿ ಅಸಮಾಧಾನವಿದ್ದರೆ ಅಲ್ಲಿ ತಿಳಿಸಬಹುದು’ ಎಂದೂ ಕೋರ್ಟ್ ಸ್ಪಷ್ಟಪಡಿಸಿತು.
ಒಂದು ಮುತ್ತಿನ ಕಥೆ: ಮದುವೆಯಂತೂ ತ್ವರಿತ, ಅದು ಬಿಂದುವಲ್ಲ ಹರಿತ!; ಖ್ಯಾತ ನಟನ ಸ್ಪಷ್ಟೀಕರಣ..

‘ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ?’ ಎನ್ನುತ್ತಲೇ ಮಹತ್ವದ ವಿಚಾರವೊಂದನ್ನು ಹೇಳಿದ್ರು ಮಾಜಿ ಪ್ರಧಾನಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fifteen =
Remember me
