|ರಾಘವ ಶರ್ಮ ನಿಡ್ಲೆನವದೆಹಲಿ
ಕಳೆದ ಶನಿವಾರ ಹನುಮಾನ್ ಜಯಂತಿ ಪ್ರಯುಕ್ತ ದೆಹಲಿಯ ಜಹಾಂಗೀರ್​ಪುರಿಯಲ್ಲಿ ಕೈಗೊಂಡಿದ್ದ ಶೋಭಾಯಾತ್ರೆ ವೇಳೆ ಅನ್ಯಕೋಮಿನ ಕೆಲ ಮಂದಿ ಕಲ್ಲುತೂರಾಟ ನಡೆಸಿದ್ದರಿಂದ ಉಂಟಾದ ಕೋಮು ಸಂಘರ್ಷ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಇದಾದ ನಾಲ್ಕೇ ದಿನದಲ್ಲಿ ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಜಹಾಂಗೀರ್​ಪುರಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಇಲ್ಲಿನ ಹತ್ತಾರು ಅನಧಿಕೃತ ಅಂಗಡಿಗಳನ್ನು ನೆಲಸಮಗೊಳಿಸಿದ್ದು, ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ವ್ಯಾಪಕ ರಾಜಕೀಯ ಮತ್ತು ಕಾನೂನು ಸಮರಕ್ಕೆ ನಾಂದಿ ಹಾಡಿದೆ.
ಬುಧವಾರ ಮತ್ತು ಗುರುವಾರ ಅಕ್ರಮ ಕಟ್ಟಡ, ಅಂಗಡಿ ಮುಂಗಟ್ಟುಗಳ ತೆರವಿಗೆ ಪಾಲಿಕೆ ಅಧಿಕಾರಿಗಳು ತೀರ್ವನಿಸಿ, 1500 ಪೊಲೀಸ್ ಮತ್ತು ಸೇನಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ದಿಲ್ಲಿ ಪಾಲಿಕೆಯ 14 ತಂಡ ಒಟ್ಟು 9 ಬುಲ್ಡೋಜರ್​ಗಳನ್ನು ಬಳಸಿ ಕಾರ್ಯಾಚರಣೆ ನಡೆಸಿತು. ಕಟ್ಟಡ, ಅಂಗಡಿಗಳನ್ನು ನೆಲಸಮಗೊಳಿಸುತ್ತಿದ್ದಂತೆಯೇ ಹಿರಿಯ ವಕೀಲರಾದ ದುಷ್ಯಂತ್ ದವೆ, ಕಪಿಲ್ ಸಿಬಲ್, ಪ್ರಶಾಂತ್ ಭೂಷಣ್ ಮತ್ತು ಪಿ.ವಿ. ಸುರೇಂದ್ರನಾಥ್ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿ ತೆರವು ಕಾರ್ಯಾಚರಣೆಗೆ ಸ್ಥಗಿತಗೊಳಿಸುವಂತೆ ಕೋರಿದರು. ಅರ್ಜಿ ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡಿದ್ದು, ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಅಂಗಡಿ ಮಾಲೀಕರಿಗೆ, ಸ್ಥಳೀಯ ನಿವಾಸಿಗಳಿಗೆ ನೊಟೀಸ್ ನೀಡದೆ ಪಾಲಿಕೆ ಕಾನೂನು ಬಾಹಿರ ಕಾರ್ಯಾಚರಣೆ ನಡೆಸಿದೆ. ಕೋರ್ಟ್ ತಡೆ ನೀಡಿದ ಬಳಿಕವೂ ತೆರವು ಕಾರ್ಯ ಮುಂದುವರಿದಿದೆ ಎಂದು ದವೆ ನ್ಯಾಯಪೀಠದ ಮುಂದೆ ಮತ್ತೊಮ್ಮೆ ಹಾಜರಾಗಿ ಅಸಮಾಧಾನ ಹೊರಹಾಕಿದರು. ಕೋರ್ಟ್​ನ ಲಿಖಿತ ಆದೇಶ ನಮ್ಮ ಕೈಸೇರಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಜಹಾಂಗೀರ್​ಪುರಿಯ ಕುಶಲ್ ಚೌಕ್​ಗೆ ಬಂದಿದ್ದ ಸಿಪಿಐ ನಾಯಕಿ ಬೃಂದಾ ಕಾರಟ್, ಕೋರ್ಟ್ ಆದೇಶದ ಪ್ರತಿ ತೋರಿಸಿ ಕಾರ್ಯಾಚರಣೆ ನಿಲ್ಲಿಸಿ ಎಂದು ಪ್ರತಿಭಟನೆ ನಡೆಸಿದರು.
ಮಸೀದಿ ಕಾಂಪೌಂಡ್ ಧ್ವಂಸ: ಹನುಮಾನ್ ಜಯಂತಿ ಶೋಭಾ ಯಾತ್ರೆ ವೇಳೆ ಕುಶಲ್ ಚೌಕ್ ಬಳಿ ಇರುವ ಮಸೀದಿ ಸಮೀಪ ಘರ್ಷಣೆ ತಾರಕಕ್ಕೇರಿದ ಪ್ರದೇಶದಲ್ಲೂ ಬುಧವಾರದ ಕಾರ್ಯಾಚರಣೆ ನಡೆಸಲಾಯಿತು. ಮಸೀದಿಯ ಕಾಂಪೌಂಡ್ ಧ್ವಂಸಗೊಳಿಸಲಾಗಿದೆ. ಅತಿಕ್ರಿಮಿಸಿಕೊಂಡು ಕಾಂಪೌಂಡ್ ನಿರ್ವಣಗೊಂಡಿದೆ ಎಂದು ನಗರಪಾಲಿಕೆ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಮಸೀದಿಗೆ ಜೋಡಿಸಿಕೊಂಡಿದ್ದ 20 ಅಂಗಡಿಗಳೂ ನೆಲಸಮಗೊಂಡಿವೆ. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿದೆ. ‘ಮಸೀದಿಯನ್ನಷ್ಟೇ ಗುರಿ ಮಾಡಲಾಗಿದೆ’ ಎಂದು ವಿಜಯವಾಣಿ ಜತೆ ಮಾತನಾಡಿದ ಸ್ಥಳೀಯ ನಿವಾಸಿ ಉಸ್ಮಾನ್ ಬೇಸರ ಹೊರಹಾಕಿದರು. ಇಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಅಗತ್ಯವಿತ್ತು ಎಂದು ಸಮರ್ಥಿಸಿಕೊಂಡ ಸಂಜಯ್ ಕುಮಾರ್ ಎಂಬ ಯುವಕ, ‘ಇದು ಕ್ರಿಮಿನಲ್​ಗಳ ಅಡ್ಡೆಯಾಗಿದೆ. ಪಿಸ್ತೂಲ್, ಬಂದೂಕು ಹೇರಳವಾಗಿ ಸಿಗುತ್ತದೆ. ದುಷ್ಟಶಕ್ತಿಗಳಿಗೆ ಆಶ್ರಯತಾಣವಾಗಿರುವ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಲ್ಲಿ ತಪ್ಪೇನಿಲ್ಲ. ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಹಿಂದುಗಳೂ ಅಂಗಡಿಗಳನ್ನು ಕಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ರಸ್ತೆಯುದ್ದಕ್ಕೂ ನಿರ್ವಿುಸಿಕೊಂಡಿದ್ದ ಸ್ಕ್ರಾ್ಯಪ್ ಡೀಲರ್​ಗಳ ಅತಿಕ್ರಮಣಕ್ಕೆ ಕಡಿವಾಣ ಹಾಕಿದ್ದೇವೆ. ಇದರಿಂದ ವಾಹನ ಸಂಚಾರ ಸುಗಮವಾಗಲಿದೆ ಮತ್ತು ಸ್ಥಳೀಯರು ಖುಷಿಯಾಗಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಅಜೆಂಡಾ ನಮಗಿಲ್ಲ. ಕಾರ್ಯಾಚರಣೆ ಜಹಾಂಗೀರ್​ಪುರಿಗೆ ಮಾತ್ರ ಸೀಮಿತವಾಗಿಲ್ಲ.
|ರಾಜಾ ಇಕ್ಬಾಲ್ ಸಿಂಗ್ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೆರೇಷನ್ ಮೇಯರ್
ಇದು ದೇಶದ ಬಡವರು ಮತ್ತು ಅಲ್ಪಸಂಖ್ಯಾತರ ಮೇಲೆ ಪ್ರಾಯೋಜಿತ ದಾಳಿ ಯಾಗಿದ್ದು, ಸಾಂವಿಧಾನಿಕ ಮೌಲ್ಯಗಳನ್ನು ಧ್ವಂಸ ಮಾಡಲಾಗಿದೆ
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ಅಪರಾಧಗಳಿಗೆ ಕುಖ್ಯಾತಿ:ದಿಲ್ಲಿಯ ಜಹಾಂಗೀರ್​ಪುರಿ ಅಪರಾಧಿ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿರುವುದು ಹೊಸ ವಿಷಯವೇನಲ್ಲ. ದೆಹಲಿಯ ಆಜಾದ್​ಪುರ್ ಮಂಡಿಗೆ ಸನಿಹದಲ್ಲಿರುವ ಜಹಾಂಗೀರ್​ಪುರಿ ಪೊಲೀಸ್ ಠಾಣೆಯಲ್ಲಿ ಪ್ರತಿ 6 ಗಂಟೆಗೆ ಸರಾಸರಿ ಒಂದು ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ದರೋಡೆ, ಕಳ್ಳತನ, ವಂಚನೆ, ಹಲ್ಲೆ, ಕೊಲೆ ಪ್ರಕರಣಗಳು ಇಲ್ಲಿ ಸರ್ವೆಸಾಮಾನ್ಯ. ದರೋಡೆ ಪ್ರಕರಣ ಹೆಚ್ಚು ದಾಖಲಾಗುವ ಮೊದಲ 10 ಠಾಣೆಯಲ್ಲಿ ಜಹಾಂಗೀರ್​ಪುರಿಯೂ ಸ್ಥಾನ ಪಡೆದಿದೆ.
ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು… ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ

ಮೊನ್ನೆ ಎಚ್​ಡಿಕೆ, ನಿನ್ನೆ ಡಿಕೆಶಿ, ಇಂದು ಮೊಯ್ಲಿ!; ಏನದು?

ರಾಜ್ಯದಲ್ಲಿ ಇನ್ನೂ 4 ದಿನ ಮಳೆ; ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
