ನವದೆಹಲಿ:ಭಾರತಕ್ಕೆ 2023ರ ವೇಳೆಗೆ ಬುಲೆಟ್​ ರೈಲು​ ತರಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಸ್ತೃತ ಪ್ರಾಜೆಕ್ಟ್​ ವರದಿ (ಡಿಪಿಆರ್​) ಅನ್ನು ಸಿದ್ಧ ಮಾಡಲಾಗುತ್ತಿದೆ. ದೇಶದಲ್ಲಿ ಒಟ್ಟು ಆರು ಮಾರ್ಗಗಳಲ್ಲಿ ಬುಲೆಟ್​ ರೈಲು​ ಬಿಡುವ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ಮೈಸೂರು, ಬೆಂಗಳೂರು ಮತ್ತು ವಾರಾಣಸಿಯ ಹೆಸರೂ ಸಹ ಕೇಳಿಬಂದಿದೆ.
ಒಟ್ಟು ಆರು ಬುಲೆಟ್​ ರೈಲು​ಗಳು ಭಾರತಕ್ಕೆ ಬರಲಿವೆ. ಡಿಪಿಆರ್​ ಸಿದ್ಧವಾದ ನಂತರ ಅದಕ್ಕೆ ಹಣ ಮಂಜೂರು ಮಾಡುವುದಾಗಿ ಸರ್ಕಾರ ತಿಳಿಸಿದೆ. ಇಲಾಖೆಯ ವತಿಯಿಂದ ಡಿಪಿಆರ್​ ಸಿದ್ಧವಾಗುತ್ತಿದ್ದು, ಹೆಚ್ಚಿನ ಜನ ಸಂಚಾರ ಇರುವ ಆರು ಪ್ರಮುಖ ಮಾರ್ಗಗಳಲ್ಲಿ ರೈಲನ್ನು ಬಿಡುವುದಾಗಿ ತಿಳಿಸಲಾಗಿದೆ. ಈಗಾಗಲೇ ಬುಲೆಟ್​ ರೈಲು ಸಂಚಾರಕ್ಕೆ ನಿಗದಿ ಮಾಡಲಾಗಿರುವ ಮಾರ್ಗಗಳು ಇಂತಿವೆ.
1) ದೆಹಲಿ – ನೊಯ್ಡಾ – ಆಗ್ರಾ – ಲಖನೌ – ವಾರಾಣಸಿ (865 ಕಿ.ಮೀ)2) ದೆಹಲಿ – ಜೈಪುರ – ಉದಯಪುರ – ಅಹಮದಾಬಾದ್​ (886 ಕಿ.ಮೀ)3) ಮುಂಬೈ – ನಾಸಿಕ್​ – ನಾಗಪುರ​ (753 ಕಿ.ಮೀ)4) ಮುಂಬೈ – ಪುಣೆ – ಹೈದರಾಬಾದ್​ (711 ಕಿ.ಮೀ)5) ಚೆನ್ನೈ – ಬೆಂಗಳೂರು – ಮೈಸೂರು (435 ಕಿ.ಮೀ)6) ದೆಹಲಿ – ಚಂಡೀಗಢ – ಲುಧಿಯಾನಾ – ಜಲಾಂಧರ್​ – ಅಮೃತ​ಸರ​ ( 459 ಕಿ.ಮೀ)
ಈ ಎಲ್ಲ ಮಾರ್ಗಗಳಲ್ಲಿ ಸಂಚಾರ ಮಾಡಲಿರುವ ರೈಲುಗಳು ಹೈ-ಸ್ಪೀಡ್​ (ಗಂಟೆಗೆ 300 ಕಿ.ಮೀ) ಅಥವಾ ಸೆಮಿ ಹೈ ಸ್ಪೀಡ್​ (ಗಂಟೆಗೆ 160-250 ಕಿ.ಮೀ) ವೇಗದಲ್ಲಿ ಸಂಚರಿಸಲಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 16 =
Remember me
