ಕಲ್ಕತ್ತಾ:ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಭರದಲ್ಲಿ ಮಾನವೀಯತೆ ಮರೆತು ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ನಾವು ನೋಡಿರುತ್ತೇವೆ. ಇದೀಗ ಇದೇ ರೀತಿಯ ಘಟನೆಯೊಂದು ಪಶ್ಚಿಮ ಬಂಗಳಾದಲ್ಲಿ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ದುಷ್ಕೃತ್ಯ ಎಸಗಿದವರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಆದರೆ, ಈವರೆಗೆ ಆರೋಪಿಗಳನ್ನು ಬಂಧಿಸದೆ ಇರುವುದು ಆಕ್ರೋಶಕ್ಕೆ ಗುರಿಯಾಗಿದೆ. ಘಟನೆ ಪಶ್ಚಿಮ ಬಂಗಾಳದ ಯಾವ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದು ಈವರೆಗೆ ತಿಳಿದು ಬಂದಿಲ್ಲ.
Dog pups and their Mum beaten to death in West Bengal. FIR has already been filed but no action taken.More details:https://t.co/yxLCcNGF56@KolkataPolice@PetaIndiapic.twitter.com/7smiTDoDmY
ಇದನ್ನೂ ಓದಿ:ಅಧಿಕಾರಿಗಳಿಗೆ ತಲೆನೋವು ತಂದ ಕೋಳಿ; ಕಾರಣ ಕೇಳಿದರೆ ನಕ್ಕು ಸುಸ್ತಾಗುವುದು ಪಕ್ಕಾ
ವೈರಲ್​ ಆಗಿರುವ ವಿಡಿಯೋದಲ್ಲಿ ಪುಂಡರ ಗುಂಪೊಂದು ಬೀದಿ ನಾಯಿ ಮತ್ತು ಅದರ ಮರಿಗಳನ್ನು ಬಲೆಯೊಂದರಲ್ಲಿ ಬಂಧಿಸಿ ನಿರ್ದಯವಾಗಿ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ನಾಯಿಗಳನ್ನು ಅಮಾನುಷವಾಗಿ ಜೋರಾಗಿ ನಗುತ್ತಾ ಥಳಿಸುತ್ತಿರುವುದನ್ನು ನೋಡುತ್ತಿರುವ ಸಾರ್ವಜನಿಕರು ಅದನ್ನು ಬಿಡಿಸಲು ಯಾರು ಮುಂದೆ ಬಾರದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋ ವೈರಲ್​ ಆದ ಬಳಿಕ ಪಶ್ಚಿಮ ಬಂಗಾಳದ ಸಂಕ್ರೈಲ್ ಪೊಲೀಸ್​ ಠಾಣೆಯಲ್ಲಿ ಭಾರತ ದಂಡ ಸಂಹಿತೆ (IPC Section) 428 ಮತ್ತು 429 ಮತ್ತು ಪಿಸಿಎ ಆಕ್ಟ್ 11 ರ ಅಡಿಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ FIR ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
