ಮುಂಬೈ:ಶುಕ್ರವಾರ ಆರಂಭಿಕ ಕುಸಿತ ಕಂಡಿದ್ದ ಷೇರು ಮಾರುಕಟ್ಟೆಯು ಪ್ರಮುಖ ಸ್ಟಾಕ್​ಗಳಾದ ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಟಿಸಿಯಲ್ಲಿನ ಖರೀದಿಯಿಂದಾಗಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆ ಕಂಡವು.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 253.31 ಅಂಕಗಳು ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 73,917.03 ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 62.25 ಅಂಕಗಳು ಅಥವಾ ಶೇಕಡಾ 0.28 ರಷ್ಟು ಏರಿಕೆಯಾಗಿ 22,466.10 ಕ್ಕೆ ತಲುಪಿತು. ಸ್ಮಾಲ್ ಮತ್ತು ಮಿಡ್-ಕ್ಯಾಪ್ ಸೂಚ್ಯಂಕಗಳು ಬೆಂಚ್‌ಮಾರ್ಕ್‌ ಸೂಚ್ಯಂಕಗಳನ್ನು ಮೀರಿಸಿ, ಕ್ರಮವಾಗಿ 1.65% ಮತ್ತು 0.88% ನಷ್ಟು ಹೆಚ್ಚಳವನ್ನು ದಾಖಲಿಸಿದವು,
ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಷೇರುಗಳ ಬೆಲೆ ಶೇಕಡಾ 5.97ರಷ್ಟು ಏರಿಕೆಯಾಯಿತು. ಜೆಎಸ್​ಡಬ್ಲ್ಯು ಸ್ಟೀಲ್, ಅಲ್ಟ್ರಾ ಸಿಮೆಂಟ್, ಕೋಟಕ್ ಬ್ಯಾಂಕ್, ಐಟಿಟಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್​ಟಿಪಿಸಿ ಷೇರುಗಳ ಬೆಲೆ ಕೂಡ ಹೆಚ್ಚಳ ಕಂಡಿತು. ಇದಕ್ಕೆ ವ್ಯತಿರಿಕ್ತವಾಗಿ, ಟಿಸಿಎಸ್, ಎಚ್‌ಸಿಎಲ್ ಟೆಕ್, ಎಚ್‌ಯುಎಲ್, ನೆಸ್ಲೆ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ವಿಪ್ರೋ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಅನುಭವಿಸಿದವು.
“ಅಮೆರಿಕವನ್ನು ಸುತ್ತುವರಿದಿರುವ ಮಿಶ್ರ ಜಾಗತಿಕ ಸಂಕೇತಗಳು ಮತ್ತು ಅನಿಶ್ಚಿತತೆಗಳ ಹೊರತಾಗಿಯೂ, ಭಾರತೀಯ ಮಾರುಕಟ್ಟೆಯು ದೃಢವಾದ ಚೇತರಿಕೆ ಅನುಭವಿಸಿತು, ಇದು ವಿಶಾಲ ಮಾರುಕಟ್ಟೆಯ ಉತ್ತಮ ಕಾರ್ಯಕ್ಷಮತೆ ಮತ್ತು ಧನಾತ್ಮಕ ತ್ರೈಮಾಸಿಕ ಗಳಿಕೆಗಳಿಂದ ಉತ್ತೇಜಿಸಲ್ಪಟ್ಟಿದೆ. ಇದಲ್ಲದೆ, ಕೆಲವು ಪ್ರಮುಖ ಷೇರುಗಳ ಗಳಿಕೆಗಳು ನಿರೀಕ್ಷೆಗಳನ್ನು ಮೀರಿವೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಷೇರುಗಳು ಕುಸಿತದ ಸಮಯದಲ್ಲಿ ಖರೀದಿ ಆಸಕ್ತಿ ಪ್ರದರ್ಶಿಸಿದವು. ಆಟೋ ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳು ವಿಶೇಷವಾಗಿ ಬಲವಾದ ಗಳಿಕೆ ತೋರಿವೆ” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಶಾಂಘೈ ಮತ್ತು ಹಾಂಗ್​ಕಾಂಗ್ ಲಾಭ ಗಳಿಸಿದರೆ, ಸಿಯೋಲ್ ಮತ್ತು ನಿಕ್ಕಿ ನಷ್ಟ ಕಂಡವು. ಐರೋಪ್ಯ ಮಾರುಕಟ್ಟೆಗಳು ನಷ್ಟದಲ್ಲಿ ವಹಿವಾಟು ನಡೆಸಿದವು. ಗುರುವಾರ ರಾತ್ರಿಯ ವಹಿವಾಟಿನಲ್ಲಿ ಅಮೆರಿಕದ ವಾಲ್ ಸ್ಟ್ರೀಟ್ ಹಸಿರು ಲಾಭ ಗಳಿಸಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 776.49 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ. ಗುರುವಾರ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 676.69 ಅಂಕಗಳಷ್ಟು ಏರಿಕೆಯಾಗಿ 73,663.72 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 203.30 ಅಂಕಗಳಷ್ಟು ಏರಿಕೆಯಾಗಿ 22,403.85 ಕ್ಕೆ ತಲುಪಿತ್ತು.
ಎಸ್​ ಆ್ಯಡ್​ ಪಿ ಬಿಎಸ್​ಇ ಮಿಡ್ ಕ್ಯಾಪ್​ ಸೂಚ್ಯಂಕ: 42,841.10 (1.18% ಹೆಚ್ಚಳ)ಎಸ್​ ಆ್ಯಡ್​ ಪಿ ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ: 47,591.67 (1.39% ಹೆಚ್ಚಳ)ನಿಫ್ಟಿ ಮಿಡ್​ಕ್ಯಾಪ್​ 100 ಸೂಚ್ಯಂಕ: 51,604.90 (0.88% ಹೆಚ್ಚಳ)ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ: 16,870.80 (1.65% ಹೆಚ್ಚಳ)

2031ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣ: ಹಣಕಾಸು ಸಚಿವೆ ಸೀತಾರಾಮನ್ ವಿಶ್ವಾಸ

183.35 ಲಕ್ಷ ಕೋಟಿ ರೂಪಾಯಿ: ವಿಶ್ವದ 15 ಅಗ್ರ ಶ್ರೀಮಂತರ ಆಸ್ತಿ ಮೊತ್ತ ಇದು…

ಭಾರತದ ಆರ್ಥಿಕ ಬೆಳವಣಿಗೆ ದರವು ಅಮೆರಿಕಕ್ಕಿಂತ 3 ಪಟ್ಟು ಹೆಚ್ಚಾಗಲಿದೆ: ವಿಶ್ವ ಸಂಸ್ಥೆ ವರದಿಯಲ್ಲಿ ಏನೇನು ವಿವರಗಳಿಗೆ ನೀವೇ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + ten =
Remember me
