ಮುಂಬೈ:ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು, ಜಾಗತಿಕ ಷೇರುಗಳಲ್ಲಿನ ದೃಢವಾದ ಪ್ರವೃತ್ತಿಯ ನಡುವೆ ಮಾರುಕಟ್ಟೆಯ ಪ್ರಮುಖ ಷೇರುಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇನ್ಫೋಸಿಸ್‌ನಲ್ಲಿ ಭಾರಿ ಖರೀದಿ ಕಂಡು ಬಂದು ಸೂಚ್ಯಂಕ ಏರಿಕೆ ಕಂಡಿತು.
ಅಲ್ಲದೆ, ತಾಜಾ ವಿದೇಶಿ ನಿಧಿಯ ಒಳಹರಿವು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ರಿಯಾಲ್ಟಿ, ಕನ್ಸೂಮರ್​ ಡ್ಯೂರೇಬಲ್​ ಮತ್ತು ಯುಟಿಲಿಟಿ ಸ್ಟಾಕ್‌ಗಳಿಗೆ ತೀವ್ರ ಬೇಡಿಕೆ ಕಂಡುಬಂದಿತು.
ನಾಲ್ಕನೇ ಸತತ ವಹಿವಾಟಿನ ದಿನವಾದ ಸೋಮವಾರ ಸೂಚ್ಯಂಕಗಳು ಏರಿಕೆ ದಾಖಲಿಸಿದವು. 30 ಷೇರುಗಳ ಬಿಎಸ್‌ಇ ಸೂಚ್ಯಂಕ 308.37 ಅಂಕಗಳು ಅಥವಾ ಶೇ. 0.40ರಷ್ಟು ಏರಿಕೆ ಕಂಡು 77,301.14 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 374 ಅಂಕಗಳು ಅಥವಾ 0.48 ಪ್ರತಿಶತದಷ್ಟು ಜಿಗಿದು 77,366.77 ನ ತಾಜಾ ಜೀವಿತಾವಧಿ ಮಟ್ಟವನ್ನು ತಲುಪಿತ್ತು.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 92.30 ಅಂಕಗಳು ಅಥವಾ ಶೇ. 0.39 ರಷ್ಟು ಏರಿಕೆಯಾಗಿ 23,557.90 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 113.45 ಅಂಕಗಳು ಅಥವಾ ಶೇ. 0.48 ರಷ್ಟು ಏರಿಕೆ ಕಂಡು 23,579.05 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.
ಪ್ರಮುಖ ಷೇರುಗಳಾದ ಪವರ್ ಗ್ರಿಡ್, ವಿಪ್ರೋ, ಐಸಿಐಸಿಐ ಬ್ಯಾಂಕ್, ಟೈಟಾನ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಲಾಭ ಗಳಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಐಟಿಸಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್​ ಷೇರುಗಳ ಬೆಲೆಗಳು ಕುಸಿತ ಕಂಡವು.
ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೋ ಮತ್ತು ಶಾಂಘೈ ಲಾಭ ಕಂಡರೆ, ಹಾಂಗ್ ಕಾಂಗ್ ಕುಸಿತ ದಾಖಲಿಸಿತು. ಐರೋಪ್ಯ ಮಾರುಕಟ್ಟೆಗಳು ಲಾಭ ಗಳಿಸಿದವು. ಸೋಮವಾರ ಅಮೆರಿಕ ಮಾರುಕಟ್ಟೆಗಳು ಏರಿಕೆ ಕಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 2,175.86 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಈದ್-ಉಲ್-ಅಧಾ ನಿಮಿತ್ತ ಸೋಮವಾರ ಷೇರು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಶುಕ್ರವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 181.87 ಅಂಕಗಳು ಅಥವಾ ಶೇ. 0.24 ರಷ್ಟು ಏರಿಕೆ ಕಂಡು 76,992.77ಕ್ಕೆ ಮುಟ್ಟಿತ್ತು. ನಿಫ್ಟಿ 50 ಸೂಚ್ಯಂಕವು 66.70 ಅಂಕಗಳು ಅಥವಾ ಶೇ 0.29ರಷ್ಟು ಏರಿಕೆಯಾಗಿ 23,465.60 ಕ್ಕೆ ತಲುಪಿತ್ತು.
ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಅಗ್ರಸ್ಥಾನಕ್ಕೆ ಮರಳಿದ ವಿರಾಟ್​ ಕೊಹ್ಲಿ

ಅಸ್ಸಾಂ ಸಿಟಿಸಿ ಚಹಾಗೆ ಭರ್ಜರಿ ಡಿಮ್ಯಾಂಡು: ಹರಾಜಿನಲ್ಲಿ ದೊರೆತ ದಾಖಲೆಯ ಬೆಲೆ ಎಷ್ಟು ಗೊತ್ತೆ?

ಎಡು-ಫಿನ್‌ಟೆಕ್ ಸ್ಟಾರ್ಟಪ್​ನಲ್ಲಿ ರೋಹಿತ್ ಶರ್ಮಾ ಹೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 14 =
Remember me
