ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಮೂರನೇ ಅವಧಿಯ ಚೊಚ್ಚಲ ಬಜೆಟ್​ನಲ್ಲಿ ರೈತರಿಗೆ ಬಂಪರ್​ ಕೊಡುಗೆಗಳನ್ನು ಘೋಷಿಸಲಾಗಿದ್ದು, ವಿತ್ ಸಚಿವೆ ನಿರ್ಮಲಾ ಸೀತಾರಾಮನ್ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡುವ ಮೂಲಕ​ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ವಿತ್ತ ಸಚಿವರು ಕ್ಷೇತ್ರ ವಲಯಕ್ಕೆ ಅನುಗುಣವಾಗಿ ಬಜೆಟ್​​​ ಮಂಡನೆ ಮಾಡಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮಹಿಳೆ, ಕೃಷಿ, ಹೀಗೆ ಅನೇಕ ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ಘೋಷಿಸಿದ್ದಾರೆ.
ಅದರಂತೆ ಉತ್ಪಾದಕತೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪ್ರಭೇದಗಳನ್ನು ಹೆಚ್ಚಿಸುವುದು ಮತ್ತು ನೈಸರ್ಗಿಕೆ ಕೃಷಿಗೆ ಆದ್ಯತೆ. ಮುಂದಿನ 2 ವರ್ಷಗಳಲ್ಲಿ 2 ಕೋಟಿ ರೈತರಿಗೆ ಬೆಂಬಲ. 5 ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ ನೀಡಲು ಸರ್ಕಾರ ಮುಂದಾಗಿದ್ದು, ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ವಿತ್ತ ಸಚಿವರು ತಮ್ಮ ಬಜೆಟ್​ ಭಾಷಣದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಈ ಟ್ರೈನು ನಿಮ್ಮಪ್ಪಂದ…ಮೊದಲು ನನಗೆ ಜಾಗ ಬಿಡು; ಸೀಟಿಗಾಗಿ ವ್ಯಕ್ತಿಯ ಜತೆ ಮಹಿಳೆ ಕಿತ್ತಾಟ
ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ ತರುವುದು. ಸಾವಯುವ ಕೃಷಿಗೆ ಆದ್ಯತೆ ನೀಡುವುದು. ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ, ಮಾರುಕಟ್ಟೆಗಳಿಗೂ ಒತ್ತು ನೀಡಲಾಗುವುದು. ತರಕಾರಿ ಪೂರೈಕೆಗಾಗಿ ಸಪ್ಲೈ ಚೈನ್ ಬಲಗೊಳಿಸಲಾಗುತ್ತಿದೆ. ಹಾಗೂ ರೈತರ ಅನುಕೂಲಕ್ಕಾಗಿ ಡಿಜಿಟಲ್ ಬೆಳೆ ಸಮೀಕ್ಷೆ ಮಾಡಲಾಗುವುದು.
ಜನ ಸಮರ್ಥ ಆಧಾರಿತ ಪ್ರಮಾಣಪತ್ರಗಳ ವಿತರಣೆ, ಶ್ರಿಂಪ್ ಬ್ರೂಡ್ ಸ್ಟಾಕ್ಗಳು. ಸೀಗಡಿ ಕೃಷಿ, ಸಹಕಾರ ವಲಯಕ್ಕಾಗಿ ರಾಷ್ಟ್ರೀಯ ಸಹಕಾರ ನೀತಿ, ಕೃಷಿ ಉತ್ಪಾದನೆಯಲ್ಲಿ ಹೆಚ್ಚನ ನಮ್ಮ ಗುರಿಯಾಗಿರುವ ಕಾರಣ ನಮ್ಮ ಸರ್ಕಾರ ಈ ಬಾರಿ ರೈತರಿಗೆ ಹೆಚ್ಚು ಆದ್ಯತೆ ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಬಜೆಟ್​ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
