ನವದೆಹಲಿ:ಕೋವಿಡ್ ಮಹಾಮಾರಿಯನ್ನು ಎದುರಿಸಲು ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರಗಳು ಮುಂದಿಟ್ಟಿದ್ದ ಕೋರಿಕೆಯನ್ನು ಪರಿಗಣಿಸುವ ಜತೆಯಲ್ಲೇ, ಎಪಿಎಂಸಿ ಕಾಯ್ದೆಗೆ ಬೆಂಬಲವಾಗಿ ಕೃಷಿ ಕ್ಷೇತ್ರಗಳ ಮೂಲಸೌಕರ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಿಸಿದೆ. ಸಂಪುಟ ಪುನಾರಚನೆ ಗೊಂಡ ಬಳಿಕ ಗುರುವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಹೊರಬಿದ್ದಿದೆ.
ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವುದಕ್ಕಾಗಿ 23,123 ಕೋಟಿ ರೂ. ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದ್ದು, ಮುಂದಿನ ಒಂಬತ್ತು ತಿಂಗಳ ಅವಧಿಯಲ್ಲಿ ಅನುಷ್ಠಾನಗೊಳಿಸುವಂತೆ ಈ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವ್ಯ ತಿಳಿಸಿದ್ದಾರೆ. 2ನೇ ಹಂತದ ಎಮರ್ಜೆನ್ಸಿ ರೆಸ್ಪಾನ್ಸ್ ಆಂಡ್ ಹೆಲ್ತ್ ಸಿಸ್ಟಮ್ ಪ್ರಿಪೇರ್ಡ್​ನೆಸ್ ಪ್ಯಾಕೇಜ್ ಇದಾಗಿದ್ದು, ಕೇಂದ್ರ ಸರ್ಕಾರ 15,000 ಕೋಟಿ ರೂಪಾಯಿಯನ್ನು ಈಗಾಗಲೇ ನೀಡಿದೆ. ದೇಶಾದ್ಯಂತ ಕೋವಿಡ್​ಗೆ ಮೀಸಲಾದ ಆಸ್ಪತ್ರೆ, ಆರೋಗ್ಯ ಕೇಂದ್ರ ಸ್ಥಾಪನೆಗೆ ಇದು ವಿನಿಯೋಗವಾಗುತ್ತಿದೆ. ಕೇಂದ್ರ ಸರ್ಕಾರದ 15,000 ಕೋಟಿ ರೂ. ಜತೆಗೆ ರಾಜ್ಯಗಳು ತಮ್ಮ ಪಾಲಿನ 8,000 ಕೋಟಿ ರೂ. ಹೂಡಿಕೆ ಮಾಡಬೇಕು. ಆ ಮೂಲಕ ಜಂಟಿಯಾಗಿ ದೇಶದ ಎಲ್ಲ 736 ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಸುಧಾರಿಸುವ ಕೆಲಸ ಮಾಡಬೇಕು ಎಂದು ಮಾಂಡವ್ಯ ವಿವರಿಸಿದರು. ಆ ಮೂಲಕ ಜಂಟಿಯಾಗಿ ದೇಶದ ಎಲ್ಲ 736 ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಸುಧಾರಿಸುವ ಕೆಲಸ ಮಾಡಬೇಕು ಎಂದು ಮಾಂಡವ್ಯ ವಿವರಿಸಿದರು.

ಕಾಯ್ದೆ ತಿದ್ದುಪಡಿಗೆ ಅವಕಾಶ ಮುಕ್ತ: ಕೇಂದ್ರ ಅಂಗೀಕರಿಸಿರುವ ಕೃಷಿ ಕಾನೂನುಗಳಲ್ಲಿ ಇರುವ ಲೋಪ ದೋಷ ಸರಿಪಡಿಸುವುದಕ್ಕೆ ಸರ್ಕಾರ ಸಿದ್ಧವಾಗಿದೆ. ಆದರೆ, ಚರ್ಚೆಗೆ ಬಾರದೆ ಲೋಪ ದೋಷಗಳನ್ನು ಸರಿಯಾಗಿ ತಿಳಿಸದೇ ಪ್ರತಿಭಟನೆ ಮುಂದುವರಿಸಿದರೆ ಅದನ್ನು ಪುರಸ್ಕರಿಸಲಾಗದು. ಪ್ರತಿಭಟನಾ ನಿರತರ ಜತೆಗೆ ಮಾತುಕತೆಗೆ ಸರ್ಕಾರ ಸದಾ ಸಿದ್ಧವಿದೆ. ಕೃಷಿ ಕಾನೂನು ಜಾರಿಗೆ ಬಂದರೆ ಎಪಿಎಂಸಿಗಳು ರದ್ದುಗೊಳ್ಳುತ್ತವೆ ಎಂಬ ವಾದದಲ್ಲಿ ಹುರುಳಿಲ್ಲ. ಅದನ್ನು ಬಲಪಡಿಸಲು ಸರ್ಕಾರ ಅನುದಾನ ನೀಡುತ್ತಿದೆ ಎಂದು ಸಚಿವ ತೋಮರ್ ಹೇಳಿದರು.
ನಡವಳಿಗೆ ಮಾದರಿಯಾಗಲಿ:‘ಕೋವಿಡ್ ಸಮರ ಇನ್ನೂ ಮುಗಿದಿಲ್ಲ. ಸಚಿವರಾಗಿ ನಮ್ಮ ನಡವಳಿಕೆ ಮಾದರಿಯಾಗಿ ಇರಬೇಕು. ಜನರಲ್ಲಿ ಭೀತಿ ಹುಟ್ಟಿಸುವ ಬದಲು ಜಾಗೃತಿ ಮೂಡಿಸೋಣ. ಹೊಸ ಚಿಂತನೆಗಳು, ಆಲೋಚನೆಗಳನ್ನು ಹಂಚಿಕೊಳ್ಳೋಣ’ ಇದು ಪ್ರಧಾನಿ ನರೇಂದ್ರ ಮೋದಿ ಹೊಸ ಸಚವರಿಗೆ ನೀಡಿದ ಸಲಹೆ. ಕೇಂದ್ರ ಸಚಿವರ ಜತೆ ಗುರುವಾರ ಮಾತುಕತೆ ನಡೆಸಿದ ಅವರು ಪ್ರತಿಯೊಬ್ಬರು ಎರಡು ಹೊಸ ಜನಪರ ಸಲಹೆಗಳನ್ನು ನೀಡಿದರೆ ಅದರ ಅನುಷ್ಠಾನದ ಕಡೆಗೆ ಗಮನಹರಿಸಬಹುದು. ಪ್ರತಿಯೊಬ್ಬರೂ ಸಮಯಕ್ಕೆ ಬೆಲೆ ಕೊಡಬೇಕೆಂದರು.
ಕೃಷಿ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಇದನ್ನು ಅಗ್ರಿಕಲ್ಚರಲ್ ಪ್ರೊಡ್ಯೂಸ್ ಆಂಡ್ ಲೈವ್​ಸ್ಟಾಕ್ ಮಾರ್ಕೆಟ್ ಕಮಿಟಿಗಳ (ಎಪಿಎಂಸಿ) ಮೂಲಕ ಕೃಷಿಕರ ಒಳಿತಿಗಾಗಿ ಬಳಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಎಪಿಎಂಸಿ ಬಲವರ್ಧನೆ ವಿಚಾರ ಹಿಂದೆ ಪ್ರಸ್ತಾಪವಾಗಿತ್ತು. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಈಗ 1 ಲಕ್ಷ ಕೋಟಿ ರೂ.ಗಳನ್ನು ಆತ್ಮನಿರ್ಭರ ಭಾರತ ಉಪಕ್ರಮದಂತೆ ಕೃಷಿಕರ ಮೂಲ ಸೌಕರ್ಯ ನಿಧಿಗೆ ನೀಡಲಾಗು ತ್ತಿದೆ. ಇದನ್ನು ಎಪಿಎಂಸಿಗಳ ಮೂಲಕ ಬಳಸಬಹುದಾಗಿದೆ.
ಪ್ರತಿ ಮನೆಗೆ ಶುದ್ಧ ಕುಡಿಯುವ ನಲ್ಲಿ ನೀರು ಸರಬರಾಜು ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾ ಕಾಂಕ್ಷೆ ಯೋಜನೆಯಾದ ಜಲ್ ಜೀವನ್ ಮಿಷನ್ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 5,009 ಕೋಟಿ ರೂ. ಅನುದಾನ ನಿಗದಿಪಡಿಸಿದೆ. 2020-21ನೇ ಸಾಲಿಗೆ ಹೋಲಿಸಿದರೆ ಅನುದಾನದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ಯೋಜನೆಗೆ 1,189.40 ಕೋಟಿ ರೂ.ಒದಗಿಸಲಾಗಿತ್ತು. 2021-22ನೇ ಸಾಲಿಗೆ 5,009 ಕೋಟಿ ರೂ. ನಿಗದಿ ಪಡಿಸಲಾಗಿದೆ. 2023ರೊಳಗೆ ರಾಜ್ಯದ ಪ್ರತಿಯೊಂದು ಗ್ರಾಮೀಣ ಮನೆಗೆ ನಲ್ಲಿ ನೀರು ಪೂರೈಸಲು ಕೇಂದ್ರ ಎಲ್ಲ ನೆರವು ನೀಡಲಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಶ್ವಾಸನೆ ನೀಡಿದ್ದಾರೆ.
ತೆಂಗಿನ ಕೃಷಿ ಹೆಚ್ಚಿಸುವುದಕ್ಕೆ ತೆಂಗು ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಅಧಿಕಾರಿ ವರ್ಗಕ್ಕೆ ಹೊರತಾದವರೂ ಇನ್ನು ತೆಂಗು ಮಂಡಳಿ ಅಧ್ಯಕ್ಷರಾಗಲಿದ್ದಾರೆ. ತೆಂಗು ಕೃಷಿಕರ ಸಮುದಾಯದವರಿಗೇ ಆದ್ಯತೆ ನೀಡಲಾಗುವುದು. ತೆಂಗು ಕೃಷಿಕರಿಗೆ ಪ್ರಾಯೋಗಿಕವಾಗಿ ಕೃಷಿ ಅನುಭವ ಇರುವ ಕಾರಣ ಅವರು ಅಧ್ಯಕ್ಷರಾಗುವುದೇ ಸರಿಯಾದ ನಿರ್ಣಯ ಎಂದು ತೋಮರ್ ವಿವರಿಸಿದರು.
ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ 1979ಕ್ಕೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಗುರುವಾರ ತೀರ್ವನಿಸಿದೆ. ಈ ಪ್ರಸ್ತಾವನೆಯನ್ನು ಕೃಷಿ, ಸಹಕಾರ ಮತ್ತು ಕೃಷಿಕರ ಕಲ್ಯಾಣ ಇಲಾಖೆ ಸಿದ್ಧಪಡಿಸಿದೆ. ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಾನ್-ಎಕ್ಸಿಕ್ಯೂಟಿವ್ ಆಗಿಟ್ಟು, ಒಟ್ಟಾರೆ ಕಾರ್ಯಾಚರಣೆ ನೋಡಿಕೊಳ್ಳಲು ಸಿಇಒ ಒಬ್ಬರನ್ನು ನೇಮಕ ಮಾಡುವ ಅಂಶ ಪ್ರಸ್ತಾವನೆಯಲ್ಲಿದೆ. ಇದಲ್ಲದೆ, ಮಂಡಳಿಗೆ ಆರು ಸದಸ್ಯರನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಲಿದೆ. ಸದ್ಯ ನಾಲ್ಕು ಸದಸ್ಯರನ್ನು ಕೇಂದ್ರ, ನಾಲ್ಕು ಸದಸ್ಯರನ್ನು ರಾಜ್ಯ ಸರ್ಕಾರಗಳು ನಾಮನಿರ್ದೇಶನ ಮಾಡುತ್ತಿವೆ. ಆಂಧ್ರ ಪ್ರದೇಶ ಮತ್ತು ಗುಜರಾತ್​ನ ಸದಸ್ಯರು ಮಂಡಳಿಗೆ ಸೇರ್ಪಡೆಯಾಗಲಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂದ್ರು 281 ವೈದ್ಯರು!; ಯಾಕೆ, ಯಾರಲ್ಲಿ?

ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 15 =
Remember me
