ಮುಂಬೈ:ಗೌತಮ್ ಅದಾನಿ ಸಮೂಹದ ಕಂಪನಿಯಾದ ಅದಾನಿ ವಿಲ್ಮರ್ ಲಿಮಿಟೆಡ್‌ನ ನಿವ್ವಳ ಲಾಭದಲ್ಲಿ ಬಂಪರ್ ಜಿಗಿತ ಕಂಡುಬಂದಿದೆ. 2023-24 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 156.75 ಕೋಟಿ ರೂ.ಗಳಾಗಿದ್ದು, ಶೇ. 67ರಷ್ಟು ಹೆಚ್ಚಳವಾಗಿದೆ. 2022-23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ರೂ 93.61 ಕೋಟಿ ಲಾಭ ಗಳಿಸಿತ್ತು.
2023-24ರ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ಆದಾಯ ರೂ.13,342.26 ಕೋಟಿಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 14,185.68 ಕೋಟಿ ರೂ. ಆದಾಯ ಇತ್ತು.. ಈ ಬಾರಿ ಕುಸಿತವಾಗಿದೆ ಎಂದು ಅದಾನಿ ವಿಲ್ಮರ್ ಷೇರು ಮಾರುಕಟ್ಟೆಗೆ ತಿಳಿಸಿದೆ.
2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಲಾಭವು 147.99 ಕೋಟಿ ರೂ.ಗೆ ಕುಸಿದಿದೆ. ಇದು 2022-23 ರ ಹಣಕಾಸು ವರ್ಷದಲ್ಲಿ 582.12 ಕೋಟಿ ರೂ. ಆಗಿತ್ತು. 2023-24ರ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ 51,555.24 ಕೋಟಿ ರೂ.ಗೆ ಇಳಿಕೆಯಾಗಿದ್ದು, 2022-23ರಲ್ಲಿ ಇದು 59,148.32 ಕೋಟಿ ರೂ. ಇತ್ತು.
ತ್ರೈಮಾಸಿಕ ಫಲಿತಾಂಶಗಳ ಕುರಿತು ಅದಾನಿ ವಿಲ್ಮಾರ್ ಎಂಡಿ ಮತ್ತು ಸಿಇಒ ಆಂಗ್ ಶುಮ್ಲಿಕ್ ಅವರು, ಚಿಲ್ಲರೆ ವ್ಯಾಪಾರದ ಹೆಚ್ಚಳದಿಂದಾಗಿ ನಮ್ಮ ಖಾದ್ಯ ತೈಲ ಮತ್ತು ಆಹಾರ ವ್ಯವಹಾರದಲ್ಲಿ ಬಲವಾದ ಬೆಳವಣಿಗೆಯನ್ನು ಕಂಡಿದ್ದೇವೆ ಎಂದು ಹೇಳಿದರು.
ಅದಾನಿ ಗ್ರೂಪ್‌ ಮತ್ತು ಸಿಂಗಾಪುರದ ವಿಲ್ಮರ್ ಗ್ರೂಪ್‌ ನಡುವಿನ ಜಂಟಿ ಉದ್ಯಮವಾಗಿದೆ (ಜೆವಿ) ಅದಾನಿ ವಿಲ್ಮಾರ್ ಲಿಮಿಟೆಡ್​. ಈ ಕಂಪನಿಯು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಖಾದ್ಯ ತೈಲ ಮತ್ತು ಗೃಹಬಳಕೆಯ ಗ್ರಾಹಕ ಸರಕುಗಳ (FMCG) ವ್ಯವಹಾರದಲ್ಲಿದೆ.
ಮಾರ್ಚ್ ತ್ರೈಮಾಸಿಕ ಫಲಿತಾಂಶದ ಮೊದಲು ಮಂಗಳವಾರ ಷೇರುಗಳು ಅದಾನಿ ವಿಲ್ಮರ್ ಷೇರುಗಳ ಬೆಲೆ ಮೇಲೆ 4.21% ರಷ್ಟು ಏರಿಕೆಯಾಗಿ 357.60 ರೂ. ತಲುಪಿದೆ. ಏತನ್ಮಧ್ಯೆ, ಬ್ರೋಕರೇಜ್ ಸಂಸ್ಥೆಯಾದ ನುವಾಮಾ, ಈ ಷೇರುಗಳಿಗೆ 480 ರೂ. ಗುರಿ ಬೆಲೆಯನ್ನು ನೀಡಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಗೆ ಬಂಪರ್ ಲಾಭ: ಟಾಟಾ ಗ್ರೂಪ್​ ಷೇರು ಖರೀದಿಸಿದರೆ ಲಾಭದಾಯಕವೇ?

ಷೇರು ಬೆಲೆ 11ರಿಂದ 570 ರೂಪಾಯಿಗೆ ಏರಿಕೆ: ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 52 ಲಕ್ಷ

ಅದಾನಿ ಕಂಪನಿ ತ್ರೈಮಾಸಿಕ ಲಾಭದಲ್ಲಿ 13% ಕುಸಿತ: ಷೇರು ಖರೀದಿಸಿ ಎನ್ನುತ್ತಾರೆ ತಜ್ಞರು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four − 1 =
Remember me
