ಮುಂಬೈ:ವಿನ್ಸೋಲ್ ಇಂಜಿನಿಯರ್ಸ್ ಐಪಿಒ ಷೇರು ಮಾರುಕಟ್ಟೆಯಲ್ಲಿ ಅಬ್ಬರಿಸಲಿವೆ. ವಿನ್ಸೋಲ್ ಇಂಜಿನಿಯರ್ಸ್ ಷೇರುಗಳನ್ನು ಮಂಗಳವಾರ ಮೇ 14 ರಂದು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು. ಸದ್ಯ ಈ ಷೇರುಗಳ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಅಗಾಧವಾಗಿದ್ದು, 265 ಪ್ರತಿಶತದಷ್ಟು ಲಾಭದೊಂದಿಗೆ ಮಾರುಕಟ್ಟೆಯಲ್ಲಿ ಈ ಷೇರುಗಳು ಪಟ್ಟಿ ಆಗಬಹುದು ಎಂದು ಸೂಚಿಸುತ್ತದೆ.
ವಿನ್ಸೋಲ್ ಇಂಜಿನಿಯರ್ಸ್ ಐಪಿಒ ಅನ್ನು 6ನೇ ಮೇ 2024 ರಂದು ಚಂದಾದಾರಿಕೆಗಾಗಿ ತೆರೆಯಲಾಯಿತು. ಮೇ 9 ರವರೆಗೆ ಬಿಡ್​ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ವಿನ್ಸೋಲ್ ಇಂಜಿನಿಯರ್ಸ್​ ಸಾರ್ವಜನಿಕ ವಿತರಣೆಯ ಒಟ್ಟು ಗಾತ್ರ 23.36 ಕೋಟಿ ರೂ. ಇದೆ.
ಐಪಿಒದಲ್ಲಿ ವಿನ್ಸೋಲ್ ಇಂಜಿನಿಯರ್ಸ್ ಷೇರಿನ ಬೆಲೆ 75 ರೂ. ಇದೆ. ಈ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ 199 ರೂ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅಂದರೆ, ಈ ಷೇರುಗಳ ಬೆಲೆ ಗ್ರೇ ಮಾರ್ಕೆಟ್​ನಲ್ಲಿ ಅಂದಾಜು 274 ರೂ. ಇದೆ. ಹೀಗಾಗಿ, ಐಪಿಒದಲ್ಲಿ ಕಂಪನಿಯ ಷೇರುಗಳನ್ನು ಹಂಚಿಕೆ ಮಾಡಿದ ಹೂಡಿಕೆದಾರರಿಗೆ ಲಿಸ್ಟಿಂಗ್‌ನಲ್ಲಿ ಶೇಕಡಾ 265 ಕ್ಕಿಂತ ಹೆಚ್ಚಿನ ಲಾಭ ದೊರೆಯಬಹುದಾಗಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಕಂಪನಿಯ ಷೇರುಗಳನ್ನು ಸ್ಮಾಲ್​ ಆ್ಯಂಡ್​ ಮೀಡಿಯಂ ಎಂಟರ್​ಪ್ರೈಸಸ್​ ಅಡಿಯಲ್ಲಿ ಪಟ್ಟಿ ಮಾಡಲಾಗುವುದು. ವಿನ್ಸೋಲ್ ಇಂಜಿನಿಯರ್ಸ್ ಪವನ ಮತ್ತು ಸೌರ ವಿದ್ಯುತ್ ಉತ್ಪಾದನಾ ಉದ್ಯಮದಲ್ಲಿ ತೊಡಗಿಸಿಕೊಂಡಿದೆ.
ವಿನ್ಸೋಲ್ ಇಂಜಿನಿಯರ್ಸ್ ಐಪಿಒ ಒಟ್ಟು 682.14 ಪಟ್ಟು ಚಂದಾದಾರಿಕೆಯಾಗಿದೆ. ಕಂಪನಿಯ ಐಪಿಒನಲ್ಲಿ ಚಿಲ್ಲರೆ ಹೂಡಿಕೆದಾರರ ಕೋಟಾ 780.15 ಪಟ್ಟು ಚಂದಾದಾರಿಕೆಯಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರ (NII) ವಿಭಾಗದಲ್ಲಿ, 1087.81 ಪಟ್ಟು ಚಂದಾದಾರಿಕೆ ಆಗಿದೆ.ಅರ್ಹ ಸಾಂಸ್ಥಿಕ ಖರೀದಿದಾರರ (QIB) ಕೋಟಾದಲ್ಲಿ 207.23 ಪಟ್ಟು ಚಂದಾದಾರಿಕೆಯಾಗಿದೆ. ಕಂಪನಿಯಲ್ಲಿ ಪ್ರವರ್ತಕರ ಪಾಲು ಈ ಮೊದಲು 100% ಇತ್ತು. ಇನ್ನು ಮುಂದೆ ಇದು 72.99% ಆಗಲಿದೆ.

ರುಚಿಕಟ್ಟಾದ ಹಣ್ಣು ಪಡೆಯಲು ಬಾಳೆಗೊನೆಯನ್ನು ಮಾಗಿಸುವ ನೈಸರ್ಗಿಕ ವಿಧಾನ: ಅಜ್ಜಿಯ ವಿಡಿಯೋ ವೈರಲ್​

ಚುನಾವಣೆ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಏರಿಕೆಯಾಗಲಿದೆ; ಈಗ ಕುಸಿದಿರುವಾಗಲೇ ಖರೀದಿಸಿ: ಗೃಹ ಸಚಿವ ಅಮಿತ್ ಶಾ ಹೀಗೆ ಸಲಹೆ ನೀಡಿದ್ದೇಕೆ?

ಸದ್ಯ ಕುಸಿತ ಕಂಡ ಟಾಟಾ ಷೇರು ಬೆಲೆ: 1250 ರೂಪಾಯಿ ಗುರಿಯೊಂದಿಗೆ ಖರೀದಿಸಲು 21 ತಜ್ಞರ ಸಲಹೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 + seventeen =
Remember me
