ಹೈದರಾಬಾದ್​:ಬರೋಬ್ಬರಿ 1 ಕೋಟಿ ರೂ. ಲಂಚ ಪಡೆಯುವಾಗ ತೆಲಂಗಾಣದ ತಹಸೀಲ್ದಾರ್​ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಮೆಡ್ಚಲ್​-ಮಲ್ಕಜ್​ಗಿರಿ ಜಿಲ್ಲೆಯ ಕೇಸರ ಮಂಡಲದಲ್ಲಿ ತಹಸೀಲ್ದಾರ್​ ಅಥವಾ ಮಂಡಲ ಕಂದಾಯ ಅಧಿಕಾರಿಯಾಗಿರುವ ಎರ್ವ ಬಾಲರಾಜು ನಾಗರಾಜು ಎಂಬ ಭ್ರಷ್ಟ ಅಧಿಕಾರಿ ರಿಯಲ್​ ಎಸ್ಟೇಟ್​ ಡೀಲರ್​ಗಳ ಬಳಿ ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಜಮೀನು ವಿವಾದವನ್ನು ಬಗೆಹರಿಸಿಕೊಡಲು ಸುಮಾರು 2 ಕೋಟಿ ರೂ.ಗೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವ್ಯಕ್ತಿಯನ್ನು ಬೆತ್ತಲೆ ಓಡಿಸಿದ ಹೆಣ್ಣು ಹಂದಿಗೆ ಮರಣದಂಡನೆ ಶಿಕ್ಷೆ: ವರ್ಷದ ಕೊನೆಗೆ ಹಂದಿಯ ಅಂತ್ಯ!
ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನು ವಿವಾದದಲ್ಲಿತ್ತು. ಗ್ರಾಮದ ಕೆಲವರು ಕೋರ್ಟಿನಲ್ಲಿ ದಾವೆ ಹೂಡಿ ತಮ್ಮ ಪರವಾಗಿ ಮಾಡಿಕೊಂಡಿದ್ದರು. ಆದಾಗ್ಯೂ, ರಿಯಲ್​ ಎಸ್ಟೇಟ್​ ಡೀಲರ್​ಗಳ ಪರವಾಗಿ ಜಮೀನು ಮಾಡಿಕೊಡುವುದಾಗಿ ಹೇಳಿ ಅವರಿಗೆ ತಹಸೀಲ್ದಾರ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.​
Keesara Tahsildar Erva Balraju Nagaraju was caught red-handed by the Anti Corruption Bureau while accepting over Rs 1.10 crore as bribe for an official favour. Look at all that money.#Telanganapic.twitter.com/HUlLNGUa2n
— Paul Oommen (@Paul_Oommen)August 14, 2020

ಡೀಲರ್​ಗಳು ಹಾಗೂ ತಹಸೀಲ್ದಾರ್​ ನಡುವಿನ ರಹಸ್ಯ ಒಪ್ಪಂದದ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಹೈದರಾಬಾದ್​ನ ಎಎಸ್​ ರಾವ್​ ನಗರದ ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇವರೊಂದಿಗೆ ಇಬ್ಬರು ರಿಯಲ್​ ಎಸ್ಟೇಟ್​ ಡೀಲರ್​ಗಳಾದ ಶ್ರೀನಾಥ್​ ಮತ್ತು ಅಂಜಿ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೆ, ಗ್ರಾಮದ ಸಹಾಯಕ ಕಂದಾಯ ಅಧಿಕಾರಿ ಸಾಯಿರಾಜ್​ ಸಹ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ:VIDEO| ಹಾಡಹಗಲಲ್ಲೇ ಲವರ್​ನಿಂದ ಕಿಡ್ನಾಪ್​ ಆಗಿದ್ದ ಯುವತಿ ಪತ್ತೆ: ಕಾರು ಬಿಟ್ಟು ಪ್ರಿಯಕರ ಪರಾರಿಯಾಗಿದ್ದೇಕೆ?
ಎರಡು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಅದರ ಭಾಗವಾಗಿ ಒಂದು ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಮನೆಯನ್ನು ಹುಡುಕಾಡಿದಾಗ ಹೆಚ್ಚುವರಿಯಾಗಿ 28 ಲಕ್ಷ ರೂ. ಪತ್ತೆಯಾಗಿದೆ. ಅಲ್ಲದೆ, ಭಾರಿ ಮೌಲ್ಯದ ಚಿನ್ನ ಮತ್ತು ಲಾಕರ್​ ಕೀ ಸಹ ಪತ್ತೆಯಾಗಿದೆ ಎಂದು ಎಸಿ ಡಿಸಿಪಿ ಸೂರ್ಯನಾರಾಯಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಮನೆಗೆ ಇಟ್ಟ ಬೆಂಕಿಯಲ್ಲಿ ಸುಟ್ಟಿದ್ದೆಷ್ಟು? ದೋಚಿದ್ದೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
