ನವದೆಹಲಿ:ಕೆಟ್ಟದ್ದನ್ನು ಸುಟ್ಟು ಹಾಕಬೇಕು ಎಂಬ ಮಾತಿನಂತೆ ಇಲ್ಲೊಂದು ಕಡೆ ಪೊಲೀಸರು ಅದನ್ನು ಅಕ್ಷರಶಃ ಜಾರಿಗೆ ತಂದಿದ್ದಾರೆ. ಅಂದರೆ 2,362 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ಸುಟ್ಟು ನಾಶ ಮಾಡಿದ್ದಾರೆ.
18.24 ಕೆಜಿ ಹೆರಾಯ್ನ್, 753.04 ಕೆಜಿ ಮಾದಕ ಮಾತ್ರೆ ಸೇರಿ ಒಟ್ಟು 934 ಕೆ.ಜಿ. ತೂಕದ ಮಾದಕ ವಸ್ತುಗಳನ್ನು ಈ ಪೊಲೀಸರು ಸುಟ್ಟು ಹಾಕಿದ್ದಾರೆ. ಜೂ.26ರಂದು ವಿಶ್ವ ಮಾದಕ ವಸ್ತು ದಿನದ ಆಚರಣೆ ಹಿನ್ನೆಲೆಯಲ್ಲಿ ಮುಂಚಿತವಾಗಿ ಇಂಥದ್ದೊಂದು ಕೆಲಸವನ್ನು ಮಾಡಿದ್ದಾರೆ.
ಅಂದಹಾಗೆ ಇದು ಮಿಜೋರಾಂ ರಾಜ್ಯದಲ್ಲಿ ನಡೆದಿರುವುದು. ಇಲ್ಲಿ ಗೃಹಸಚಿವ ಹಾಗೂ ಡಿಜಿಪಿ ಅವರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳು ಇಲ್ಲಿನ ಐಜ್ವಾಲ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿನ ಇನ್​ಸಿನೆರೇಟರ್​ನಲ್ಲಿ (ತ್ಯಾಜ್ಯವನ್ನು ಸುಟ್ಟುಹಾಕುವ ಫರ್ನೇಸ್​ನಲ್ಲಿ) ಹಾಕಿ ಸುಟ್ಟುಹಾಕಿದ್ದಾರೆ. ಹೀಗೆ ಸುಟ್ಟುಹಾಕಲಾಗಿರುವ ಮಾದಕವಸ್ತುಗಳ ಒಟ್ಟು ಮೌಲ್ಯ ಅಂತಾರಾಷ್ಟ್ರೀಯ ಮಾರ್ಕೆಟ್​ನಲ್ಲಿ 2,362 ಕೋಟಿ ರೂ. ಎನ್ನಲಾಗಿದೆ.
ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
