ಲಖನೌ:ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚುತ್ತಿದ್ದು, ಜನಜೋಈವನ ಸಂಪೂರ್ಣವಾಗಿ ಅಸ್ಯವ್ಯಸ್ತಗೊಂಡಿದೆ. ಇದೀಗ ಪ್ರವಾಹ ನೀರಿನಲ್ಲಿ ಬಸ್ಸೊಂದು ಸಿಲುಕಿ 25ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದ ಸ್ಥಿತಿ ತಲುಪಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್​ ಎಂಬ ಪ್ರದೇಶದಲ್ಲಿ ನಡೆದಿದೆ.
ಕೊಟವಾಲಿ ಕಾಲೋಚಿತ ನದಿಯ ನೀರಿನ ಹರಿವು ಹೆಚ್ಚಳವಾದ ಪರಿಣಾಮ ಹರ್ದಿವಾರ್​-ಬಿಜ್ನೋರ್​ ನಡುವೆ ಸಂಚರಿಸುವ ಬಸ್​ ಮಂಡವಾಲಿ ಎಂಬ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ಕಂಡು ಬರುತ್ತದೆ.
Bus with 25 passengers stuck in water flow in Mandawali region of UP's Bijnor due to sudden rise in water levels in Kotawali seasonal river on Hardiwar-Bijnor road. Efforts on to prevent overturning of the vehicle using a crane.pic.twitter.com/FVDZKf868B
ಇದನ್ನೂ ಓದಿ:ನಿರಂತರ ಮಳೆಯಿಂದಾಗಿ ಭೂ ಕುಸಿತ; ಮೃತರ ಸಂಖ್ಯೆ 21ಕ್ಕೆ ಏರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರವಾಹದಲ್ಲಿ ಬಸ್​ ಸಿಲುಕಿದ್ದು, ಕೆಲ ಪ್ರಯಾಣಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಿಟಕಿ ಮೂಲಕ ಟಾಪ್​ ಮೇಲೆ ಹತ್ತಿದ್ದಾರೆ. ಇನ್ನು ಕೆಲವರು ಅಸಹಾಯಕ ಸ್ಥಿತಿಯಲ್ಲಿ ಬಸ್​ ಒಳಗೆ ಕುಳಿತಿರುವುದು ಕಂಡು ಬರುತ್ತದೆ.
ಇತ್ತ ಸೇತುವೆ ಮೇಲೆ ಜನರು ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಕ್ರೇನ್​ ಬಳಸಿ ಬಸ್​ ಪಲ್ಟಿಯಾಗದೆ ಇರದಂತೆ ತಡೆದಿದ್ದಾರೆ. ಇತ್ತ ಪ್ರಯಾಣಿಕರಯು ತಮನ್ನು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + seventeen =
Remember me
