ಮುಂಬೈ :ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 13 ವರ್ಷದ ಬಾಲಕಿಯನ್ನು ‘ಸೆಕ್ಸ್​ ಬಗ್ಗೆ ಏನಾದರೂ ತಿಳಿದಿದೆಯೆ?’ ಎಂದು ಪ್ರಶ್ನಿಸಿದ್ದ ಬಸ್​ ಕಂಡಕ್ಟರ್​ಗೆ ಮುಂಬೈನ ವಿಶೇಷ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಚಂದ್ರಕಾಂತ್ ಸುದಾಮ್ ಕೋಲಿ ಎಂಬುವವನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 12 ರಡಿ ಅಪರಾಧಿ ಎಂದು ತೀರ್ಮಾನಿಸಿರುವ ಕೋರ್ಟ್​, ಆತನ ಮೇಲೆ 15,000 ರೂ.ಗಳ ದಂಡವನ್ನು ಕೂಡ ವಿಧಿಸಿದೆ.
ಮುಂಬೈನ ಸಬರ್ಬ್​ನ ನಿವಾಸಿಯಾದ ಸಂತ್ರಸ್ತ ಬಾಲಕಿಯು ಸರ್ಕಾರಿ ಬಸ್​ನಲ್ಲಿ ಪ್ರತಿದಿನ ಬೆಳಿಗ್ಗೆ ಶಾಲೆಗೆ ಪ್ರಯಾಣಿಸುತ್ತಿದ್ದಳು. ಜುಲೈ 2018 ರಲ್ಲಿ ಒಂದು ದಿನ ಬಸ್ಸಿನ ಹಿಂದಿನ ಸೀಟಿನಲ್ಲಿ ಕೂತಿದ್ದ ಅವಳ ಬಳಿ ಬಂದ ಆರೋಪಿ ಕೋಲಿ, ಅವಳ ಪಕ್ಕದಲ್ಲಿ ಕುಳಿತು ಅವಳಿಗೆ ಸೆಕ್ಸ್ ಬಗ್ಗೆ ಏನು ಗೊತ್ತು ಎಂದು ಕೇಳಿದ್ದ. ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದಾಗ ಮತ್ತೆ ಮುಂದಕ್ಕೆ ಹೋದ ಆತ, ಕೆಲವು ನಿಮಿಷ ಬಿಟ್ಟು ವಾಪಸ್ ಬಂದು ಮತ್ತೆ ಅದೇ ರೀತಿ ಪಕ್ಕದಲ್ಲಿ ಕುಳಿತು ಪ್ರಶ್ನಿಸಿದ್ದ. ಆಕೆ ಏನೂ ಉತ್ತರಿಸದೆ, ತನ್ನ ಸ್ಟಾಪ್​ ಬಂದಾಗ ಬಸ್ಸಿನಿಂದಿಳಿದು ಹೋದಳು ಎನ್ನಲಾಗಿದೆ.
ಇದನ್ನೂ ಓದಿ:ಬಂಟ್ವಾಳದಲ್ಲಿ ಆವರಣ ಗೋಡೆ ಕುಸಿದು ಮನೆ ಜಖಂ
ಬಾಲಕಿಯು ತನ್ನ ಸ್ನೇಹಿತೆಯೊಂದಿಗೆ ಬಸ್​ ಕಂಡಕ್ಟರ್​ನ ವರ್ತನೆ ಬಗ್ಗೆ ಹೇಳಿಕೊಂಡಳು. ಆದರೆ ತನ್ನ ತಾಯಿಗೆ ಈ ಈ ಬಗ್ಗೆ ಏನೂ ಹೇಳದೆ ಬಸ್ಸಿನಲ್ಲಿ ಶಾಲೆಗೆ ಹೋಗುವುದಿಲ್ಲ ಎಂದಷ್ಟೇ ಹೇಳಿದಳು. ನಂತರ ಸ್ನೇಹಿತೆಯಿಂದ ವಿಷಯ ತಿಳಿದ ತಾಯಿ, ಬಸ್​ ಡಿಪೋಗೆ ಹೋಗಿ ಕಂಡಕ್ಟರ್ ಯಾರೆಂದು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಮುಂಬೈನ ನೆಹರೂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.(ಏಜೆನ್ಸೀಸ್​)
ಎರಡು ಮಕ್ಕಳು ಹೊಂದಿದವರಿಗೆ ಹೆಚ್ಚಿನ ಇಂಕ್ರಿಮೆಂಟು, ಗೃಹ ಖರೀದಿ ಸೌಕರ್ಯ!
ಜುಲೈ 12, 13 ರಂದು ರೆಡ್ ಅಲರ್ಟ್! ಕರಾವಳಿ, ಮಲೆನಾಡಲ್ಲಿ ಹೆಚ್ಚು ಮಳೆ


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten − six =
Remember me
