ಗ್ವಾಲಿಯರ್​​ :ಜನರಿಂದ ತುಂಬಿದ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದು ಮೂವರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಿಂದ ವರದಿಯಾಗಿದೆ. ದೆಹಲಿಯಿಂದ ಮಧ್ಯಪ್ರದೇಶದ ತಿಕಮ್​ಗಡ್​-ಛತರ್​ಪುರ್​ಗೆ ಹೋಗುತ್ತಿದ್ದ ಬಸ್​ನಲ್ಲಿ ಬಹುತೇಕ ವಲಸೆ ಕಾರ್ಮಿಕರೇ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಸ್ಸಿನ ಒಳಗೆ ಜನರು ತುಂಬಿದ್ದರಲ್ಲದೆ, ಬಸ್ಸಿನ ಮೇಲೆ ಕೂತು ಕೂಡ ಹಲವರು ಪ್ರಯಾಣ ಮಾಡುತ್ತಿದ್ದರು. ದೆಹಲಿಯಿಂದ ತೀಕಮ್​​ಗಡಕ್ಕೆ ಬಸ್​ ಕಂಡಕ್ಟರ್ ಒಬ್ಬ ಪ್ರಯಾಣಿಕರಿಗೆ 700 ರೂ. ನಂತೆ ಹೆಚ್ಚು ಹಣ ಪಡೆದಿದ್ದ ಎನ್ನಲಾಗಿದೆ. ಗ್ವಾಲಿಯರ್-ಝಾನ್ಸಿ ಹೆದ್ದಾರಿಯಲ್ಲಿರುವ ಜೌರಸಿ ಘಾಟ್​ನಲ್ಲಿ ಟರ್ನ್​ ತೆಗೆದುಕೊಳ್ಳುವಾಗ ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಸ್ಸು ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ
ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಲ್ಲದೆ ಎಂಟು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗ್ವಾಲಿಯರ್​ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇತರ ಪ್ರಯಾಣಿಕರನ್ನು ಅನ್ಯ ಬಸ್​ಗಳಲ್ಲಿ ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ.
“ಚಾಲಕನೂ ಸೇರಿದಂತೆ ಬಸ್​ನ ಎಲ್ಲ ಸಿಬ್ಬಂದಿ ನಿನ್ನೆ ರಾತ್ರಿ ರಾಜಸ್ಥಾನದ ಢೋಲ್​​ಪುರ್​ನಲ್ಲಿ ಊಟ ಮಾಡಿದ ನಂತರ ಮದ್ಯ ಸೇವಿಸಿದ್ದರು. ಢೋಲ್​ಪುರ್​ನಲ್ಲೇ ಒಂದು ಟ್ರಕ್​ಗೆ ಬಸ್​ ಗುದ್ದಿತು. ಆಗ ಏನೂ ಸಮಸ್ಯೆಯಾಗಲಿಲ್ಲ. ಆದರೆ ಗ್ವಾಲಿಯರ್ ತಲುಪುವ ವೇಳೆಗೆ ಚಾಲಕನಿಗೆ ಹಿಡಿತ ತಪ್ಪಿ ವಾಹನ ಪಲ್ಟಿ ಹೊಡೆಯಿತು” ಎಂದು ದುರ್ಘಟನೆಗೊಳಗಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗಣಪತ್​ಲಾಲ್ ಎಂಬುವರು ಹೇಳಿದ್ದಾರೆ.
ಕರೊನಾ ಸೋಂಕು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ದೆಹಲಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಯಿತು. ಆತಂಕಕ್ಕೀಡಾಗಿರುವ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ದೆಹಲಿ ಬಸ್​ ನಿಲ್ದಾಣಗಳಲ್ಲಿ ಜಮಾಯಿಸಿರುವ ದೃಶ್ಯಗಳು ಕಾಣಬರುತ್ತಿವೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | “ಎಲ್ಲಿಗೆ ಹೋಗುತ್ತಿದ್ದೀರಿ ?” ಕೇಳುತ್ತಿದ್ದಾರೆ ಗರ್ಭಿಣಿ ಪೊಲೀಸ್ ಅಧಿಕಾರಿ !

“ಯಾವುದೇ ರಾಜ್ಯವೂ ಸಂಪೂರ್ಣ ಲಾಕ್‌ಡೌನ್‌ ವಿಧಿಸುವುದಿಲ್ಲ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
