ನವದೆಹಲಿ:ರಾಜ್ಯದ ರಾಜಧಾನಿಯಲ್ಲಿ ಎಲ್ಲಿಗಾದರೂ ಟೈಮ್​ಗೆ ಸರಿಯಾಗಿ ತಲುಪಲು ಆಗಿಲ್ಲವೆಂದರೆ ಮೊದಲಿಗೆ ನೆರವಿಗೆ ಬರುವುದೇ ಬಸ್​ ಲೇಟಾಯ್ತು ಎಂಬ ನೆಪ. ಅರ್ಥಾತ್ ಸಿಕ್ಕಾಪಟ್ಟೆ ಟ್ರಾಫಿಕ್​ ಎಂಬ ನೆವ. ಇನ್ನು, ‘ನಮ್​ ಟೈಮ್​ಗೆ ಬಸ್​ ಬರುತ್ತಾ? ಬಸ್​ ಬರೋ ಟೈಮ್​ಗೆ ನಾವು ಹೋಗ್ಬೇಕು’ ಎನ್ನೋ ಮಾತು ಕೂಡ ಆಗಾಗ ಕೇಳೇ ಇರುತ್ತೇವೆ. ಅದಾಗ್ಯೂ ಇಲ್ಲೊಂದು ಕಡೆ ಶಾಲಾ ಬಾಲಕನಿಗೊಬ್ಬನಿಂದಾಗಿ ಬಸ್ ಬರೋ ಟೈಮೇ ಬದಲಾಗಿದೆ!
ಸಾರಿಗೆ ಸಂಸ್ಥೆಯೊಂದು ಹೀಗೆ ಬಾಲಕನೊಬ್ಬನ ಮಾತಿಗೆ ಬೆಲೆ ಕೊಟ್ಟು ವೇಳಾಪಟ್ಟಿ ಬದಲಿಸಿಕೊಂಡಿದ್ದಕ್ಕೆ ನೆಟ್ಟಿಗರು ಅಧಿಕಾರಿಗಳ ಬಗ್ಗೆ, ಸಂಸ್ಥೆಯ ಕುರಿತು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಶಾಲಾ ಬಾಲಕ ಮಾಡಿದ ಒಂದು ಟ್ವೀಟ್​ಗೆ ಸಾರಿಗೆ ಸಂಸ್ಥೆ ತ್ವರಿತವಾಗಿ ಸ್ಪಂದಿಸಿದೆ.
ಇದನ್ನೂ ಓದಿ:ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…
ಒಡಿಶಾದ ಭುವನೇಶ್ವರದ ಸಾಯಿ ಅನ್ವೇಶ್ ಎಂಬ ಈ ಬಾಲಕ ಜ. 9ರಂದು ಸರಣಿ ಟ್ವೀಟ್​ ಮಾಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ‘ಸರ್ ನಾನು ಭುವನೇಶ್ವರದ ಎಂಬಿಎಸ್​ ಪಬ್ಲಿಕ್​ ಸ್ಕೂಲ್ ವಿದ್ಯಾರ್ಥಿ. ನಾನು ‘ಮೊ ಬಸ್’ನಲ್ಲಿ ದಿನಾ ಹೋಗುತ್ತಿದ್ದೇನೆ. ಇತ್ತೀಚೆಗೆ ಬಸ್ ಸಮಯ ಬದಲಾಗಿದೆ. ನಾನು 7.30ಕ್ಕೆ ಶಾಲೆಯಲ್ಲಿರಬೇಕು. ಆದರೆ ನಮ್ಮ ರೂಟ್​ ನಂ-13ರ ಬಸ್​ ಲಿಂಗಿಪುರದಿಂದ ಬೆಳಗ್ಗೆ 7.40ಕ್ಕೆ ಹೊರಡುತ್ತೆ. ಹೀಗಾಗಿ ನನಗೆ ಶಾಲೆಗೆ ತಡವಾಗುತ್ತಿದೆ. ಈ ಬಗ್ಗೆ ನೀವು ಸ್ಪಂದಿಸಿ ಸಮಸ್ಯೆ ಪರಿಹರಿಸಿ’ ಎಂದು ಟ್ವಿಟರ್​ನಲ್ಲಿ ಕೇಳಿಕೊಂಡಿದ್ದ.
ಇದನ್ನೂ ಓದಿ:ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?
@CRUT_BBSR@arunbothraRespected Sir,I want to state that I am a student of MBS public school, Bhubaneswar. I use Mo Bus as my daily transportation means to go to school. Nowadays the timing of the buses are changed.
— Sai Anwesh Amrutam Pradhan (@AnweshSai)January 8, 2021

@CRUT_BBSR@arunbothraMy reporting time at school is sharp at 7:30 AM. But unfortunately the first bus of route no-13 leaves at 7:40 AM from Lingipur. As a result I will be late for my school. And for this reason I am facing a lot of problems.
— Sai Anwesh Amrutam Pradhan (@AnweshSai)January 8, 2021

Dear Sai#MoBusmoves with love of commuters like you. The timing of your bus will be changed from Monday. The first bus will start at 7 AM. You won't be late for school.
With affection from entire team of@CRUT_BBSR.https://t.co/kimd85bXIg
— Arun Bothra 🇮🇳 (@arunbothra)January 9, 2021

ಕ್ಯಾಪಿಟಲ್ ರೀಜನ್​ ಅರ್ಬನ್ ಟ್ರಾನ್ಸ್​ಪೋರ್ಟ್ ಭುವನೇಶ್ವರ್ (CRUT) ಇದಕ್ಕೆ ಸಕಾರಾತ್ಮಕವಾಗಿ ಹಾಗೂ ಶೀಘ್ರವಾಗಿ ಸ್ಪಂದಿಸಿದೆ. ಸಾಯಿ ನಿನ್ನ ಕೋರಿಕೆಯನ್ನು ನಾವು ಪರಿಗಣಿಸಿದ್ದು ಸಂಬಂಧಪಟ್ಟ ವಿಭಾಗಕ್ಕೆ ಕಳಿಸಿ ಸಾಧ್ಯವೇ ಎಂದು ಪರಿಶೀಲಿಸಲು ಹೇಳಿದ್ದೇವೆ ಎಂದು ಸಂಸ್ಥೆ ತಕ್ಷಣ ಪ್ರತಿಕ್ರಿಯಿಸಿದೆ. ಅಲ್ಲದೆ ಐಪಿಎಸ್ ಅಧಿಕಾರಿ ಹಾಗೂ ಕ್ರಟ್​ ಎಂಡಿ ಕೂಡ ಪ್ರತಿಕ್ರಿಯಿಸಿ, ಸಾಯಿ.. ನಿಮ್ಮಂಥ ಪ್ರಯಾಣಿಕರ ಪ್ರೀತಿಯಿಂದಲೇ ನಮ್ಮ ಮೊ ಬಸ್ ಸಂಚರಿಸುತ್ತಿದೆ. ಬಸ್​ ಟೈಮಿಂಗ್ ಸೋಮವಾರದಿಂದಲೇ ಬದಲಾಗಲಿದೆ. ಅಂದಿನಿಂದ ಅಲ್ಲಿಂದ ನಮ್ಮ ಮೊದಲ ಬಸ್​ ಬೆಳಗ್ಗೆ ಏಳಕ್ಕೆ ಹೊರಡಲಿದೆ, ನಿಮಗೆ ಇನ್ನುಮುಂದೆ ಶಾಲೆಗೆ ತಡವಾಗುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
