ನವದೆಹಲಿ:ಭಾರತೀಯ ವಾಯುಯಾನದ ಅಗ್ರಗಣ್ಯ ಸಂಸ್ಥೆ ಏರ್ ಇಂಡಿಯಾವು ದೇಶದ ಮೊಟ್ಟಮೊದಲ ಏರ್‌ಬಸ್ ಎ 350-900 ದೈತ್ಯ ವಿಮಾನವನ್ನು ಸೇರ್ಪಡೆ ಮಾಡಿಕೊಂಡಿದೆ. ಫ್ರಾನ್ಸ್‌ನ ಟೌಲೌಸ್‌ನಲ್ಲಿರುವ ಏರ್‌ಬಸ್ ತಯಾರಿಸಿದ ಈ ವಿಮಾನವು ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಇದನ್ನೂ ಓದಿ:ಅಟಲ್​ರ ಸಮರ್ಪಣಾ ಮನೋಭಾವ ಸ್ಫೂರ್ತಿಯಾಗಬೇಕು: ಪ್ರಧಾನಿ ಮೋದಿವಿಮಾನವನ್ನು ವಿಟಿ-ಜೆಆರ್‌ಎ ಎಂದು ನೋಂದಾಯಿಸಲಾಗಿದೆ, ಅದು ಶಶನಿವಾರ ಮಧ್ಯಾಹ್ನ 1:46 ಕ್ಕೆ ದೆಹಲಿಗೆ ಬಂದಿತು.ಇದರಲ್ಲಿ ತರಬೇತಿ ಪಡೆದ ಏರ್​ ಇಂಡಿಯಾದ ಹಿರಿಯ ಕಮಾಂಡರ್ ಕ್ಯಾಪ್ಟನ್ ಮೋನಿಕಾ ಬಾತ್ರಾ ವೈದ್ಯ ವೀಕ್ಷಕರಾಗಿ ಬಂದಿಳಿದರು. ಭಾರತೀಯ ವಾಯುಯಾನದ ಪುನರುಜ್ಜೀವಕ್ಕೆ ವೇಗ ನೀಡುವಲ್ಲಿ ಏರ್ ಇಂಡಿಯಾ ಮುಂಚೂಣಿಯಲ್ಲಿದೆ, ಅದರಂತೆ ಈ ಹೊಸ ವೈಡ್‌ಬಾಡಿ ಎ350 ವಿಮಾನವು ವಿಮಾನಯಾನ ಸಂಸ್ಥೆಗಳಲ್ಲೇ ಮೊದಲು ಪಡೆದ ಸಂಸ್ಥೆ ಏರ್​ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದೇ ಅಲ್ಲ ಇನ್ನೂ 5 ವಿಮಾನಗಳು ಸೇವೆಗೆ ಸಿದ್ಧವಿರುವುದಾಗಿ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದರು.
“ಈ ಕ್ಷಣವು ಏರ್ ಇಂಡಿಯಾದಲ್ಲಿ ನಮ್ಮೆಲ್ಲರಿಗೂ ಕೆಂಪು ಅಕ್ಷರದ ದಿನವನ್ನು ಸೂಚಿಸುತ್ತದೆ. A350 ಕೇವಲ ಲೋಹ ಮತ್ತು ಎಂಜಿನ್‌ಗಳಲ್ಲ; ಇದು ನಮ್ಮ ಏರ್‌ಲೈನ್‌ನ ನಿರಂತರ ರೂಪಾಂತರ ಮತ್ತು ಹೊಸ ಮಾನದಂಡಗಳನ್ನು ಹೊಂದಿಸುವ ನಮ್ಮ ಬದ್ಧತೆಯ ಕಡೆಗೆ ಎಲ್ಲಾ ಏರ್ ಇಂಡಿಯಾ ಉದ್ಯೋಗಿಗಳ ನಿರಂತರ ಪ್ರಯತ್ನಗಳ ಸಾಕಾರವಾಗಿದೆ ಎಂದರು.
ಈ ವಿಮಾನವು ವಿಶ್ವ ವೇದಿಕೆಯಲ್ಲಿ ಭಾರತೀಯ ವಾಯುಯಾನದ ಪುನರುತ್ಥಾನದ ಘೋಷಣೆಯಾಗಿದೆ. ಹೊಸ ಯುಗದ ಹಾರಾಟದ ಸಂಕೇತವಾಗಿ ಎ350 ನಮ್ಮ ತಡೆರಹಿತ ಮಾರ್ಗಗಳಲ್ಲಿ ವಿಶ್ವ ದರ್ಜೆಯ, ದೀರ್ಘಾವಧಿಯ ಪ್ರಯಾಣ ಸೇವೆ ಒದಗಿಸಲಿದೆ. ಇದು ಸರಿಸಾಟಿಯಿಲ್ಲದ ಸೌಕರ್ಯವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಏರ್ ಇಂಡಿಯಾದ ಎ350 ವಿಮಾನವು ಮುಂದಿನ ಜನವರಿಯಿಂದ ವಾಣಿಜ್ಯ ಮತ್ತು ಪ್ರಯಾಣಿಕರ ಸೇವೆಯನ್ನು ಪ್ರವೇಶಿಸುತ್ತದೆ, ಆರಂಭದಲ್ಲಿ ದೇಶೀಯವಾಗಿ ಕಾರ್ಯನಿರ್ವಹಿಸುತ್ತದೆ, 20 ಸರ್ವೀಸ್​ಗಳಲ್ಲಿ ಈ ವಿಮಾನಗಳು ಸಂಚರಿಸುತ್ತವೆ. ಬಳಿಕ ವಿಶ್ವದ ನಾನಾ ದೇಶಗಳಿಗೆ ದೀರ್ಘಾವಧಿಯ ಹಾರಾಟವನ್ನು ನಡೆಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ವಿಮಾನವನ್ನು ಮೂರು ವರ್ಗದ ಕ್ಯಾಬಿನ್ ಕಾನ್ಫಿಗರೇಶನ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ವಿನ್ಯಾಸಗೊಳಿಸಿದೆ. 316 ಆಸನಗಳ ವ್ಯವಸ್ಥೆಯಿದೆ. ಪೂರ್ಣ-ಫ್ಲಾಟ್ ಹಾಸಿಗೆಗಳೊಂದಿಗೆ 28 ​​ಖಾಸಗಿ ಬಿಸಿನೆಸ್ ಕ್ಲಾಸ್ ಸೂಟ್‌ಗಳು, 24 ಪ್ರೀಮಿಯಂ ಎಕಾನಮಿ ಸೀಟುಗಳು, ಅದರೊಂದಿಗೆ 24 ಪ್ರೀಮಿಯಂ ಎಕನಾಮಿ ಸೀಟ್​ಗಳು, ಕ್ಯಾಬಿನ್​ನಲ್ಲಿ 264 ಎಕಾನಮಿ ಸೀಟುಗಳು ಇರಲಿವೆ.
‘ಬೆಥ್​ಲೆಹೆಮ್​’ನಲ್ಲಿಲ್ಲ ಕ್ರಿಸ್‌ಮಸ್ ಸಡಗರ..!’ಪ್ರೇತ’ನಗರಿಯಂತಾಯ್ತು ಕ್ರಿಸ್ತ ಜನ್ಮಭೂಮಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 20 =
Remember me
