ನವದೆಹಲಿ:ಕರೊನಾ ವೈರಸ್​ನಿಂದಾಗಿ ಭಾರತದ ಆಮದು ಪ್ರಮಾಣ ಶೇ. 28 ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ನಿರ್ವಣ, ಆಟೋಮೊಬೈಲ್, ರಾಸಾಯನಿಕಗಳು ಹಾಗೂ ಔಷಧ ಕ್ಷೇತ್ರ ಅತಿಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಇಲೆಕ್ಟ್ರಿಕಲ್ ಯಂತ್ರಗಳು ಹಾಗೂ ಯಾಂತ್ರಿಕ ಉಪಕರಣಗಳು, ಜೈವಿಕ ರಾಸಾಯನಿಕ, ಪ್ಲಾಸ್ಟಿಕ್, ಆಪ್ಟಿಕಲ್ ಮತ್ತು ಸರ್ಜಿಕಲ್ ಉಪಕರಣಗಳು ಚೀನಾ ಆಮದನ್ನು ಹೆಚ್ಚಾಗಿ ಅವಲಂಬಿಸಿವೆ.
ಈ ವಸ್ತುಗಳು ಭಾರತದ ಒಟ್ಟು ಆಮದಿನ ಶೇ. 28 ಭಾಗ ಆವರಿಸಿದ್ದು, ಸಂಭಾವ್ಯ ನಿಷೇಧದಿಂದ ಭಾರಿ ತೊಂದರೆ ಎದುರಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ವಣ, ಸಾರಿಗೆ, ರಾಸಾಯನಿಕಗಳು ಮತ್ತು ಯಂತ್ರ ತಯಾರಿಕೆ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಸಾಧ್ಯತೆ ದಟ್ಟವಾಗಿದೆ. ಭಾರತದ ವಾಣಿಜ್ಯದ ಮೇಲೆ ಕರೊನಾದ ಒಟ್ಟಾರೆ ಪರಿಣಾಮ ತೀವ್ರವಾಗಿ ಇರದು ಎನ್ನಲಾಗಿದೆ. ಭಾರತದ ರಫ್ತಿನಲ್ಲಿ ಚೀನಾದ ಪಾಲು ಕೇವಲ ಶೇ.5 ಆಗಿರುವುದರಿಂದ ಅದರ ಮೇಲೆ ಹೆಚ್ಚು ಪರಿಣಾಮ ಆಗಲಿಕ್ಕಿಲ್ಲ. ಆದರೆ ರಫ್ತಿನಲ್ಲಿ ಹೆಚ್ಚು ಪಾಲು ಹೊಂದಿರುವ ಜೈವಿಕ ರಾಸಾಯನಿಕಗಳು ಹಾಗೂ ಹತ್ತಿ ತೀಕ್ಷ್ಣ ಪರಿಣಾಮ ಎದುರಿಸಬೇಕಾಗಬಹುದು. ಫೆಬ್ರವರಿ 17ರಂದು ಚಾಂದ್ರಮಾನ ಹೊಸ ವರ್ಷದ ರಜೆ ಮುಕ್ತಾಯವಾಗಲಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೆ ಕಾರ್ಖಾನೆಗಳು ಕೈಗಾರಿಕಾ ಕೇಂದ್ರಗಳು ಮುಚ್ಚಿದ್ದು ಅಪಾರ ಆರ್ಥಿಕ ನಷ್ಟ ಆಗಲಿದೆ.
ಭಾರತ ಚೀನಾದಿಂದ ಶೇ. 40 ಇಲೆಕ್ಟ್ರಿಕಲ್ ಯಂತ್ರಗಳನ್ನು ಆಮದು ಮಾಡಿಕೊಳ್ಳುತ್ತದೆ. ಹಾಂಗ್​ಕಾಂಗ್​ನ ಆಮದನ್ನೂ ಸೇರಿ ಈ ಪ್ರಮಾಣ ಶೇ. 57 ಆಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಅರ್ಧಕ್ಕಿಂತ ಹೆಚ್ಚಿನ ಇಲೆಕ್ಟ್ರಿಕಲ್ ಯಂತ್ರಗಳ ಆಮದು ತೊಂದರೆಗೆ ಸಿಲುಕಲಿದೆ. ಚೀನಾದಿಂದ ಮೂರನೇ ಒಂದು ಭಾಗದಷ್ಟು ಮಷಿನರಿಗಳು ಮತ್ತು ಯಾಂತ್ರಿಕ ಉಪಕರಣಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಸುದೀರ್ಘ ಅವಧಿಗೆ ನಿಷೇಧ ಹೇರಿದರೆ ಶೇ. 30ರಿಂದ 40 ಯಂತ್ರೋಪಕರಣಗಳ ಆಮದು ಸಂಕಷ್ಟಕ್ಕೆ ಈಡಾಗಲಿದೆ. ಬಿಕ್ಕಟ್ಟು ನಾಲ್ಕು ತಿಂಗಳು ಮುಂದುವರಿದರೆ ದೇಶೀಯ ಔಷಧ ತಯಾರಿಕೆ ಕಂಪನಿಗಳು ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಕಚ್ಚಾ ಸಾಮಗ್ರಿ ಆಕ್ಟಿವ್ ಫಾರ್ವಸ್ಯುಟಿಕಲ್ ಇನ್​ಗ್ರೇಡಿಯಂಟ್ಸ್ (ಎಪಿಐ) ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಕ್ರಿಮಿನಾಶಕಗಳು, ರೋಗನಿರೋಧಕಗಳು, ವಿಟಾಮಿನ್, ಡಯಾಬಿಟಿಸ್-ನಿರೋಧಕ ಔಷಧಗಳಲ್ಲಿ ಬಳಸುವ ಕೆಲವು ಎಪಿಐಗಳಿಗೆ ಚೀನಾವನ್ನೇ ಅವಲಂಬಿಸಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
