ಕೊಚ್ಚಿ:ದುಬಾರಿ ಗಿಫ್ಟ್​ ನೀಡುವಿಕೆ ವಿರಳವೇನಲ್ಲ. ಆದರೆ ಅದು ಸಾಮಾನ್ಯವಾಗಿ ಪ್ರೇಮಿಗಳ ನಡುವೆ, ದಂಪತಿಯ ಮಧ್ಯೆ ಅಥವಾ ಮನೆಯೊಳಗಿನ ಮಂದಿಗಷ್ಟೇ ನೀಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಕಂಪನಿಯೊಂದರ ಮಾಲೀಕ ತನ್ನ ಉದ್ಯೋಗಿಗೇ ಬಲು ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.
ಹೌದು.. ಕಂಪನಿಯೊಂದರ ಮಾಲೀಕ ತನ್ನ ಉದ್ಯೋಗಿಗೆ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಹೊಚ್ಚಹೊಸ ಬೆಂಝ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ದುಬಾರಿ ಗಿಫ್ಟ್​ ಕೊಟ್ಟ ಕೇರಳದ ಆ ಉದ್ಯಮಿಯ ಹೆಸರು ಎ.ಕೆ.ಶಾಜಿ. ಮೈಜಿ ಎಂಬ ಗೃಹಬಳಕೆ ಉತ್ಪನ್ನಗಳ ಮಳಿಗೆಯೊಂದರ ಮಾಲೀಕರಾಗಿರುವ ಇವರು ತನ್ನ ಉದ್ಯೋಗಿ ಸಿ.ಆರ್.ಅನೀಶ್ ಎಂಬವರಿಗೆ ಬೆಂಝ್ ಕಾರು ಗಿಫ್ಟ್ ಆಗಿ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸರನ್ನೂ ಬಿಡದ ಫೇಸ್​ಬುಕ್​ ಫೇಕ್​ ಅಕೌಂಟ್​; ಜಿಲ್ಲಾ ಪೊಲೀಸ್ ಹೆಸರಲ್ಲೇ ನಕಲಿ ಖಾತೆ!
ನಾನು ಮೈಜಿ ಕಂಪನಿ ಶುರು ಮಾಡುವುದಕ್ಕೂ ಮೊದಲೇ ಅನೀಶ್ ನನ್ನೊಂದಿಗಿದ್ದರು. ಕಳೆದ 22 ವರ್ಷಗಳಿಂದ ನನ್ನ ಜತೆಗಿರುವ ಇವರು ಉದ್ಯೋಗಿಯಲ್ಲ, ನನ್ನ ಪಾಲುದಾರರ ಥರ. ಇವರು ಮಾರ್ಕೆಟಿಂಗ್, ಮೇಂಟೆನೆನ್ಸ್ ಮತ್ತು ಬಿಜಿನೆಸ್ ಡೆವೆಲಪ್​ಮೆಂಟ್ ಸೇರಿ ಕಂಪನಿಯ ಹಲವಾರು ವಿಭಾಗಗಳಲ್ಲಿ ಪರಿಶ್ರಮ ವಹಿಸಿ ದುಡಿದಿದ್ದಾರೆ ಎಂದು ಶಾಜಿ ಹೇಳಿದ್ದಾರೆ.
ಇದನ್ನೂ ಓದಿ:ಪೊಲೀಸ್ ಕಾನ್​ಸ್ಟೆಬಲ್​ ಮತ್ತು ಪತ್ನಿ ಇಬ್ಬರಿಂದಲೂ ಆತ್ಮಹತ್ಯೆ ಯತ್ನ; ಸಾವಿಗೀಡಾದ ಹೆಂಡತಿ, ಪೇದೆ ಪರಿಸ್ಥಿತಿ ಚಿಂತಾಜನಕ
ಅನೀಶ್ ಒಂದು ದಿನವೂ ನಾನು ಬೇಸರ ಪಡುವಂತೆ ಮಾಡಲಿಲ್ಲ. ಆಧಾರಸ್ತಂಭದಂತೆ ನನ್ನ ಜತೆಗೇ ಇದ್ದು, ಸಹೋದರ ಪ್ರೀತಿಯನ್ನು ತೋರಿದ್ದಾರೆ. ಅವರಿಲ್ಲದಿದ್ದರೆ ನಾನು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಶಾಜಿ ಹೇಳಿಕೊಂಡಿದ್ದಾರೆ. ನೌಕರರ ಬಗ್ಗೆ ಈ ರೀತಿಯ ಪ್ರೀತಿ ತೋರುವ ಇಂಥ ಮಾಲೀಕರ ಜತೆ ಕೆಲಸ ಮಾಡುವುದೇ ಒಂದು ಉತ್ತಮ ಅನುಭವ ಅವಕಾಶ ಎಂದು ಅನೀಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೆಬ್ಬಾವನ್ನು ಹಿಡಿದೆಳೆದು ಅದರ ಮೇಲೆ ಬಸ್​ ಹತ್ತಿಸಿ ಹಿಂಸಿಸಿ ಕೊಂದು ಸಂಭ್ರಮಿಸಿದ ಜನರು!

ಇನ್ನು ಸಬ್ ರಿಜಿಸ್ಟ್ರಾರ್​ ಕಚೇರಿ ರಾತ್ರಿ ವರೆಗೂ ಓಪನ್; ಉತ್ತಮ ಸೇವೆ ಒದಗಿಸಲು ಸಮಯ ವಿಸ್ತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
