ಲಾಕ್​ಡೌನ್​ನಿಂದಾಗಿ ಸಾಲದ ಸುಳಿಗೆ ಸಿಕ್ಕ ಸಂಭಾವಿತ ಉದ್ಯಮಿಯೊಬ್ಬ, ಯೂ-ಟ್ಯೂಬ್​ ನೋಡಿ ಕಳ್ಳತನ ಕಲಿತು, ತಾನು ಸಾಲ ಮಾಡಿದ್ದ ಬ್ಯಾಂಕನ್ನೇ ​ಲೂಟಿ ಮಾಡಿ, ಆ ಹಣದಿಂದಲೇ ಸಾಲದ ಮರು ಪಾವತಿ ಮಾಡಿದ್ದಾನೆ!
ಉತ್ತಮ ಹಿನ್ನೆಲೆಯ ಕುಟುಂಬಕ್ಕೆ ಸೇರಿರುವ 25 ವರ್ಷ ವಯಸ್ಸಿನ ಸೌಮ್ಯರಂಜನ್​ ಜೇನಾ ಎಂಬ ಈ ಉದ್ಯಮಿ, ಸೀರೆ-ಶೂ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ. ಲಾಕ್​ಡೌನ್​ಗೂ ಮೊದಲು ಮಾಸಿಕ 9 ಲಕ್ಷ ರೂ. ವಹಿವಾಟು ಇತ್ತು. ಆದರೆ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್​ ಇಂಡಿಯಾಗಳಲ್ಲಿ ಒಟ್ಟು 19 ಲಕ್ಷ ರೂ. ಸಾಲ ಮಾಡಿದ್ದ. ಆದರೆ ಮರುಪಾವತಿ ಕಷ್ಟವಾದ ಹಿನ್ನೆಲೆಯಲ್ಲಿ, ಯೂ-ಟ್ಯೂಬ್​ನಲ್ಲಿ ಕಳ್ಳತನದ ತಂತ್ರ ಕಲಿತು ಕದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾದ ಟಂಗಿಬಂತ ಗ್ರಾಮದ ಈತ ಇನ್​ಫೊ ಸಿಟಿ ಏರಿಯಾದ ಇಂಡಿಯನ್ ಓವರ್​ಸೀಸ್​ ಬ್ಯಾಂಕ್​ನಲ್ಲಿ ಸೆ. 7ರಂದು, ಬ್ಯಾಂಕ್​ ಆಫ್​ ಇಂಡಿಯಾದ ಬರಿಮುಂಡ ಶಾಖೆಯಲ್ಲಿ ಸೆ. 28ರಂದು ಒಟ್ಟು 12 ಲಕ್ಷ ರೂ. ಲೂಟಿ ಮಾಡಿದ್ದ.ಮೊದಲಿಗೆ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ಗೆ ನುಗ್ಗಿ ಟಾಯ್​ ಗನ್​ನಿಂದ ಹೆದರಿಸಿ ಲೂಟಿ ಮಾಡಿ ಬಂದ ಹಣದಿಂದ ನಿಜವಾದ ಪಿಸ್ತೂಲ್​ ಖರೀದಿಸಿದ್ದ. ಬಳಿಕ ಬ್ಯಾಂಕ್​ ಆಫ್​ ಇಂಡಿಯಾಗೆ ಹೋಗಿ ಪಿಸ್ತೂಲ್​ನಿಂದ ಬೆದರಿಸಿ ಲೂಟಿ ಮಾಡಿದ್ದ. ಬಂಧಿತ ಉದ್ಯಮಿಯಿಂದ ಹತ್ತು ಲಕ್ಷ ರೂ. ಹಾಗೂ ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
