ನಾಗ್ಪುರ:ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.
ಇದೀಗ ಪ್ರಕರಣ ಒಂದರಲ್ಲಿ ಉದ್ಯಮಿಯೊಬ್ಬರು ಆನ್​ಲೈನ್​ ಗ್ಯಾಂಬ್ಲಿಂಗ್​​ ಗೀಳಿಗೆ ಬಿದ್ದು 58 ಕೋಟಿ ರೂಪಾಯಿ ಹಣ, ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಕಿಂಗ್​ಪಿನ್​ ಅನಂತ್​ ಅಲಿಯಾಸ್​ ಸೊಂತು ನವರತನ್​ ಜೈನ ಎಂಬುವವನ ವಿರುದ್ದ ಉದ್ಯಮಿ ದೂರು ನೀಡಿದ್ದು, ಈತ ಘಟನೆ ಬೆಳಕಿಗೆ ಬರುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್​ ಕಮಿಷನರ್​ ಅಮಿತೇಶ್​ ಕುಮಾರ್​ ಮೇಲ್ನೋಟಕ್ಕೆ ನೋಡುವುದಾದರೆ ಪ್ರಕರಣದ ಕಿಂಗ್ಪಿನ್​ ಅನಂತ್​ ಉದ್ಯಮಿಯೊಬ್ಬರಿಗೆ ಆನ್​ಲೈನ್​ ಗ್ಯಾಂಬ್ಲಿಂಗ್​ ಲಾಭದಾಯಕವಾಗಿದ್ದು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ಆಡುವಂತೆ ಹೇಳಿದ್ದಾನೆ. ಬಳಿಕ 8 ಲಕ್ಷ ರೂಪಾಯಿ ಹಣ ಪಡೆದು ವಾಟ್ಸ್​ಅಪ್​ನಲ್ಲಿ ಲಿಂಕ್​ ಒಂದನ್ನು ಕಳುಹಿಸಿದ್ದಾನೆ.
ಇದನ್ನೂ ಓದಿ:ಹಾರ್ನ್​ ಮಾಡಿದ್ದಕ್ಕೆ ಆಟೋ ಚಾಲಕನ ಹತ್ಯೆ
ಲಿಂಕ್​ ಓಪನ್​ ಮಾಡಿದ ಬಳಿಕ ಆನ್​ಲೈನ್​ ಗ್ಯಾಂಬ್ಲಿಂಗ್​ ಅಕೌಂಟ್​ನಲ್ಲಿ 8 ಲಕ್ಷ ರೂಪಾಯಿ ಜಮೆಯಾಗಿರುವುದಾಗಿ ತೋರಿಸಿದೆ. ಬಳಿಕ ಉದ್ಯಮಿ ಗೇಮ್​ ಆಡಲು ಶುರು ಮಾಡಿದ್ದು, 5 ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಆರೋಪಿ ಜೈನ್​ಗೆ ವಿಚಾರಿಸಿ ತನ್ನ ಹಣವನ್ನು ಹಿಂತಿರುಗಿಸುವಂತೆ ಉದ್ಯಮಿ ಕೇಳಿದಾಗ ಆತ ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿಯೂ ಪೊಲೀಸರಿಗೆ ದೂರು ದಾಖಲಿಸಿ ತಮಗಾದ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿ ಅನಂತ್​ ಮನೆ ಮೇಲೆ ದಾಳಿ ಮಾಡಿ ಕೋಟಿಗಟ್ಟಲ್ಲೇ ಹಣ, 4 ಕೆಜಿ ಚಿನ್ನದ ಬಿಸ್ಕೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ದುಬೈಗೆ ಪರಾರಿಯಾಗಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ನಾಗ್ಪುರ ಪೊಲೀಸ್​ ಕಮಿಷನರ್​ ಅಮಿತೇಶ್​ ಕುಮಾರ್ ತಿಳಿಸಿದ್ದಾರೆ. ‘
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
