ನವದೆಹಲಿ:ವಂದೇ ಭಾರತ್​ ರೈಲು ನಿರಂತರವಾಗಿ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿಯಲ್ಲಿದೆ. ಒಮ್ಮೆ ಎಮ್ಮೆಗಳಿಗೆ ಢಿಕ್ಕಿಯಾಗಿ ಸುದ್ದಿಯಾದರೆ ಇನ್ನೊಮ್ಮೆ ಕಸದ ರಾಶಿಯಿಂದಾಗಿ ಸುದ್ದಿಯಾಗುತ್ತದೆ. ಇದೀಗ ವಂದೇ ಭಾರತ್ ರೈಲಿನಲ್ಲಿ ಧೂಳು ತಾಗಿದ ಕಾರ್ನ್​ಫ್ಲೇಕ್ಸ್​ನ ಬಗ್ಗೆ ಪ್ರಯಾಣಿಕರೊಬ್ಬರು ಟ್ವಿಟರ್​ ಮೂಲಕ ದೂರು ನೀಡಿದ್ದಾರೆ.
ವಿರೇಶ್​ ನರ್ಕರ್​ ಎನ್ನುವ ಉದ್ಯಮಿಯೊಬ್ಬರು ಶಿರಡಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಅವರು ಕಾರ್ನ್​ಫ್ಲೇಕ್ಸ್​ ಆರ್ಡರ್​ ಮಾಡಿದ್ದಾರೆ. ಕಾರ್ನ್​ಫ್ಲೇಕ್ಸ್​ ಮೆಲ್ಲುತ್ತಿರುವಾಗ ಸ್ವಚ್ಛತಾ ಕರ್ಮಿಗಳು ಬಂದು ಕಸ ತೆಗೆಯುತ್ತಿದ್ದರು. ಈ ಸಂದರ್ಭ ಹಾರಿದ ಧೂಳು ಇವರ ಕಾರ್ನ್​ಫ್ಲೇಕ್ಸ್​ ಪಾತ್ರೆಗೆ ಬಂದು ಬಿದ್ದಿದೆ. ಹೀಗಾಗಿ ಅಸಮಾಧಾನಗೊಂಡ ಉದ್ಯಮಿ ಟ್ವಿಟರ್​ ಮೂಲಕ ತಮ್ಮ ದೂರನ್ನು ದಾಖಲಿಸಿದರು.
ಈ ಬಗ್ಗೆ ರೈಲ್ವೇ ಇಲಾಖೆಯ ಟ್ವಿಟರ್​ ಹ್ಯಾಂಡಲ್​ ಉತ್ತರಿಸಿದ್ದು ದೂರನ್ನು ದಾಖಲಿಸಿಕೊಂಡಿರುವ ಬಗ್ಗೆ ಟ್ವೀಟ್​ ಮಾಡಿದೆ. ಉದ್ಯಮಿ ವೀರೇಶ್​, ತಮ್ಮ ದೂರನ ಜತೆಗೆ ಎರಡು ಸಲಹೆಗಳನ್ನೂ ನೀಡಿದ್ದಾರೆ. ಎಕ್ಸಿಕ್ಯೂಟಿವ್​ ಕ್ಲಾಸ್​ನ ಬೋಗಿ ರೈಲಿನ ಮಧ್ಯದಲ್ಲಿದ್ದು ಇದರಿಂದಾಗಿ ಇತರೆ ಬೋಗಿಗಳ ಜನರು ಇಲ್ಲಿಂದಲೇ ಸಂಚರಿಸುತ್ತಾರೆ. ಹೀಗಾಗಿ ಎಕ್ಸಿಕ್ಯೂಟಿವ್​ ಕ್ಲಾಸ್​ಅನ್ನು ಬೇರೆಡೆಗೆ ಸ್ಥಳಾಂತರಿಸಲು ಸಲಹೆ ನೀಡಿದ್ದಾರೆ.
ಇದರೊಂದಿಗೆ ತಮ್ಮ ಕಾರ್ನ್​ಫ್ಲೇಕ್ಸ್​ ಸಮಸ್ಯೆಯ ಬಗ್ಗೆಯೂ ಹೇಳಿಕೊಂಡಿದ್ದು ಕಸ ತೆಗೆಯಲು ಪೊರಕೆಯ ಬದಲು ವ್ಯಾಕ್ಯೂಮ್​ ಕ್ಲೀನರ್​ಗಳನ್ನು ಬಳಸಲು ಸಲಹೆ ನೀಡಿದ್ದಾರೆ. ಇಲ್ಲವಾದಲ್ಲಿ ಧೂಳು ಹಾರಿ ಆಹಾರದ ಮೇಲೆ ಕೂರುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಉತ್ತಮ ಅನುಭವ ಸಿಗುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
Travelling by Magnificat Vande Bharat express to Shirdi.Few problem that can be improved1) Executive Class is given in middle of train, hence other class people keep moving continuously and there is no privacy even after paying more. EC should be at front or back of train.pic.twitter.com/OfQiMoZXNS
Your complaint has been registered on RailMadad and complaint no. has been sent through SMS on your mobile no. You may track your complaint via this linkhttps://t.co/5jRBcotw4J-IRCTC Official
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
