ಗಾಂಧಿನಗರ:ವೈದ್ಯ ಗಂಡ ಟೀ ಕುಡಿಯಲು ಮನೆಗೆ ಬರಲಿಲ್ಲ ಅಂತಾ ಮನನೊಂದ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಗುಜರಾತಿನ ವಡೋದರಾದಲ್ಲಿ ಶುಕ್ರವಾರ ಸಂಜೆ ನಡೆದಿದೆ. 28 ವರ್ಷದ ಪತ್ನಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯ ಪತಿ ಮನೆ ಸಮೀಪದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ತನ್ನ ಪತಿಯನ್ನು ಟೀ ಕುಡಿಯಲು ಮನೆಗೆ ಕರೆದಿದ್ದಾಳೆ. ಆದರೆ, ಕೆಲಸದ ಒತ್ತಡ ಕಾರಣ ಬರಲು ಸಾಧ್ಯವಿಲ್ಲ ಎಂದು ಆತ ಪತ್ನಿಗೆ ತಿಳಿಸಿದ್ದಾರೆ.
ಇದಾದ ಬಳಿಕ ಮಹಿಳೆ, ತನ್ನ ಗಂಡನಿಗೆ ವಿಡಿಯೋ ಕಾಲ್ ಮಾಡಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಲು ಫ್ಯಾನ್‌ಗೆ ಶಾಲು ಹಾಕಿ, ಕುಣಿಕೆ ಹಾಕಿರುವುದಾಗಿ ತೋರಿಸಿದ್ದಾಳೆ. ಇದರಿಂದ ಗಾಬರಿಗೊಂಡ ವೈದ್ಯ ತಕ್ಷಣ ಮನೆಗೆ ಬಂದು ನೋಡಿದಾಗ ಪತ್ನಿ ನೇಣು ಬಿಗಿದುಕೊಂಡಿರುವ ಭೀಕರ ದೃಶ್ಯ ಕಾಣಿಸುತ್ತದೆ.
ನಂತರ ಪತ್ನಿಯನ್ನು ಕುಣಿಕೆಯಿಂದ ಕೆಳಗಡೆ ಇಳಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅದೃಷ್ಟವಶಾತ್​ ಆತ್ಮಹತ್ಯೆ ಯತ್ನದಿಂದ ಮಹಿಳೆ ಬದುಕುಳಿದಿದ್ದಾಳೆ.
ಘಟನೆಯ ವಿವರಗಳನ್ನು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಮಹಿಳೆಯೊಂದಿಗೆ ಇನ್ನೂ ಮಾತನಾಡಬೇಕಾಗಿದೆ ಎಂದು ವಡೋದರಾ ತಾಲೂಕು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೆಯು ಗೋಹಿಲ್ ಹೇಳಿದ್ದಾರೆ. ಮಹಿಳೆಯ ಪಾಲಕರು ಯಾವುದೇ ದೂರು ದಾಖಲಿಸಿಲ್ಲ.(ಏಜೆನ್ಸೀಸ್​)
ನಾನು ಈ ಸಿನಿಮಾದಿಂದಲೇ ಪ್ರೆಗ್ನೆಂಟ್​ ಆದೆ! ನಾನೆಂದಿಗೂ ಅವರನ್ನು ಮರೆಯಲ್ಲ ಎಂದ ನಟಿ ಪೂರ್ಣಾ

ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

ಡೇವಿಸ್​ ಕಪ್​ನಲ್ಲಿ ಭಾರತಕ್ಕೆ 4-0 ಜಯ; 60 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಅರಳಿದ ತ್ರಿವರ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
