ಜೈಪುರ:ತನ್ನ ಪ್ರೀತಿಯ ಪತ್ನಿಗೆ ಇಲ್ಲೊಬ್ಬ ಮಹಾಶಯ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ!
ಹೌದು, ರಾಜಸ್ಥಾನದ ಅಜ್ಮೇರ್​ನ ಧರ್ಮೇಂದ್ರ ಅನಿಜಾ ಅವರು ತನ್ನ 8ನೇ ವಿವಾಹ ವಾಷಿರ್ಕೋತ್ಸವದ ಪ್ರಯಕ್ತ ಪ್ರೀತಿಯ ಪತ್ನಿ ಸಪ್ನಾಗಾಗಿ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿದ್ದಾರೆ.
ಇದೇ ಡಿಸೆಂಬರ್​ 24ರಂದು ವಿವಾಹ ವಾಷಿರ್ಕೋತ್ಸವ ನಡೆದಿದ್ದು, ಚಂದ್ರನ ಮೇಲೆ ಜಾಗ ಖರೀದಿಸಿದ ಪತ್ರಗಳನ್ನು ಪತ್ನಿ ಸಪ್ನಾಗೆ ಧರ್ಮೇಂದ್ರ ಅನಿಜಾ ಹಸ್ತಾಂತರಿಸಿದ್ದಾರೆ. ಸಪ್ನಾಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸಿದ್ದೆ. ಹೀಗಾಗಿ ಚಂದ್ರನಲ್ಲಿ 3 ಎಕರೆ ಭೂಮಿ ಖರೀದಿಸಿ ನೀಡಿದ್ದೇನೆ ಎಂದು ಧರ್ಮೇಂದ್ರ ಅನಿಜಾ ತಿಳಿಸಿದ್ದಾರೆ. ಲೂನಾ ಸೊಸೈಟಿ ಇಂಟರ್​ನ್ಯಾಷನಲ್​ ಮೂಲಕ ಭೂಮಿ ಖರೀದಿಸಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಕೂಡ 2018ರಲ್ಲಿ ಚಂದ್ರನ ಮೇಲೆ ಜಾಗ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಬೋಧ್​ ಗಯಾ ನಿವಾಸಿ ನೀರಜ್​ ಕುಮಾರ್​ ಎಂಬುವವರೂ ಕೆಲ ತಿಂಗಳ ಹಿಂದೆ ತಮ್ಮ ಜನ್ಮದಿನದ ನಿಮಿತ್ತ ಚಂದ್ರನಲ್ಲಿ 1 ಎಕರೆ ಜಾಗ ಖರೀದಿಸಿ ಸುದ್ದಿಯಾಗಿದ್ದರು.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − three =
Remember me
