ನವದೆಹಲಿ:ಈಗ ವಸ್ತುಗಳನ್ನು ಖರೀದಿಸಿ, ಮುಂದೆ ಎಂದಾದರೂ ಹಣ ಪಾವತಿಸಿ ಎಂಬ ಯೋಜನೆ ಅಮೆರಿಕದಲ್ಲಿ ಭಾರಿ ಜನಪ್ರಿಯಗೊಳ್ಳುತ್ತಿದೆ. ಕಡಿಮೆ ಬೆಲೆಯ ವಸ್ತುಗಳನ್ನು ಆನ್​ಲೈನ್​ನಲ್ಲಿ ಖರೀದಿಸಿ, ಆಫ್ಟರ್​ಪೇ ಎಂಬ ಸಂಸ್ಥೆಯ ಸಹಾಯದಿಂದ ಪಾವತಿಸುವ ಮೊತ್ತವನ್ನು ಸಮಾನ ಮಾಸಿಕ ಕಂತಾಗಿ (ಇಎಂಐ) ಪರಿವರ್ತಿಸಿಕೊಳ್ಳಬಹುದು. ಆದರೆ ಈ ಸೌಲಭ್ಯ ಸದ್ಯ ಭಾರತದಲ್ಲಿ ಲಭ್ಯವಿಲ್ಲ. ಬದಲಿಗೆ ಅಮೆರಿಕದಲ್ಲಿ ಲಭ್ಯವಿದೆ.
ಕರೊನಾ ಲಾಕ್​ಡೌನ್​ನಿಂದಾಗಿ ಬಹುತೇಕ ಎಲ್ಲ ಉದ್ಯಮಗಳು ವಹಿವಾಟು ಇಲ್ಲದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಅವುಗಳನ್ನು ಈ ಸಂಕಷ್ಟದಿಂದ ಪಾರು ಮಾಡಲು ಆಫ್ಟರ್​ಪೇ ಸಂಸ್ಥೆ ಈಗ ಖರೀದಿಸಿ ಮುಂದೆ ಎಂದಾದರೂ ಹಣ ಪಾವತಿಸಿ ಯೋಜನೆಯನ್ನು ಜಾರಿಗೊಳಿಸಿದೆ.
ಈ ಸೌಲಭ್ಯವನ್ನು ಪಡೆದುಕೊಳ್ಳಲು ಮೊದಲು ಆಫ್ಟರ್​ಪೇ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಬಳಿಕ ನಿಮ್ಮ ಇಷ್ಟದ ಸಣ್ಣ ಮೊತ್ತದ ವಸ್ತುಗಳನ್ನು ಉದಾಹರಣೆಗೆ 20 ಸಾವಿರ ರೂ. (260 ಡಾಲರ್​) ಮೌಲ್ಯದ ವಸ್ತುವನ್ನು ಖರೀದಿಸಿದಾಗ ನಾಲ್ಕು ಬಡ್ಡಿರಹಿತ ಇಎಂಐಗಳನ್ನಾಗಿ ಅದನ್ನು ವಿಭಜಿಸಿ, ಹಣ ಪಾವತಿಸಲು ಸೂಚಿಸಲಾಗುತ್ತದೆ. ಇದನ್ನು ಮುಂದೆ ಎಂದಾದರೂ ಪಾವತಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ:ಚೀನಾ ಸೇನೆ ಹಿಂತೆಗೆತದ ಹಿಂದೆ ಆ 2 ಗಂಟೆಗಳ ವಿಡಿಯೋ ಕಾಲ್​
ಆನ್​ಲೈನ್​ ಶಾಪಿಂಗ್​ ಮಾಡುವವರಿಗೆ ಹಾಗೂ ಕೋವಿಡ್​-19 ಪಿಡುಗಿನಿಂದ ಭಾರಿ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಕಂಪನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಲ್ಲವೇ? ಹೌದು. ಮೊದಲ ಬಾರಿಯ ಗ್ರಾಹಕರು ತಮ್ಮಿಷ್ಟದ ವಸ್ತುವನ್ನು ಕೊಂಡು, ಇಎಂಐ ಪಾವತಿಸದೆ ವಂಚಿಸಬಹುದು. ಇದರಿಂದ ಕಂಪನಿಯಲ್ಲಿ ಅನುತ್ಪಾದಕ ಆಸ್ತಿಯ (ಎನ್​ಪಿಎ) ಪ್ರಮಾಣ ಹೆಚ್ಚಾಗುವ ಅಪಾಯುವೂ ಇದೆ.
ಸದ್ಯ ಆಫ್ಟರ್​ಪೇ ಸಂಸ್ಥೆ ಮಾರಾಟಗಾರರಿಂದ ಶೇ.4-6ರವರೆಗೆ ಕಮಿಷನ್​ ಪಡೆದುಕೊಳ್ಳುತ್ತದೆ. ಇದಿಷ್ಟೇ ಅದರ ಆದಾಯವಾಗಿರುತ್ತದೆ. ಗ್ರಾಹಕರು ಹಣ ಪಾವತಿಸಲು ಆರಂಭಿಸಿದ ಬಳಿಕ ಅದಕ್ಕೆ ಹೆಚ್ಚಿನ ಆದಾಯ ಬರುತ್ತದೆ.
ಸಚಿನ್​ ಪಂದ್ಯದ ಮೊದಲ ಎಸೆತ ಎದುರಿಸಲು ಇಷ್ಟ ಪಡುತ್ತಿರಲಿಲ್ಲ, ಕಾರಣ ಬಿಚ್ಚಿಟ್ಟ ಗಂಗೂಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 6 =
Remember me
